ನವದೆಹಲಿ: ಇಂಡಿಯಾ (INDIA) ಒಕ್ಕೂಟ ನಡೆಸುತ್ತಿರುವ ಪ್ರತಿಭಟನಾ ರ್ಯಾಲಿ ಕಾಂಗ್ರೆಸ್ (Congress) ಪಕ್ಷದ ರಾಜಕೀಯ ಪತನದ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಜೆ.ಪಿ. ನಡ್ಡಾ (JP Nadda) ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಒಕ್ಕೂಟದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಈ ರ್ಯಾಲಿಯ ಹಿಂದೆ ಹಲವು ರಾಜಕೀಯ ಉದ್ದೇಶಗಳಿವೆ. ವಿರೋಧ ಪಕ್ಷಗಳ ಈ ರ್ಯಾಲಿಯನ್ನು ಮೂರ್ಖತನದ ಹಾಗೂ ಪೂರ್ವಯೋಜಿತ ನಾಟಕ ಎಂದು ಟೀಕಿಸಿರುವ ಅವರು, ಪ್ರಜಾಪ್ರಭುತ್ವವನ್ನು ಅರಾಜಕತೆ ಮತ್ತು ಅಶಾಂತಿಗೆ ಒಪ್ಪಿಸುವ ವ್ಯವಸ್ಥಿತ ಸಂಚು ಇದಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ಜೈಲಿಗೆ ಹೋಗ್ತಾರೆ, 2024 ರ ಚುನಾವಣೆಯೇ ಅಕ್ರಮ: ರಾಹುಲ್ ಗುಡುಗು
1984ರ ಸಿಖ್ ವಿರೋಧಿ ಗಲಭೆಯ ವಾರ್ಷಿಕೋತ್ಸವದ ದಿನವೇ ಈ ಪ್ರತಿಭಟನೆಯನ್ನು ಆಯೋಜಿಸಿರುವುದು ಸಿಖ್ ಸಮುದಾಯದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ದೆಹಲಿಯಲ್ಲಿ ಗಲಭೆ ಮತ್ತು ಅರಾಜಕತೆ ಸೃಷ್ಟಿಸುವ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಹಬ್ಬದ ಸಂದರ್ಭದಲ್ಲಿ ದೆಹಲಿಯ ಅಂಗಡಿಕಾರರು ಮತ್ತು ವ್ಯಾಪಾರಿಗಳ ಆದಾಯಕ್ಕೆ ಧಕ್ಕೆ ತರುವುದು ಹಾಗೂ ದೇಶದ ಹೆಸರಿಗೆ ಕಳಂಕ ತರುವುದು ಕೂಡ ರ್ಯಾಲಿಯ ಹಿಂದಿನ ಉದ್ದೇಶಗಳಾಗಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕನ್ನಡ ಪರ ಹೋರಾಟಗಾರರು ಐಟಿ ಕಂಪನಿಗಳ ಮೇಲೆ ದಾಳಿ ಮಾಡಿ ನೈತಿಕ ಪೊಲೀಸ್ ಗಿರಿ ಮಾಡಬಾರದು: ಡಿಕೆಶಿ ಎಚ್ಚರಿಕೆ
ನವೆಂಬರ್ 1 ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವಾಗಿದೆ. ಇದೇ ದಿನ ಕಾಂಗ್ರೆಸ್ ಬೆಂಬಲಿತ ದುಷ್ಕರ್ಮಿಗಳು ಅಮಾಯಕ ಸಿಖ್ ಸಹೋದರರನ್ನು ಹತ್ಯೆ ಮಾಡಿದ್ದರು. ಸಾವಿರಾರು ಕುಟುಂಬಗಳು ಒಂದೇ ರಾತ್ರಿಯಲ್ಲಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದವು. ಭಾರತ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿ ಗಲಭೆ ಆಧಾರಿತ ರಾಜಕೀಯಕ್ಕೆ ಅವಕಾಶವಿಲ್ಲ. ದೇಶವು ಸಂವಿಧಾನ ಮತ್ತು ಜನಾದೇಶದ ಆಧಾರದ ಮೇಲೆ ನಡೆಯಲಿದೆ ಎಂದರು. ಇದನ್ನೂ ಓದಿ: ಕಂಠಪೂರ್ತಿ ಕುಡಿದು ದೇವಾಲಯದಲ್ಲಿ ನವಗ್ರಹ ವಿಗ್ರಹ ಧ್ವಂಸ – ಬಿಹಾರ ಮೂಲದ ಕಿಡಿಗೇಡಿ ಅರೆಸ್ಟ್
ಇಂದು ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಗೌರವವಲ್ಲ. ಬದಲಾಗಿ, ಪ್ರಜಾಪ್ರಭುತ್ವವನ್ನು ಅರಾಜಕತೆ ಮತ್ತು ಅಶಾಂತಿಗೆ ಒಪ್ಪಿಸುವ ಪೂರ್ವಯೋಜಿತ ಸಂಚು. ಜನರಿಂದ ಸೋಲನುಭವಿಸಿ, ಪದೇಪದೇ ತಿರಸ್ಕೃತಗೊಂಡಿರುವ ನಾಯಕರ ಮೂರ್ಖತನದ ನಾಟಕ ಇದಾಗಿದೆ. ಜನರು ಈ ರಾಜಕೀಯ ಬೆಳವಣಿಗೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಹೊತ್ತಲ್ಲೇ ಶಾಕ್ – ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 10 ರೂ. ಹೆಚ್ಚಳ
ಇನ್ನು, ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟ ದೆಹಲಿಯಲ್ಲಿ `ಚಲೋ ದೆಹಲಿ’ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬುದು ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ರಾಹುಲ್ ಗಾಂಧಿ ಅವರೇ, ನವೆಂಬರ್ 1ರ ಕರಾಳ ಇತಿಹಾಸವನ್ನು ಮುಚ್ಚಿಡಲು ಸಾಧ್ಯವಿಲ್ಲ. ದೆಹಲಿಯ ವ್ಯಾಪಾರಿಗಳ ಕಣ್ಣೀರಿಗೂ ನೀವು ಉತ್ತರಿಸಬೇಕಾಗುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ನ.10ಕ್ಕೆ ನಾಗೇಂದ್ರ ಮತ್ತೆ ಸಚಿವರಾಗ್ತಾರೆ: ಜಮೀರ್ ಅಹ್ಮದ್ ಭವಿಷ್ಯ
