– ಯುಪಿನಲ್ಲಿ 1 ಕೋಟಿ ಹಿಂದೂಗಳ ಮತ ಡಿಲೀಟ್ ಆಗಿದೆ; ಅಖಿಲೇಶ್ ಯಾದವ್
– ನಾವು ಸೋತಿಲ್ಲ, ಕುತಂತ್ರದಿಂದ ಸೋಲಿಸಿದ್ರು – ಮೋದಿ ವಿರುದ್ಧ ದೀದಿ ಕೆಂಡ
ನವದೆಹಲಿ: ಮೋದಿಯನ್ನು (PM Modi) ವಜಾ ಮಾಡಿದಾಗಲೇ ಪ್ರಜಾಪ್ರಭುತ್ವ ಉಳಿಯೋದು ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿ ಕಾರಿದರು.
ಎಸ್ಐಆರ್ ಅಕ್ರಮ (SIR Scam) ಆರೋಪದ ಹಿನ್ನೆಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹಮ್ಮಿಕೊಂಡಿರುವ ʻಚಲೋ ದಿಲ್ಲಿ ರಾಮಲೀಲಾʼ ರ್ಯಾಲಿಯನ್ನುದ್ದೇಶಿಸಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
हमें इन चोरों को सत्ता से बाहर करना है। मोदी को हटाएंगे तभी लोकतंत्र बचा पाएंगे।
📍रामलीला मैदान, दिल्ली https://t.co/xZaCC1QNgD
— Mallikarjun Kharge (@kharge) November 1, 2026
ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಮಾಡಿಕೊಂಡು ನಮ್ಮನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಾವು ಅದಕ್ಕೆ ಹೆದರುವುದಿಲ್ಲ, ನಾವು ಹೊರಾಟ ಮಾಡುವ ಜನರು. ಮೋದಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಜನರು ಈ ಸರ್ಕಾರವನ್ನ ಆಯ್ಕೆ ಮಾಡ್ತಿಲ್ಲ. ಮತ ಹಾಕುವ ಜನರನ್ನ ಇವರೇ ನಿರ್ಧರಿಸುತ್ತಿದ್ದಾರೆ. ಇತ್ತಿಚೆಗೆ ನಡೆದ ಎಲ್ಲ ಚುನಾವಣೆಗಳು ಕಳ್ಳತನದಿಂದ ನಡೆದಿವೆ. ಇಂತ ಕಳ್ಳರನ್ನ ಹೊರ ತೆಗೆಯಬೇಕಾಗಿದೆ. ಮೋದಿಯನ್ನ ವಜಾ ಮಾಡಿದಾಗಲೇ ಪ್ರಜಾಪ್ರಭುತ್ವ ಉಳಿಯೋದು ಅಂತಾ ಹೇಳಿದ್ರು.
ಮುಂದುವರಿದು… ದೇಶದಲ್ಲಿ ದಲಿತರ ಮತ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ರು. ಮೋದಿ ಅವರು ತಮ್ಮ ಚೇಲಾಗಳನ್ನ ಕೂರಿಸಿಕೊಂಡು ಮತ ಕಳವು ಮಾಡುತ್ತಿದ್ದಾರೆ. ಜ್ಞಾನೇಶ್ ಕುಮಾರ್ ಹೋಗುವ ತನಕ ನಾವು ರಸ್ತೆಗಳನ್ನ ಬಿಡಲ್ಲ. ಭೂಮಿಯೊಳಗೆ ಅಡಗಿದ್ರೂ ರಾಜೀನಾಮೆ ಪಡೆಯದೇ ಬಿಡಲ್ಲ.. ಆ ಶಕ್ತಿ ನಮಗೆ ಇದೆ ಎಂದು ಗುಡುಗಿದರು.
मोदी हमें डराने की लाख कोशिश कर लें, लेकिन INDIA गठबंधन के लोग डरने वाले नहीं, लड़ने वाले लोग हैं।
📍 रामलीला मैदान, दिल्ली https://t.co/kpl5rnZN8f
— Mallikarjun Kharge (@kharge) November 1, 2026
1 ಕೋಟಿ ಹಿಂದೂಗಳ ಮತ ಡಿಲೀಟ್
ಎಸ್ಪಿ ನಾಯಕ ಅಖಿಲೇಶ್ ಯಾದವ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಕ್ತಿಹೀನ ಮಾಡುವ ಪ್ರಯತ್ನ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ 1 ಕೋಟಿ ಹಿಂದೂಗಳ ಮತ ಕಡಿತವಾಗಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಭರವಸೆ ನೀಡುತ್ತಿದ್ದ ಇವರಿಗೆ ಕಾಶಿ ಜನರು ಉತ್ತರ ಕೊಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರಕ್ಕೆ ಡಬಲ್ ಜೀರೋ ನೀಡಿದ್ದಾರೆ ಎಂದು ಕುಟುಕಿದರು.
ಬಂಗಾಳದಲ್ಲಿ ಚುನಾವಣೆ ಲೂಟಿಯಾಗಿದೆ, ಲಕ್ಷಾಂತರ ಭದ್ರತಾ ಸಿಬ್ಬಂದಿ ನಿಯೋಜಿಸಿ ಬೆದರಿಕೆಯಲ್ಲಿ ಚುನಾವಣೆ ನಡೆಸಿದೆ. ಲಕ್ಷಾಂತರ ಜನರ ಮತಗಳನ್ನ ಕಡಿತಗೊಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಾವು ಸೋತಿಲ್ಲ, ಅವರು ಮತಕಳ್ಳತನ ಮಾಡಿದರು. ಸಮಾಜವಾದಿ ಪಕ್ಷದ ಮತದಾರರನ್ನು ಗುರುತಿಸಿ ಡಿಲೀಟ್ ಮಾಡಲಾಯಿತು. ಮತಕಳ್ಳತನದ ಬಗ್ಗೆ ನಾನು ಹಿಂದೆಯೂ ಧ್ವನಿ ಎತ್ತಿದೆ. ಯಾರ ವಿರುದ್ಧವೂ ತನಿಖೆ ನಡೆಯಲಿಲ್ಲ. ಅದ್ಯಾವ ನಿದ್ದೆ ಮಾತ್ರೆ ತಿಂದು ಚುನಾವಣಾ ಆಯೋಗ ಮಲಗಿದೆ ಗೊತ್ತಿಲ್ಲ. ಈಗ ಜನರು ತಿರುಗಿ ಬಿದ್ದ ಬಳಿಕ ತನಿಖೆ ಮಾಡುವುದಾಗಿ ಹೇಳುತ್ತಿದೆ. ಒಟ್ಟಿನಲ್ಲಿ ಮುಂದೆ ಬದಲಾವಣೆ ದಿನ ಬರಲಿದೆ, ಉತ್ತರ ಪ್ರದೇಶದಿಂದ ಆ ಬದಲಾವಣೆ ಶುರುವಾಗಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಮರಳುವುದಿಲ್ಲ. ರಾಮನ ದೇಣಿಗೆ ಕದ್ದವರ ವಿನಾಶವಾಗಲಿದೆ ಎಂದು ಹೇಳಿದರು.
ಬಿಜೆಪಿ ಕೇ ಸಾಥ್ ಸಬ್ ಕಾ ಸರ್ವ ನಾಶ ಶುರುವಾಗಿದೆ
ಇನ್ನೂ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿ, ನಾನು ಸಿಜೆಪಿಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಹೋರಾಟ ಶ್ಲಾಘನೀಯ. ಪಶ್ಚಿಮ ಬಂಗಾಳ ಎಸ್ಐಆರ್ಗೆ ತುತ್ತಾಗಿದೆ. ನಾವು ಬಿಡುವುದಿಲ್ಲ, ದೆಹಲಿಯಿಂದ ಬಂಗಾಳ ನಡೆಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಮರಳಿ ತರುತ್ತೇವೆ. ಚುನಾವಣಾ ವ್ಯವಸ್ಥೆಯನ್ನ ಜ್ಞಾನೇಶ್ ಕುಮಾರ್ ಹೈಜಾಕ್ ಮಾಡಿದ್ದಾರೆ. ಈ ಬಾರಿ ಬಂಗಾಳದಲ್ಲಿ ನಾವು ಸೋತಿಲ್ಲ, ಕುತಂತ್ರದಿಂದ ಸೋಲಿಸಲಾಗಿದೆ. ಮೊದಲು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಬಾಕಿ ಮಾತು ಆಮೆಲೆ ಎಂದರು.
ಈಗಾಗಲೇ ʻಬಿಜೆಪಿ ಕೇ ಸಾಥ್ ಸಬ್ ಕಾ ಸರ್ವ ನಾಶ್ʼ ಶುರುವಾಗಿದೆ. ಬಿಜೆಪಿಗೆ ಯಾವುದೇ ಸ್ವಂತ ಸಂಸ್ಥೆಗಳಿಲ್ಲ. ಅದು ಸಾಂವಿಧಾನಿಕ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ತಿದೆ. ನಮ್ಮನ್ನು ಹೌಸ್ ಅರೆಸ್ಟ್ ಮಾಡಲಾಗಿತ್ತು. ಭಾರತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕಿದೆ, ಎಲ್ಲ ಯುವ ಶಕ್ತಿ ಒಂದಾಗಿ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು.
