– ಕೋಟ್ಯಂತರ ರೂ. ನಷ್ಟ
ಶ್ರೀನಗರ: ಜಮ್ಮು ರೈಲು ನಿಲ್ದಾಣದ (Jammu Railway Station) ಸಮೀಪವಿರುವ ಶಿವ ಮಾರ್ಕೆಟ್ನಲ್ಲಿ (Shiv Market) ಭಾನುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) 35ಕ್ಕೂ ಹೆಚ್ಚು ಅಂಗಡಿಗಳು ಹಾಗೂ ಒಂದು ಹೋಟೆಲ್ ಸುಟ್ಟು ಭಸ್ಮವಾಗಿವೆ.
ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ದಟ್ಟವಾದ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಹರಡಿತ್ತು. ಅಗ್ನಿ ಅವಘಡದ ಪರಿಣಾಮ ಕಿಲೋಮೀಟರ್ ದೂರದವರೆಗೂ ಹೊಗೆ ಕಾಣಿಸುತ್ತಿತ್ತು. ಜನನಿಬಿಡ ವಾಣಿಜ್ಯ ಪ್ರದೇಶದಲ್ಲಿ ಬೆಂಕಿ ಕ್ಷಿಪ್ರವಾಗಿ ವ್ಯಾಪಿಸಿದ್ದು, ಕೆಲವೇ ನಿಮಿಷಗಳಲ್ಲಿ ಹಲವು ಅಂಗಡಿಗಳು ಸುಟ್ಟುಹೋಗಿವೆ. ಇದನ್ನೂ ಓದಿ: ಇಂದು ಯುದ್ಧಗಳು ಕೇವಲ ಶಸ್ತ್ರಾಸ್ತ್ರಗಳಿಂದ ನಡೆಯೋದಿಲ್ಲ – ʻಸೈಬರ್ ಭಯೋತ್ಪಾದನೆʼ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು. ಇದನ್ನೂ ಓದಿ: ಮೋದಿ ಅವರಪ್ಪನೂ ಜೈಲಿಗೆ ಹೋಗ್ಬೇಕು ಎಂದ ಖರ್ಗೆಗೆ ಸಂಕಷ್ಟ – ದೂರು ದಾಖಲು
ಈ ಅಗ್ನಿ ಅವಘಡದಿಂದ ನೂರಾರು ವ್ಯಾಪಾರಿಗಳ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಅಂಗಡಿಗಳಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಿದ್ದಾರೆ. ಘಟನೆಯಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು, ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ. ಇದನ್ನೂ ಓದಿ: ಶಿವಮೊಗ್ಗ | 539 ಕೆರೆಗಳ 2,431 ಎಕರೆ ಭೂಮಿ ಒತ್ತುವರಿ ತೆರವಿಗೆ ಈಶ್ವರ್ ಖಂಡ್ರೆ ಸೂಚನೆ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಏಕಾಏಕಿ ಬೆಂಕಿ ಕಾಣಿಸಿಕೊಂಡು ಇಡೀ ಮಾರುಕಟ್ಟೆಗೆ ವ್ಯಾಪಿಸಿತ್ತು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿಕಾರರು ಹಾಗೂ ಸ್ಥಳೀಯರು ತಮ್ಮ ವಸ್ತುಗಳನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟರು. ಇದನ್ನೂ ಓದಿ: NWKRTC ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆಯಾಗಿ ಮರುನಾಮಕರಣ: ಕಿತ್ತೂರು ಉತ್ಸವದಲ್ಲಿ ಡಿಕೆಶಿ ಘೋಷಣೆ
ಜಮ್ಮು ರೈಲು ನಿಲ್ದಾಣದ ಸಮೀಪದಲ್ಲಿರುವ ಶಿವ ಮಾರ್ಕೆಟ್ನಲ್ಲಿ ನೂರಾರು ಅಂಗಡಿಗಳು ಮತ್ತು ವಸತಿಗೃಹಗಳಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಾಗರಿಕ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಇದನ್ನೂ ಓದಿ: ಜಡ್ಜ್ ನೇಮಕಾತಿಗೂ ಮುನ್ನವೇ ಚಂದ್ರಚೂಡ್ ಸರ್ಕಾರದ ಪೂರ್ವಾನುಮೋದನೆ ಪಡೆಯುತ್ತಿದ್ದರು: ನಿವೃತ್ತ ನ್ಯಾ. ಸಂಜಯ್ ಕಿಶನ್ ಕೌಲ್

