ಬೆಂಗಳೂರು: ಚಿಕ್ಕಪೇಟೆಯಲ್ಲಿ ಸರ್ಕಾರಿ ಕಚೇರಿಯ ಕಟ್ಟಡವೊಂದು ಶಿಥಿಲಗೊಂಡಿದ್ದು, ಜನರ ಬಲಿಗಾಗಿ ಕಾಯುತ್ತಿದೆ. ಕಟ್ಟಡದ ಮೇಲ್ಛಾವಣಿ ಉದುರುತ್ತಿದೆ. ಮೆಟ್ಟಿಲುಗಳು ಬಿರುಕುಬಿಟ್ಟಿವೆ. ಆಗಲೋ ಇಗಲೋ ಬೀಳುವ ಹಂತಕ್ಕೆ ಕಟ್ಟಡ ತಲುಪಿದೆ. ಆದರೂ ಅಧಿಕಾರಿಗಳು ಅದನ್ನು ತೆರವುಗೊಳಿಸಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಕಟ್ಟಡದ ಕಬ್ಬಿಣದ ಕಂಬಿಗಳು ತುಕ್ಕು ಹಿಡಿದಿದ್ದು, ಈ ಅಪಾಯಕಾರಿ ಕಟ್ಟಡ ಯಾವ ಕ್ಷಣದಲ್ಲಾದರೂ ಬೀಳಬಹುದು. ಸಾರ್ವಜನಿಕರು ಓಡಾಡುವ ಜಾಗದಲ್ಲಿಯೇ ಇರುವ ಕಟ್ಟಡ ಕುಸಿದರೆ, ಸಾಲು ಸಾಲು ಸಾವುಗಳಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಗುವಾಹಟಿ ಹೋಟೆಲ್ನಲ್ಲಿ ಶೂಟೌಟ್ – ಗುಂಡಿನ ದಾಳಿಗೆ ಇಬ್ಬರು ಮಹಿಳೆಯರೂ ಸೇರಿ 6 ಬಲಿ
60-70 ವರ್ಷದ ಹಳೆಯ ಕಟ್ಟಡ ಇದಾಗಿದ್ದು, ಗೋಡೆಯೂ ಬಿರುಕು ಬಿಟ್ಟು ವಾಲಿದೆ. ಈಗಾಗಲೇ ಗೋಡೆ ಕುಸಿದು ಐದಕ್ಕೂ ಹೆಚ್ಚು ಬೈಕ್ಗಳಿಗೆ ಹಾನಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇದ್ಯಾವುದನ್ನೂ ತಲೆ ಕೆಡೆಸಿಕೊಳ್ತಿಲ್ಲ.
ಜನ ಹೆಚ್ಚಾಗಿ ಓಡಾಡುವ ಏರಿಯಾದಲ್ಲೇ ಈ ಕಟ್ಟಡವಿದ್ದು, ಕಟ್ಟಡದ ಹೊರಭಾಗದಲ್ಲಿ ವ್ಯಾಪಾರಿಗಳು, ಗ್ರಾಹಕರು ಬೈಕ್ಗಳನ್ನ ಪಾರ್ಕ್ ಮಾಡ್ತಾರೆ. ಯಾವ ಕ್ಷಣದಲ್ಲಾದ್ರೂ ದುರಂತ ನಡೆಯಬಹುದು. ಅನಾಹುತ ಆಗೋದಕ್ಕಿಂತ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ತೆರವು ಮಾಡಬೇಕಿದೆ. ಇದನ್ನೂ ಓದಿ: ಯಲಹಂಕದ ನೆಲಕದಿರೇನಹಳ್ಳಿಯ 59.39 ಎಕರೆ ಭೂಸ್ವಾಧೀನ ರದ್ದುಗಳಿಸಿದ ಸುಪ್ರೀಂ
