– ನಾಲ್ವರು ಆರೋಪಿಗಳೂ ಅ. 28ರವರೆಗೆ ಪೊಲೀಸ್ ಕಸ್ಟಡಿಗೆ
ಮುಂಬೈ: ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ (Tiger Shroff Firing Case) ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಆರೋಪಿಗಳ ಮೊಬೈಲ್ನಲ್ಲಿ ವಾಯ್ಸ್ ನೋಟ್ ಪತ್ತೆಯಾಗಿದೆ.
ಬಂಧಿತ ಆರೋಪಿಯೊಬ್ಬನ ಫೋನ್ನಲ್ಲಿ ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಮತ್ತು ಹೇಗೆ ಪಡೆದುಕೊಳ್ಳಬೇಕು ಎಂಬ ಸೂಚನೆಗಳಿದ್ದ ವಾಯ್ಸ್ ನೋಟ್ ಪತ್ತೆಯಾಗಿದೆ.
ಬಂಧಿತ ಆರೋಪಿಗಳ ಫೋನ್ನಲ್ಲಿ ಪತ್ತೆಯಾಗಿರುವ ಈ ವಾಯ್ಸ್ ನೋಟ್ ತನಿಖೆಗೆ ಅತ್ಯಂತ ಪ್ರಮುಖ ಸಾಕ್ಷಿಯಾಗಿದೆ. ಈ ಸಂದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ತರಬೇಕು, ಯಾರನ್ನು ಸಂಪರ್ಕಿಸಬೇಕು ಮತ್ತು ಸಾಗಾಟದ ಮಾರ್ಗಗಳೇನು ಎಂಬ ಸಂಪೂರ್ಣ ಪ್ಲ್ಯಾನ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ನಲ್ಲಿ 1300ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ – ವಿದ್ಯಾರ್ಥಿ ನಾಯಕರ ಜೊತೆ ಇಂದು ಪ್ರಧಾನಿ ಸಭೆ ಸಾಧ್ಯತೆ
ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದ ರಹಸ್ಯ ಸ್ಥಳಗಳನ್ನು ಸೂಚಿಸಲು ಮತ್ತು ಪೊಲೀಸರ ಕಣ್ಣು ತಪ್ಪಿಸಲು ಕೆಲವು ನಿರ್ದಿಷ್ಟ ಕೋಡ್ ವರ್ಡ್ಗಳನ್ನು ಬಳಸಿದ್ದಾರೆ. ಈ ವಾಯ್ಸ್ ನೋಟ್ ಆಧರಿಸಿ ಗುಜರಾತ್ನ ಸೂರತ್ನಲ್ಲಿ ದಾಳಿ ನಡೆಸಿದ್ದ ಪೊಲೀಸರು ಈಗಾಗಲೇ 2 ಅತ್ಯಾಧುನಿಕ ಬಂದೂಕುಗಳು ಮತ್ತು 10 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಬೆನ್ನತ್ತಿರುವ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು, ಶಸ್ತ್ರಾಸ್ತ್ರ ಸರಬರಾಜು ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ನಾಲ್ಕು ಆರೋಪಿಗಳನ್ನು ಅ. 28 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಭಿಕ್ಷೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ – ಮೋದಿ ತಂದೆ ಕುರಿತ ಖರ್ಗೆ ಹೇಳಿಕೆಗೆ ಸಿ.ಟಿ ರವಿ ತೀವ್ರ ಆಕ್ಷೇಪ
