ಮಂಗಳೂರು: ಕುಸುಮಾವತಿ(Kusumavati) ಅವರು ಸೌಜನ್ಯಳ(Soujanya) ತಾಯಿಯೇ ಅಲ್ಲವೇ ಎಂಬ ಬಗ್ಗೆ ನಮಗೆ ಯಾವುದೇ ರೀತಿಯ ಅನುಮಾನಗಳಿಲ್ಲ ಎಂದು ವಿಶೇಷ ತನಿಖಾ ತಂಡ(SIT) ತಂಡದ ಹಿರಿಯ ಅಧಿಕಾರಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ(Sudheer Kumar Reddy) ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬುವವರು ಕುಸುಮಾವತಿ ಅವರು ಸೌಜನ್ಯಳ ನಿಜವಾದ ತಾಯಿಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಎಸ್ಐಟಿಗೆ ದೂರು ಸಲ್ಲಿಸಿದ್ದರು.
ದೂರು ಹಾಗೂ ಈ ಕುರಿತು ಪ್ರಕಟವಾದ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಸುಧೀರ್ ಕುಮಾರ್ ರೆಡ್ಡಿ, ಸೌಜನ್ಯ ಮತ್ತು ಆಕೆಯ ತಾಯಿ ಕುಸುಮಾವತಿ ಅವರ ಸಂಬಂಧದ ವಿಚಾರದಲ್ಲಿ ತನಿಖಾ ತಂಡಕ್ಕೆ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ಕೇಸ್ಗೆ ಬಿಗ್ ಟ್ವಿಸ್ಟ್| ಕುಸುಮಾವತಿ ಸೌಜನ್ಯಳ ತಾಯಿಯೇ ಅಲ್ಲ – ಎಸ್ಐಟಿಗೆ ದೂರು
ಇಂತಹ ಸ್ಥಳೀಯ ವಿವಾದಗಳು, ಅನುಮಾನಗಳು ಅಥವಾ ದೂರುಗಳೇನಾದರೂ ಇದ್ದರೆ, ಅವುಗಳನ್ನು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸರೇ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
