ಹಾಸನ: ಹಾಸನಾಂಬ ದೇವಿ (Hasanamba Jatra Mahotsav) ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು (Gold Bangle) ಕಂದಾಯ ಇಲಾಖೆ ಸಿಬ್ಬಂದಿ (Revenue Department Staff) ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ರಾಮನಗರದಿಂದ ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ರಮ್ಯಾ ಎಂಬ ಮಹಿಳೆ 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದು ಸಹೋದರಿಯೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. ದೇವಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ತೆರಳುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಚಿನ್ನದ ಬಳೆ ಕಳಚಿ ಬಿದ್ದಿತ್ತು. ಇದನ್ನೂ ಓದಿ: ಕಬ್ಬಿಗೆ 5,500 ದರ ನಿಗದಿಗೆ ಆಗ್ರಹ: ಬಾಗಲಕೋಟೆಯ ಗದ್ದನಕೇರಿ ಕ್ರಾಸ್ನಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಸುಮಾರು 30 ಗ್ರಾಂ ತೂಕದ, 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆ ಕಳೆದುಕೊಂಡಿದ್ದರಿಂದ ರಮ್ಯಾ ದೇವಾಲಯದ ಆವರಣದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಬಳೆ ಪತ್ತೆಯಾಗಿರಲಿಲ್ಲ. ಇದೇ ವೇಳೆ ಕಂದಾಯ ಇಲಾಖೆ ಸಿಬ್ಬಂದಿಗೆ ಚಿನ್ನದ ಬಳೆ ಸಿಕ್ಕಿತ್ತು. ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ, ದೇವಾಲಯದಲ್ಲಿ ಅನೌನ್ಸ್ ಮಾಡುತ್ತಿದ್ದ ಲಕ್ಷ್ಮೀನಾರಾಯಣ ಅವರಿಗೆ ಸಿಬ್ಬಂದಿ ಹಸ್ತಾಂತರಿಸಿದ್ದರು. ಇದನ್ನೂ ಓದಿ: ಸ್ಮಗ್ಲಿಂಗ್ ತಡೆಯಲು ಹೋಗಿದ್ದ ಬಿಎಸ್ಎಫ್ ಸಿಬ್ಬಂದಿ ಮೇಲೆ ಸ್ಥಳೀಯರಿಂದ ಹಲ್ಲೆ – 8 ಮಂದಿ ಅರೆಸ್ಟ್
ಲಕ್ಷ್ಮೀನಾರಾಯಣ ಅವರು ಮೈಕ್ನಲ್ಲಿ ಚಿನ್ನದ ಬಳೆ ಸಿಕ್ಕಿರುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ರಮ್ಯಾ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ತಮ್ಮ ಬಳೆಯನ್ನು ಗುರುತಿಸಿ ವಾಪಸ್ ಪಡೆದುಕೊಂಡು ಸಂತೋಷದಿಂದ ತೆರಳಿದ್ದಾರೆ. ಕಳೆದುಕೊಂಡಿದ್ದ ಚಿನ್ನದ ಬಳೆಯನ್ನು ಸುರಕ್ಷಿತವಾಗಿ ಮರಳಿಸುವ ಮೂಲಕ ಕಂದಾಯ ಇಲಾಖೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಬಸ್ ದರ ಏರಿಕೆ | ಪ್ರತಿ ಸ್ಟೇಜ್ಗೆ 10 ರೂ. ನಿಗದಿ – ಗುರುವಾರದಿಂದಲೇ ಪರಿಷ್ಕೃತ ಟಿಕೆಟ್ ದರ ಜಾರಿ ಸಾಧ್ಯತೆ
