ಹಾಸನ: ದೈತ್ಯಾಕಾರದ ಒಂಟಿಸಲಗವೊಂದು (Elephant) ರೈಲ್ವೆ ಗೇಟ್ನ್ನು (Railway Gate) ಮುರಿದು ಹಾಕಿದ ಘಟನೆ ಸಕಲೇಶಪುರ (Sakaleshpur) ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ.
ನ.10ರ ರಾತ್ರಿ ವೇಳೆ ರೈಲ್ವೆ ಗೇಟ್ ಹಾಕಲಾಗಿತ್ತು. ಈ ವೇಳೆ, ಹಳಿ ದಾಟಲು ಬಂದ ಕಾಡಾನೆ ಗೇಟ್ ಮುರಿದು ಮುಂದೆ ಸಾಗಿದೆ. ಕಾಡಾನೆ ಗೇಟ್ ಮುರಿದು ಮುಂದೆ ಹೋಗುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆರ್ಎಫ್ಓ ಹೇಮಂತ್ ಕುಮಾರ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮರಿಗಳ ಜೊತೆ ಕಾಡಾನೆಗಳ ದಾಂಧಲೆ – ಸುಮಾರು 8 ಎಕರೆ ಪ್ರದೇಶದ ಕಾಫಿ ತೋಟ ನಾಶ
ಒಂಟಿ ಸಲಗದ ಓಡಾಟದಿಂದ ಹಸಿಡೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಗ್ರಾಮಸ್ಥರಿಗೆ ಕಾಡಾನೆ ಬಗ್ಗೆ ಇಟಿಎಫ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಕ್ಸಸ್; ಕಾಡಾನೆ ವಾಪಸ್ ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸಿದ ಅರಣ್ಯ ಇಲಾಖೆ
