ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ನವದೆಹಲಿಯಲ್ಲಿ ಜನತಾ ಮಹಾಭಿಯೋಗ ಕಾರ್ಯಕ್ರಮ ನಡೆಸಿತು. ರಾಜ್ಯಸಭೆಯ ವಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದಲ್ಲಿ ನಡೆದ ಈ ಅಣುಕು ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.
मोदी सरकार ने 2014 से सत्ता पर कब्ज़ा करने के लिए हर तरह की साजिश की है।
सांसद चोरी, पार्टी तोड़ना, सरकार चोरी, ED-CBI का इस्तेमाल और अब वोट चोरी। यानी- विपक्ष का वोट काटो और राज करो।
ज्ञानेश कुमार इस ‘वोट चोरी’ को अंजाम दे पा रहे हैं, क्योंकि दिसंबर 2023 में 145 विपक्षी सांसदों को सस्पेंड करके एक बिल पास किया गया था, जिससे CEC को इम्युनिटी मिलती है।
2024 के लोकसभा चुनाव में महाराष्ट्र और हरियाणा में हमारा बेहतरीन प्रदर्शन था, लेकिन विधानसभा चुनावों में नतीजा पलट गया।
कारण- चुनाव से पहले अवैध तरीके से वोट जोड़े गए और फिर सबके नाम हटा दिए गए। ये काम मोदी-शाह और ज्ञानेश मिलकर कर रहे हैं।
— Mallikarjun Kharge (@kharge) October 31, 2026
ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗದ ನಿರ್ಣಯ ಮಂಡಿಸಿದರು. ವಿವಿಧ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯಗಳನ್ನ ಮಂಡಿಸಿದ ಬಳಿಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮಾರೋಪ ಭಾಷಣ ಮಾಡಿದರು.
𝐑𝐞𝐬𝐨𝐥𝐮𝐭𝐢𝐨𝐧 𝐅𝐨𝐫 𝐓𝐡𝐞 𝐏𝐮𝐛𝐥𝐢𝐜 𝐈𝐦𝐩𝐞𝐚𝐜𝐡𝐦𝐞𝐧𝐭 𝐎𝐟 𝐌𝐫. 𝐆𝐲𝐚𝐧𝐞𝐬𝐡 𝐊𝐮𝐦𝐚𝐫, 𝐂𝐡𝐢𝐞𝐟 𝐄𝐥𝐞𝐜𝐭𝐢𝐨𝐧 𝐂𝐨𝐦𝐦𝐢𝐬𝐬𝐢𝐨𝐧𝐞𝐫 𝐎𝐟 𝐈𝐧𝐝𝐢𝐚.
6 Charges against the present CEC —
1️⃣ Conspired to Steal Elections
2️⃣ Deleted 13.2 Crore Voters
3️⃣ Rewrote Form 6 Without Parliamentary Oversight or Knowledge
4️⃣ Seized the Electoral Rolls Through ECINET
5️⃣ Shut Out the Other Two Commissioners
6️⃣ Acted at the Behest of Modi and Shah
— Mallikarjun Kharge (@kharge) October 31, 2026
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ, ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಪಕ್ಷಪಾತದಿಂದ ಕೂಡಿದೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ. ಈ ಹಿನ್ನೆಲೆ ಜ್ಞಾನೇಶ್ ಕುಮಾರ್ ಅವರನ್ನ ಸಿಇಸಿ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಅವರು ರಾಜೀನಾಮೆ ನೀಡಬೇಕು ಎಂದು ಇಂಡಿ ಒಕ್ಕೂಟ ಒತ್ತಾಯಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಅವರು ಜ್ಞಾನೇಶ್ ಕುಮಾರ್ ವಿರುದ್ಧ ಆರು ಪ್ರಮುಖ ಆರೋಪಗಳನ್ನು ಪಟ್ಟಿ ಮಾಡಿದರು. ಚುನಾವಣೆಯಲ್ಲಿ ಅಕ್ರಮಕ್ಕೆ ಸಂಚು ರೂಪಿಸಿರುವುದು, 13.2 ಕೋಟಿ ಮತದಾರರ ಹೆಸರುಗಳನ್ನ ಪಟ್ಟಿಯಿಂದ ತೆಗೆದುಹಾಕಿರುವುದು, ಸಂಸತ್ತಿನ ಅನುಮತಿಯಿಲ್ಲದೆ ಫಾರ್ಮ್-6 ಬದಲಾವಣೆ, ಇಸಿ ನೆಟ್ ಮೂಲಕ ಮತದಾರರ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸಿರುವುದು, ಉಳಿದ ಇಬ್ಬರು ಚುನಾವಣಾ ಆಯುಕ್ತರನ್ನ ನಿರ್ಧಾರ ಪ್ರಕ್ರಿಯೆಯಿಂದ ದೂರವಿಟ್ಟಿರುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿರುವುದು ಪ್ರಮುಖ ಆರೋಪಗಳಾಗಿವೆ.
भारत के संविधान में आर्टिकल-326 के तहत हमारे नागरिकों को जो वोट का अधिकार मिला, आज वह गंभीर खतरे में है।
महात्मा गाँधी जी, नेहरू जी, बाबा साहेब आंबेडकर जी, सरदार पटेल जी, मौलाना आजाद जी और अन्य स्वतंत्रता सेनानियों को इसके लिए बहुत मेहनत करनी पड़ी थी।
इन महापुरुषों ने पहले हमें आजादी दिलाई, फिर लोकतंत्र को बचाने के लिए संविधान को बनाया।
बाबा साहेब ने कहा था- वोट का अधिकार आम जनता की सबसे बड़ी ताकत है। इसी अधिकार से जनता सरकार बनाती है और हटाती है।
लेकिन आज वह अधिकार खतरे में है, क्योंकि CEC ज्ञानेश कुमार सीधे प्रधानमंत्री और गृहमंत्री के निर्देश पर आयोग चला रहे हैं।
— Mallikarjun Kharge (@kharge) October 31, 2026
ಈ ಆರೋಪಗಳನ್ನ ಮುಂದಿಟ್ಟುಕೊಂಡು ಎಸ್ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು, ಸಿಇಸಿ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು 2023ರ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿದರು.
ಮೀರಾ ಕುಮಾರ್ ಮಾತನಾಡಿ, ಮತದಾರರ ಪಟ್ಟಿಯಿಂದ ಒಬ್ಬ ವ್ಯಕ್ತಿಯ ಹೆಸರನ್ನು ತೆಗೆದುಹಾಕಿದರೂ ಅದು ಪ್ರಜಾಪ್ರಭುತ್ವದ ಆತ್ಮಕ್ಕೆ ಧಕ್ಕೆಯಾದಂತೆ ಎಂದು ಅಭಿಪ್ರಾಯಪಟ್ಟರು.
