ಮಂಗಳೂರು: ಸೌಜನ್ಯ ಅತ್ಯಾಚಾರ (Soujanya Case) ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಚಿಸಿರುವ ಎಸ್ಐಟಿ ಮುಖ್ಯಸ್ಥರನ್ನು ಸರ್ಕಾರ ಬದಲಿಸಿದೆ.
ನೂತನ SIT ಮುಖ್ಯಸ್ಥರಾಗಿ ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ (Chetan Singh Rathore) ಅವರನ್ನು ಮರು ನೇಮಕ ಮಾಡಲಾಗಿದೆ. ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಇದನ್ನೂ ಓದಿ: ಸೌಜನ್ಯ ಅತ್ಯಾಚಾರ & ಕೊಲೆ ಕೇಸ್; ತನಿಖೆ ನಡೆಸಿದ್ದ ಕೆಳಸ್ತರದ ಪೊಲೀಸರು, ಸಿಬ್ಬಂದಿಗೆ SIT ನೋಟಿಸ್
ಎಸ್ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಕೈಬಿಡುವಂತೆ ಐಜಿಪಿ ಶಶಿಕುಮಾರ್ (Shashikumar) ಹಾಗೂ ವೆಂಕಟೇಶ್ ಪ್ರಸನ್ನ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಕೋರಿಕೆಯನ್ನು ಪರಿಗಣಿಸಿ ಸರ್ಕಾರ ಇಬ್ಬರನ್ನೂ ಎಸ್ಐಟಿಯಿಂದ ಕೈಬಿಟ್ಟಿದೆ. ಆ ಸ್ಥಾನಗಳಿಗೆ ರಾಥೋಡ್ ಮತ್ತು ಶ್ರೀನಿಧಿ ಅವರನ್ನು ನೇಮಿಸಿದೆ.
