ಮ್ಯಾಡ್ರಿಡ್: ಪಂದ್ಯದ ವೇಳೆ ಗೋಲ್ಕೀಪರ್ ಜೊತೆ ಡಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡಿದ್ದ ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಜೀಸಸ್ ಡಿ ಮಿಗುಯೆಲ್ (Jesus De Miguel) ಸಾವಿಗೀಡಾಗಿದ್ದಾರೆ.
ಸ್ಪ್ಯಾನಿಷ್ ಫುಟ್ಬಾಲ್ನ (Spanish Footballer) ಎರಡನೇ ವಿಭಾಗದ ಪಂದ್ಯವೊಂದರಲ್ಲಿ, ಎಫ್ಸಿ ಆಂಡೊರಾದ ಗೋಲ್ಕೀಪರ್ ಜೊತೆಗಾದ ಭೀಕರ ಡಿಕ್ಕಿಯಿಂದ ಗಂಭೀರ ಗಾಯಗೊಂಡಿದ್ದ ಟೆನೆರೈಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ ಮೃತಪಟ್ಟಿದ್ದಾರೆ ಎಂದು ಅವರ ಕ್ಲಬ್ ಮಂಗಳವಾರ ತಿಳಿಸಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ವಿದಾಯ
30 ವರ್ಷದ ಡಿ ಮಿಗುಯೆಲ್ ಅವರನ್ನು ಮೈದಾನದ ಮಧ್ಯಭಾಗದಲ್ಲಿ ಈಕ್ವೆಟೋರಿಯಲ್ ಗಿನಿಯಾ ತಂಡದ ಗೋಲ್ಕೀಪರ್ ಜೀಸಸ್ ಓವೊನೊ ಫೌಲ್ ಮಾಡಿದರು. ಈ ಗೋಲ್ಕೀಪರ್ ತಮ್ಮ ಗೋಲ್ ಪೋಸ್ಟ್ನಿಂದ ವೇಗವಾಗಿ ಹೊರಗೆ ಓಡಿಬಂದಿದ್ದರು.
ಪಂದ್ಯದ ಅಂತ್ಯದ ವೇಳೆ ಈ ಘಟನೆ ನಡೆಯಿತು. ತಕ್ಷಣ ಪಂದ್ಯವನ್ನು ರದ್ದು ಮಾಡಲಾಯಿತು. ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಕರೆದೊಯ್ಯುವಾಗ ಡಿ ಮಿಗುಯೆಲ್ ಅವರಿಗೆ ಹೃದಯ ಸ್ತಂಭನ (cardiac arrest) ಆಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೊನೇ ಪಂದ್ಯದಲ್ಲೂ ಬೆಂಚ್ ಕಾದ ವೈಭವ್ – ಎಲ್ಲರನ್ನೂ ಖುಷಿಪಡಿಸೋದು ನನ್ನ ಕೆಲಸ ಅಲ್ಲ ಎಂದ ಗಂಭೀರ್
