ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ (Darshan) ಭೇಟಿಯಾದ ಪತ್ನಿ ವಿಜಯಲಕ್ಷ್ಮೀ (Vijayalakshmi), ಧನ್ವೀರ್ ಆಡಿಯೋ ಸಂಬಂಧ ಪತಿ ಜೊತೆ ಚರ್ಚಿಸಿದ್ದಾರೆ. ನನಗೆ ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ ಎಂಬಂತೆ ಹೊರಗಡೆ ಬಿಂಬಿಸುತ್ತಿದ್ದಾರೆಂದು ದರ್ಶನ್ ಜೊತೆ ವಿಜಯಲಕ್ಷ್ಮೀ ಬೇಸರದಿಂದ ಹೇಳಿಕೊಂಡಿದ್ದಾರೆ. ಪತ್ನಿಯ ಮಾತು ಕೇಳಿ ದರ್ಶನ್ ನಗಾಡಿದ್ದಾರೆ.
ದರ್ಶನ್ ಬಿಡಿಸೋಕೆ ವಿಜಯಲಕ್ಷ್ಮೀಗೆ ಇಷ್ಟವಿಲ್ಲ ಎಂದು ಸಂವಾದ ನಡೆಸಿರುವ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಭೇಟಿ ವೇಳೆ ಈ ವಿಚಾರ ಪ್ರಸ್ತಾಪಿಸಿದ ವಿಜಯಲಕ್ಷ್ಮೀ, ನನಗೆ ನಿಮ್ಮನ್ನು ಬಿಡಿಸೋಕೆ ಇಷ್ಟ ಇಲ್ಲ ಗೊತ್ತಾ ಎಂದು ಹೇಳಿದರು. ಅದಕ್ಕೆ ದರ್ಶನ್, ಹೌದಾ ಪುಟ್ಟ.. ಎಂದು ನಕ್ಕರು ಎನ್ನಲಾಗಿದೆ. ಇದನ್ನೂ ಓದಿ: ಧನ್ವೀರ್ಗೆ ವಾರ್ನಿಂಗ್ ಕೊಡೋಕೆ ದರ್ಶನ್ ಅಣ್ಣ ಹೇಳಿದ್ರು: ಝೈದ್ ಖಾನ್
ಧನ್ವೀರ್ (Dhanveer) ಆಡಿಯೋ ವಿಚಾರ, ನಾಗರಾಜ್ ಹಾಗೂ ಇತರರಿಗೆ ಬೈದಿರುವ ವಿಚಾರ, ಧನ್ವೀರ್ ಮನೆ ಬಳಿ ಕಾಸು ಕೇಳಲು ಹೋದಾಗ ನಡೆದ ಘಟನೆಗಳ ಬಗ್ಗೆ ದರ್ಶನ್ಗೆ ಪತ್ನಿ ವಿವರಣೆ ನೀಡಿದ್ದಾರೆ. ಈ ವೇಳೆ ಕಾನೂನು ಹೋರಾಟ ನಡೆಸುವಂತೆ ದರ್ಶನ್ ಸಲಹೆ ನೀಡಿದ್ದಾರೆ.
ಧನ್ವೀರ್ ಇಷ್ಟೆಲ್ಲಾ ಮಾಡ್ತಿದ್ದಾನೆ ಅಂದ್ರೆ ಆತನ ಹಿಂದೆ ಯಾರಿದ್ದಾರೆ ಎಂದು ದರ್ಶನ್ ಕೇಳಿದ್ದಾರೆ. ಅದಕ್ಕೆ ಪತ್ನಿ, ಗೊತ್ತಿಲ್ಲ ಎಂದಿದ್ದಾರೆ. ಆತ ಏನಾದ್ರು ಮಾತಾಡಲಿ.. ನೀವು ಕಾನೂನು ಬಿಟ್ಟು ಹೋಗಬೇಡಿ ಎಂದು ದರ್ಶನ್ ಪತ್ನಿಗೆ ಸಲಹೆ ನೀಡಿದ್ದಾರೆ. ನಮಗೂ ಕಾಲ ಬರುತ್ತೆ ಅಂತಾ ಪತ್ನಿ ವಿಜಯಲಕ್ಷ್ಮೀಗೆ ದರ್ಶನ್ ಸಮಾಧಾನ ಮಾಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಧನ್ವೀರ್ 11 ಕೋಟಿ ಹಣ ತಗೊಂಡಿದ್ರೂ ಇಲ್ಲ ಅಂತಾನೆ, ಮಾಡಿರೋ ಆರೋಪಗಳೆಲ್ಲವೂ ಸುಳ್ಳು: ರಜತ್
