ಕೋಲಾರ: ಇಡೀ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ (Congress) ಅರಾಜಕತೆ ಸೃಷ್ಟಿ ಮಾಡಿದ್ದೇ ಆದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರುಗಳು ಕಾಂಗ್ರೆಸ್ ನಾಯಕರನ್ನ ತುಂಡು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಚ್ಚರ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿವಾದಿತ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿ (Kolar) `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮಾತಿನ ಬರದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ. ಬಳಿಕ ಕಾಂಗ್ರೆಸ್ ಅನ್ನ ತುಂಡು ತುಂಡಾಗಿ ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಜನ ಹೇಳುತ್ತಿದ್ದಾರೆ. ಅದನ್ನ ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನ.7 ರಿಂದ 11ರವರೆಗೆ ಬಿಂಡಿಗ ದೇವೀರಮ್ಮ ಜಾತ್ರಾ ಮಹೋತ್ಸವ – ರಕ್ಷಣಾ ತಂಡದಿಂದ ಮಾಕ್ ಡ್ರಿಲ್
ಎಸ್ಐಆರ್ ಹೆಸರಲ್ಲಿ ಅರಾಜಕಥೆ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದೆ, ಅದರ ವಿರುದ್ದ ನಮ್ಮ ಹೋರಾಟ. ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಅಗಬೇಕಿತ್ತು. ಅದು ಬಿಟ್ಟು ಬೆಲೆ ಏರಿಕೆಯ ನಿತ್ಯೋತ್ಸವ ಮಾಡಲು ಕಾಂಗ್ರೆಸ್ ಹೊರಟಿದೆ. ಇದನ್ನು ರಾಜ್ಯದ ಪ್ರತಿಯೊಬ್ಬರು ಖಂಡಿಸುತ್ತೇವೆ. ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ವಿಚಾರ ಸಿದ್ದರಾಮಯ್ಯ ಅವರನ್ನ ಹದ್ದುಬಸ್ತ್ನಲ್ಲಿ ಇಡಲು ಮಾಡುತ್ತಿರುವ ಹುನ್ನಾರ ಎಂದು ಆರೋಪಿಸಿದರು. ಇದನ್ನೂ ಓದಿ: ತೆಲಂಗಾಣದಲ್ಲಿ ಆಸ್ತಿ ವಿವಾದಕ್ಕೆ ಮಹಿಳೆಯ ಶಿರಚ್ಛೇದನ – ಪತಿಯ ಅಣ್ಣಂದಿರಿಂದಲೇ ಹತ್ಯೆ
