ಚೆನ್ನೈ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಖೈದಿಗಳು (Convicts) ಪರಾರಿಯಾಗಿರುವ ಘಟನೆ ತಮಿಳುನಾಡಿನ (Tamil Nadu) ಥೇಣಿ ಉಪಜೈಲಿನಲ್ಲಿ (Theni Sub-Jail) ಸೋಮವಾರ ತಡರಾತ್ರಿ ನಡೆದಿದೆ.
ಘಟನೆ ಬಳಿಕ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಪರಾರಿಯಾದ ಖೈದಿಗಳ ಪೈಕಿ ಓರ್ವನನ್ನು ಬಂಧಿಸಿದ್ದಾರೆ. ಉಳಿದ ಖೈದಿಗಳ ಪತ್ತೆಗಾಗಿ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯೇಂದ್ರ ಬಿಡಾರಿ ಈ ಕುರಿತು ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆ ವೇಳೆ ಓರ್ವ ಪರಾರಿಯಾದ ಖೈದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಭರಣ ಪ್ರಿಯರಿಗೆ ಗುಡ್ನ್ಯೂಸ್ – ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
ಖೈದಿಗಳು ಪರಾರಿಯಾದ ಹಿನ್ನೆಲೆ ನೆರೆಯ ಜಿಲ್ಲೆಗಳಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಿಂಡಿಗಲ್ ಜಿಲ್ಲೆಯ 16 ಸ್ಥಳಗಳಲ್ಲಿ ವಾಹನಗಳ ತಪಾಸಣೆಗಾಗಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಈ ಕುರಿತು ದಿಂಡಿಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಬ್ಬು ದರ ಸಂಘರ್ಷ| ಸತತ 13 ಗಂಟೆಗಳ ಸಭೆ ಬಳಿಕ ತಾತ್ಕಾಲಿಕ ಸಂಧಾನ – ಅಂತಿಮ ನಿರ್ಧಾರಕ್ಕೆ 2 ದಿನಗಳ ಗಡುವು
ಪೊಲೀಸರ ಪ್ರಕಾರ, ಪರಾರಿಯಾದ ಎಲ್ಲಾ 17 ಆರೋಪಿಗಳನ್ನು ಒಂದೇ ಸೆಲ್ನಲ್ಲಿ ಇರಿಸಲಾಗಿತ್ತು. ಅವರಲ್ಲಿ ಓರ್ವ ಖೈದಿಗೆ ಅನಾರೋಗ್ಯ ಉಂಟಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಜೈಲು ಸಿಬ್ಬಂದಿ ಸೆಲ್ಗೆ ತೆರಳಿದ್ದರು. ಈ ವೇಳೆ ಖೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಳಸಿ ಬಿಸಾಡುವ ಶೂಟರ್ಗಳ ಮಾಡೆಲ್! – ಲಾರೆನ್ಸ್ ಗ್ಯಾಂಗ್ನ ಜಾಲ ಹೇಗೆ ಕೆಲಸ ಮಾಡುತ್ತೆ?
ಘಟನೆಯಲ್ಲಿ ಥೇಣಿ ಜಿಲ್ಲಾ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-2 ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ಗಾಯವಾಗಿದೆ. ಅವರನ್ನು ಜಿ. ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಬ್ಬರು ಜೈಲು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ಬಳಸುವ RAX ಫೋನ್ ವಿಶೇಷತೆ ಏನು? ಬೇರೆ ಫೋನಿಗಿಂತ ಭಿನ್ನ ಹೇಗೆ?
ಖೈದಿಗಳ ಪರಾರಿ ಕುರಿತು ನೆರೆಯ ಜಿಲ್ಲೆಗಳ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಇಡುಕ್ಕಿ, ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪರಾರಿಯಾದ ಖೈದಿಗಳನ್ನು ಗುರುತಿಸಿ ಬಂಧಿಸಲು ಅವರ ಭಾವಚಿತ್ರಗಳನ್ನು ಪೊಲೀಸ್ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: ಗುವಾಹಟಿ ಹೋಟೆಲ್ನಲ್ಲಿ ಶೂಟೌಟ್ – ಗುಂಡಿನ ದಾಳಿಗೆ ಇಬ್ಬರು ಮಹಿಳೆಯರೂ ಸೇರಿ 6 ಬಲಿ
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಳಿದ ಪರಾರಿಯಾದ ಖೈದಿಗಳನ್ನು ಪತ್ತೆಹಚ್ಚಲು ವಿವಿಧ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: SIRನ ಎಲ್ಲಾ ಆದೇಶಗಳು ಸರ್ವಾನುಮತದಿಂದ ಕೂಡಿದ್ದವು, ಫಾರ್ಮ್-6 ತಿದ್ದುಪಡಿ ಮಾಡಿಲ್ಲ – ಸುಪ್ರೀಂಗೆ ಚುನಾವಣಾ ಆಯೋಗ ಮಾಹಿತಿ
