ಬೆಂಗಳೂರು: ಪುಲಿಕೇಶಿ ನಗರದಲ್ಲಿ ನಡೆದ ಬಾಂಬ್ ಸ್ಫೋಟ (bomb Blast) ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯಾಂಶಗಳು ಹೊರಬಂದಿವೆ. ಆರೋಪಿಗಳು ಮಸ್ಕಿಯ ಮನೆಯೊಂದರಲ್ಲಿ ಬಾಂಬ್ ಟ್ರಯಲ್ ಬ್ಲಾಸ್ಟ್ ಮಾಡಿದ್ದರು ಎಂದು ಪೊಲೀಸ್ ತನಿಖೆ ಮೂಲಕ ತಿಳಿದುಬಂದಿದೆ.
8ನೇ ತರಗತಿವರೆಗೆ ಮಾತ್ರ ಓದಿದ್ದರೂ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಬುರ್ಹಾನ್ ಎಂಬಾತ, ಅಲ್ಲಾವುದ್ದೀನ್ ಮೇಲಿನ ಧ್ವೇಷದಿಂದ ಈ ಕೃತ್ಯ ಎಸಗಿದ್ದಾನೆ.
ಜಾಹಿದ್ಹುಲ್ ಹುಸೇನ್ ಸೂಚನೆಯಂತೆ ಬೆಂಗಳೂರಿಗೆ ಪಾರ್ಸೆಲ್ ಬಾಂಬ್ ತಂದಿದ್ದ ಬುರ್ಹಾನ್, ಅಲ್ಲಾವುದ್ದೀನ್ ಸಮ್ಮುಖದಲ್ಲಿ ಅನುಮಾನ ಬಾರದಂತೆ ಹಿಂದಿಯಲ್ಲಿ ಮಾತನಾಡಿದ್ದ. ಹಿಂದಿ ಬಾರದ ಅಲ್ಲಾವುದ್ದೀನ್ ಫೋನ್ ಅನ್ನು ಸೂರಜ್ ಎಂಬಾತನಿಗೆ ನೀಡಿದ್ದ. ಆರಂಭದಲ್ಲಿ ಯಾರೂ ತೆರೆಯದಿದ್ದ ಪಾರ್ಸೆಲ್ ಅನ್ನು ಕಟ್ಟಡ ಮಾಲೀಕರಿಗೂ ತೋರಿಸಲಾಗಿತ್ತು. ಇದನ್ನೂ ಓದಿ: ಮೋದಿ ತಂದೆ ಕುರಿತು ವಿವಾದಾತ್ಮಕ ಹೇಳಿಕೆ – ಮಲ್ಲಿಕಾರ್ಜುನ ಖರ್ಗೆ ವಜಾಗೊಳಿಸುವಂತೆ ಬಿಜೆಪಿ ಆಗ್ರಹ
ಸ್ಫೋಟದ ಸುದ್ದಿ ಬರದಿದ್ದಾಗ ಬುರ್ಹಾನ್ ಮತ್ತೆ ಕರೆ ಮಾಡಿ, ಪಾರ್ಸೆಲ್ ತೆರೆಯುವ ವಿಧಾನವನ್ನು ಹಿಂದಿಯಲ್ಲಿ ವಿವರಿಸಿದ್ದಾನೆ. ಸೂರಜ್ ಜೊತೆ ಕರೆಯಲ್ಲಿ ಇರುವಾಗಲೇ, ಬುರ್ಹಾನ್ ಸೂಚಿಸಿದಂತೆ ಬಟನ್ ಒತ್ತುತ್ತಿದ್ದಂತೆ ಭೀಕರ ಬಾಂಬ್ ಸ್ಫೋಟಗೊಂಡಿದೆ.
ಈ ಹಿಂದೆ ಮಸ್ಕಿಯ ಮನೆಯಲ್ಲಿ ಸಣ್ಣ ಮಟ್ಟದ ಟ್ರಯಲ್ ಬ್ಲ್ಯಾಸ್ಟ್ ಮಾಡಿದ್ದ ಆರೋಪಿಗಳು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸ್ಫೋಟಿಸಿದ್ದು, ಪೊಲೀಸರು ಸೂಕ್ತ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.ಇದನ್ನೂ ಓದಿ: ಬೇಲೂರು ಬಳಿ ಮದಗಜಗಳ ಭೀಕರ ಕಾಳಗ – ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ
