– ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ದಾವಣಗೆರೆ: ಇಲ್ಲಿನ (Davanagere) ಕೆಟಿಜೆ ನಗರದ 8ನೇ ಕ್ರಾಸ್ನಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು (Transformer Blast) ಗುಜರಿ ಅಂಗಡಿ ಹಾಗೂ ಎರಡು ವಾಹನಗಳು ಸುಟ್ಟು ಭಸ್ಮವಾಗಿವೆ. ಟ್ರಾನ್ಸ್ಫಾರ್ಮರ್ ಪಕ್ಕದಲ್ಲಿದ್ದ ಮನೆಗಳಿಗೂ ಬೆಂಕಿ ಆವರಿಸಿದ್ದು, ಹಾನಿಯಾಗಿದೆ.
ಟ್ರಾನ್ಸ್ಫಾರ್ಮರ್ ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟ್ರಾನ್ಸ್ಫಾರ್ಮರ್ ಸ್ಫೋಟಗೊಳ್ಳುತ್ತಿದ್ದಂತೆ ಭಾರೀ ಪ್ರಮಾಣದ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದ್ದು, ಪಕ್ಕದಲ್ಲಿದ್ದ ಅಂಗಡಿ ಹಾಗೂ ವಾಹನಗಳಿಗೆ ಆವರಿಸಿದೆ. ಅಲ್ಲದೇ ಅಂಗಡಿಯ ಮೇಲಿದ್ದ ಕಟ್ಟಡಕ್ಕೂ ಬೆಂಕಿ ತಗುಲಿದೆ. ಇದನ್ನೂ ಓದಿ: ಬೈಕ್ ಅಡ್ಡಬಂದು ಟ್ರಾನ್ಸ್ಫಾರ್ಮರ್ಗೆ ಕಾರು ಡಿಕ್ಕಿ – ಚಾಲಕ ಪ್ರಾಣಾಪಾಯದಿಂದ ಪಾರು
ಭಾರೀ ಸ್ಫೋಟದಿಂದ ಬೆಚ್ಚಿಬಿದ್ದ ಜನ, ಬೆಂಕಿ ಕಂಡು ಹೆದರಿ ಓಡಿದ್ದಾರೆ. ಭಯದಿಂದ ಜನ ಓಡುವ ದೃಶ್ಯಗಳು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ನಂದಿಸಲು ಎರಡು ಗಂಟೆಗಳಿಗೂ ಅಧಿಕ ಕಾಲ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಈ ಅವಘಡದಲ್ಲಿ ವಾಹನ ಹಾಗೂ ಅಂಗಡಿಯನ್ನು ಕಳೆದುಕೊಂಡವರು ಕಣ್ಣಿರಿಟ್ಟಿದ್ದಾರೆ. ಇದನ್ನೂ ಓದಿ: ಅಥಣಿಯಲ್ಲಿ ಬೀದಿ ನಾಯಿಗಳ ಪಾಲಾದ ನವಜಾತ ಶಿಶು!
