ಬೆಂಗಳೂರು: ಕನ್ನಡ ಪರ ಹೋರಾಟಗಾರರು ಐಟಿ ಕಂಪನಿಗಳ ಮೇಲೆ ದಾಳಿ ಮಾಡಿ ನೈತಿಕ ಪೊಲೀಸ್ ಗಿರಿ ಮಾಡಬಾರದು ಅಂತ ಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ MES ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಭೂಮಿಯಲ್ಲಿ ಇದ್ದ ಮೇಲೆ ನಮ್ಮ ಭೂಮಿ ರಕ್ಷಣೆ ಮಾಡಬೇಕು. ಕಾನೂನು ಎಲ್ಲರಿಗೂ ಒಂದೇ. ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬಾರದು. MES ಅವರು ಈ ಭೂಮಿಯಲ್ಲಿ ಇದ್ದ ಮೇಲೆ ಈ ಭೂಮಿಗೆ ಗೌರವ ಕೊಡಬೇಕು ಅಂತ ತಿಳಿಸಿದರು.
ಕನ್ನಡಪರ ಹೋರಾಟಗಾರರು ಐಟಿ ಕಂಪನಿಗಳು, ಸಂಘಟನೆಗಳ ಬಳಿ ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ. ನಮ್ಮ ಸರ್ಕಾರ ಇದೆ. ಸರ್ಕಾರಕ್ಕೆ ತಿಳಿಸಿ ಪೊಲೀಸರು ಕ್ರಮ ತಗೋತಾರೆ. ಕನ್ನಡ ಹೋರಾಟಗಾರರ ಮೇಲೆ ಕೇಸ್ ವಾಪಸ್ ತೆಗೆಯೋದಕ್ಕೆ ಸೂಚನೆ ಕೊಟ್ಟಿದ್ದೇನೆ ಫೈಲ್ ರೆಡಿ ಆಗ್ತಿದೆ. ಈಗ ನೀವು ಮತ್ತೆ ಗಲಾಟೆ ಮಾಡಿದರೆ ಪೊಲೀಸರು ಗಲಾಟೆ ಮಾಡ್ತಾರೆ ವಾಪಸ್ ತಗೋಬೇಡಿ ಅಂತಾರೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಕಿವಿಮಾತು ಹೇಳಿದರು.
ಕನ್ನಡ ಹೋರಾಟಗಾರರ ಕೇಸ್ ಮುಕ್ತಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಇದಕ್ಕೆ ಸಹಕಾರ ಮಾಡಿ. ಕನ್ನಡ, ಕರ್ನಾಟಕದ ರಕ್ಷಣೆಗೆ ಈ ಸರ್ಕಾರ ಬದ್ಧವಾಗಿದೆ. ಈ ರಾಜ್ಯದ ಜನರಲ್ಲಿ ನೆಲದಲ್ಲಿ, ಭಾವನೆಯಲ್ಲಿ, ಯಾರು ಇಲ್ಲಿ ಇದ್ದಾರೆ ಅವರು ಗೌರವದಿಂದ ಇರಬೇಕು ಅಂತ ತಿಳಿಸಿದರು.
