Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • October 2026
  • September 2026
  • August 2026
  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ದೇಶದಲ್ಲೇ ವಿಭಿನ್ನ ದಸರಾ ಆಚರಣೆ – ರಾವಣನ ದಹನವಿಲ್ಲದ 75 ದಿನಗಳ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | ದೇಶದಲ್ಲೇ ವಿಭಿನ್ನ ದಸರಾ ಆಚರಣೆ – ರಾವಣನ ದಹನವಿಲ್ಲದ 75 ದಿನಗಳ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು?

Latest

ದೇಶದಲ್ಲೇ ವಿಭಿನ್ನ ದಸರಾ ಆಚರಣೆ – ರಾವಣನ ದಹನವಿಲ್ಲದ 75 ದಿನಗಳ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು?

Last updated: October 25, 2026 10:34 pm
By
Public TV
Share
6 Min Read
Bastar Dasara 11

ಸಾಮಾನ್ಯವಾಗಿ ‘ದಸರಾ’ ಎಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ನವರಾತ್ರಿಯ ಸಂಭ್ರಮ, ಮೈಸೂರಿನ ವೈಭವೋಪೇತ ಜಂಬೂಸವಾರಿ ಅಥವಾ ಉತ್ತರ ಭಾರತದಲ್ಲಿ ರಾವಣನ ಬೃಹತ್ ಪ್ರತಿಕೃತಿಗಳನ್ನು ಸುಡುವ ‘ರಾವಣ ದಹನ’. ಆದರೆ, ನಮ್ಮ ಭಾರತದ ವೈವಿಧ್ಯಮಯ ಸಂಸ್ಕೃತಿಯ ಮಡಿಲಲ್ಲಿ ಇದಕ್ಕೆ ತದ್ವಿರುದ್ಧವಾದ, ಬೆರಗುಗೊಳಿಸುವ ಆಚರಣೆಯೊಂದಿದೆ. ಹೌದು, ಅದೇ ದೇಶದಲ್ಲೇ ಅತ್ಯಂತ ವಿಶಿಷ್ಟವಾದ 75 ದಿನಗಳ ಸುದೀರ್ಘ ದಸರಾ ಆಚರಣೆ!

ಇಲ್ಲಿ ರಾಮನ ವಿಜಯೋತ್ಸವವಾಗಲೀ, ರಾವಣನ ದಹನವಾಗಲೀ ನಡೆಯುವುದಿಲ್ಲ ಬದಲಿಗೆ ಛತ್ತೀಸ್‌ಗಢದ (Chattisgrah) ಬಸ್ತಾರ್ ಭಾಗದ ಪ್ರಕೃತಿ, ಸ್ಥಳೀಯ ಶಕ್ತಿ ದೇವತೆ ‘ದಂತೇಶ್ವರಿ’ ಹಾಗೂ ಆದಿವಾಸಿ ಬುಡಕಟ್ಟು ಸಮುದಾಯಗಳ ಶತಮಾನಗಳ ಸಂಪ್ರದಾಯಗಳಿಗೆ ನಮನ ಸಲ್ಲಿಸಲಾಗುತ್ತದೆ. ಶ್ರಾವಣ ಮಾಸದಿಂದ ಆರಂಭವಾಗಿ ಬರೋಬ್ಬರಿ ಎರಡೂವರೆ ತಿಂಗಳುಗಳ ಕಾಲ ಇಡೀ ಊರನ್ನೇ ಸಂಭ್ರಮದ ಹೊಳೆಯಲ್ಲಿ ತೇಲಿಸುವ ಈ ಅಪರೂಪದ ಹಬ್ಬದ ಪರಂಪರೆ, ಆಚರಣೆಯ ವೈಖರಿ ಹಾಗೂ ಅದರ ಹಿಂದಿರುವ ರೋಚಕ ಇತಿಹಾಸದ ಕುರಿತು ನಿಮಗೆಷ್ಟು ಗೊತ್ತು? ಬನ್ನಿ, ಈ ವಿಶಿಷ್ಟ ಸಾಂಸ್ಕೃತಿಕ ಹಬ್ಬದ ಬಗ್ಗೆ ಇಲ್ಲಿದೆ ಮಾಹಿತಿ.

bastar dasara 5

ಈ ಹಬ್ಬವೇ ‘ಬಸ್ತಾರ್ ದಸರಾ’:
ಇದು ಛತ್ತೀಸ್‌ಗಢ ರಾಜ್ಯದ ಬಸ್ತಾರ್ (Bastar) ಜಿಲ್ಲೆಯ ಜಗದಲಪುರದಲ್ಲಿ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಜಗತ್ತಿನಲ್ಲೇ ಅತಿ ಹೆಚ್ಚು ದಿನಗಳ ಕಾಲ (ಸುಮಾರು 75 ದಿನಗಳು) ಸತತವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಈ ಆಚರಣೆಗೆ ಸುಮಾರು 600 ವರ್ಷಗಳ ಸುದೀರ್ಘ ಇತಿಹಾಸವಿದೆ. 13ನೇ ಶತಮಾನದಲ್ಲಿ ಕಾಕತೀಯ ವಂಶದ ರಾಜನಾದ ಪುರುಷೋತ್ತಮ ದೇವ ಈ ಸಂಪ್ರದಾಯವನ್ನು ಆರಂಭಿಸಿದನು ಎಂದು ಇತಿಹಾಸ ಹೇಳುತ್ತದೆ. ಈ ಹಬ್ಬದ ಕೇಂದ್ರ ಬಿಂದು ಸ್ಥಳೀಯ ಬುಡಕಟ್ಟು ಜನರ ಆರಾಧ್ಯ ದೇವತೆಯಾದ ‘ಮಾ ದಂತೇಶ್ವರಿ’.

More Read

rakshita shetty bigg boss
ಬಿಗ್‌ ಬಾಸ್‌ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ – ‘ಪ್ರಶಾಂತಿ’ಯ ಮಲೇಷ್ಯಾ ಲವ್‌ ಗುಟ್ಟು ರಟ್ಟು
Rahul Gandhi and Priyanka Vadra
ನ.1ಕ್ಕೆ ರಾಮಲೀಲಾ ಮೈದಾನದಲ್ಲಿ ಬೃಹತ್‌ ಸಮಾವೇಶ – ಕಠಿಣ ಷರತ್ತು ವಿಧಿಸಿ ಅನುಮತಿ ನೀಡಿದ ದೆಹಲಿ ಪೊಲೀಸರು
Toll
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ವಿಶೇಷ ವಾರ್ಷಿಕ ಪಾಸ್

ಇಲ್ಲಿ ರಾಮನು ರಾವಣನನ್ನು ಸಂಹರಿಸಿದ ವಿಜಯದ ಸಂಕೇತವಾಗಿ ದಸರಾ (Dasara) ಆಚರಿಸುವುದಿಲ್ಲ. ಬದಲಿಗೆ ಪ್ರಕೃತಿ, ಮಾತೃ ದೇವತೆ ಮತ್ತು ಸ್ಥಳೀಯ ಗ್ರಾಮ ದೇವತೆಗಳನ್ನು ಆರಾಧಿಸಲು ಈ ಉತ್ಸವ ನಡೆಯುತ್ತದೆ.

bastar dasara 4

ಬಸ್ತಾರ್ ದಸರಾದ ಇತಿಹಾಸ
ಬಸ್ತಾರ್ ದಸರಾಕ್ಕೆ ಸುಮಾರು 600 ವರ್ಷಗಳಿಗೂ ಹೆಚ್ಚು ಕಾಲದ ಲಿಖಿತ ಹಾಗೂ ಮೌಖಿಕ ಇತಿಹಾಸವಿದೆ. ಇದು ಯಾವುದೇ ಪೌರಾಣಿಕ ಯುದ್ಧದ ವಿಜಯೋತ್ಸವವಲ್ಲದೆ, ಸ್ಥಳೀಯ ರಾಜಪ್ರಭುತ್ವ ಮತ್ತು ಆದಿವಾಸಿ ಬುಡಕಟ್ಟು ಸಮುದಾಯಗಳ ನಡುವಿನ ಅನನ್ಯ ಸಾಮರಸ್ಯದಿಂದ ಹುಟ್ಟಿಕೊಂಡ ಐತಿಹಾಸಿಕ ಆಚರಣೆಯಾಗಿದೆ.

14ನೇ ಶತಮಾನದ ಆರಂಭದಲ್ಲಿ (ಸುಮಾರು ಕ್ರಿ.ಶ. 1313-1324) ಆಂಧ್ರಪ್ರದೇಶದ (Andhra Praesh) ವಾರಂಗಲ್ ಅನ್ನು ಆಳುತ್ತಿದ್ದ ಪ್ರಸಿದ್ಧ ಕಾಕತೀಯ ರಾಜವಂಶವು ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮುಹಮ್ಮದ್ ಬಿನ್ ತುಘಲಕ್‌ನ ದಾಳಿಗಳಿಂದ ಪತನಗೊಂಡಿತು. ಆ ಸಂದರ್ಭದಲ್ಲಿ ಕಾಕತೀಯ ದೊರೆ ಪ್ರತಾಪರುದ್ರನ ಕಿರಿಯ ಸಹೋದರ ರಾಜಾ ಅನ್ನಮದೇವ ವಾರಂಗಲ್‌ನಿಂದ ಪಲಾಯನ ಮಾಡಿ, ಇಂದ್ರಾವತಿ ನದಿಯನ್ನು ದಾಟಿ, ದಂಡಕಾರಣ್ಯದ (ಇಂದಿನ ಬಸ್ತಾರ್) ದಟ್ಟ ಅರಣ್ಯ ಪ್ರದೇಶವನ್ನು ತಲುಪಿದನು. ಸ್ಥಳೀಯ ಬುಡಕಟ್ಟು ಜನರ ಸಹಕಾರದಿಂದ ಆತ ಬಸ್ತಾರ್‌ನಲ್ಲಿ ಕಾಕತೀಯ ಸಂಸ್ಥಾನವನ್ನು ಸ್ಥಾಪಿಸಿದನು. ಅನ್ನಮದೇವ ತನ್ನ ಕುಲದೇವತೆಯಾದ ‘ದಂತೇಶ್ವರಿ’ಯನ್ನು ಬಸ್ತಾರ್‌ನ ತಾರಾಪಾಲ್/ದಂತೇವಾಡದಲ್ಲಿ ಪ್ರತಿಷ್ಠಾಪಿಸಿದನು.

bastar dasara 6

ಬಸ್ತಾರ್ ದಸರಾದ ಇಂದಿನ ರಥೋತ್ಸವದ ಸ್ವರೂಪಕ್ಕೆ ನೇರ ಕಾರಣಕರ್ತ ಕಾಕತೀಯ ಸಂಸ್ಥಾನದ ನಾಲ್ಕನೇ ರಾಜ ಮಹಾರಾಜ ಪುರುಷೋತ್ತಮ ದೇವ. ಈತ ಬಸ್ತಾರ್‌ನಿಂದ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಸಂಪೂರ್ಣ ಕಾಲ್ನಡಿಗೆಯಲ್ಲಿ, ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಹಾಕುತ್ತಾ ಕಠಿಣ ಯಾತ್ರೆ ಕೈಗೊಂಡನು. ರಾಜನ ಅಪಾರ ಭಕ್ತಿಗೆ ಮೆಚ್ಚಿದ ಪುರಿ ಜಗನ್ನಾಥ ದೇವಾಲಯದ ಮುಖ್ಯ ಅರ್ಚಕರು ಮತ್ತು ಒಡಿಶಾದ ಗಜಪತಿ ರಾಜರು ಆತನಿಗೆ ‘ರಥಪತಿ’ (ರಥದ ಒಡೆಯ) ಎಂಬ ಬಿರುದನ್ನು ನೀಡಿದರು. ಜೊತೆಗೆ 16 ಚಕ್ರಗಳ ದೈತ್ಯ ರಥವನ್ನು ಗೌರವಪೂರ್ವಕವಾಗಿ ಕೊಡುಗೆಯಾಗಿ ನೀಡಿದರು. ಅಲ್ಲಿಂದ ಬಸ್ತಾರ್‌ಗೆ ಮರಳಿದ ಪುರುಷೋತ್ತಮ ದೇವ ತನಗೆ ಸಿಕ್ಕ ಗೌರವವನ್ನು ಸ್ವಂತಕ್ಕೆ ಇಟ್ಟುಕೊಳ್ಳದೆ, 16 ಚಕ್ರಗಳಲ್ಲಿ 4 ಚಕ್ರಗಳನ್ನು ಪುರಿಯ ಜಗನ್ನಾಥನಿಗೆ ಸಾಂಕೇತಿಕವಾಗಿ ಅರ್ಪಿಸಿ, ಉಳಿದ 12 ಚಕ್ರಗಳ ರಥವನ್ನು ಬಸ್ತಾರ್‌ನ ಕುಲದೇವತೆ ಮಾ ದಂತೇಶ್ವರಿಗೆ ಸಮರ್ಪಿಸಿದನು.

ಈ 12 ಚಕ್ರಗಳ ಪರಿಕಲ್ಪನೆಯನ್ನು ನಂತರದ ದಿನಗಳಲ್ಲಿ 4 ಚಕ್ರಗಳ ‘ಫೂಲ್ ರಥ’ ಮತ್ತು 8 ಚಕ್ರಗಳ ‘ವಿಜಯ್ ರಥ’ವಾಗಿ ವಿಂಗಡಿಸಿ, ಪ್ರತಿ ವರ್ಷ ದಸರಾ ಸಮಯದಲ್ಲಿ ಎಳೆಯುವ ಸಂಪ್ರದಾಯವನ್ನು ಆತ ಆರಂಭಿಸಿದನು. ಇದುವೇ ಬಸ್ತಾರ್ ದಸರಾದ ಅಧಿಕೃತ ಆರಂಭ.

bastar dasara 8

ಬಸ್ತಾರ್‌ನ ಬಹುಪಾಲು ಜನಸಂಖ್ಯೆ ಮಾರಿಯಾ, ಮುರಿಯಾ, ಧುರ್ವಾ, ಭಾತ್ರಾ ಮತ್ತು ಹಲ್ಬಾ ಮುಂತಾದ ಬುಡಕಟ್ಟು ಜನಾಂಗಗಳಿಗೆ ಸೇರಿದ್ದು. ಹೊಸದಾಗಿ ಬಂದ ಕಾಕತೀಯ ರಾಜರು ಈ ಬುಡಕಟ್ಟು ಸಮುದಾಯಗಳ ಮೇಲೆ ತಮ್ಮ ನಿಯಮಗಳನ್ನು ಹೇರದೆ, ಅವರ ಸ್ಥಳೀಯ ಆಚರಣೆಗಳನ್ನು ಗೌರವಿಸಿದರು. ರಾಜನು ಸ್ವತಃ ದಂತೇಶ್ವರಿ ದೇವಿಯ ಪ್ರಧಾನ ಅರ್ಚಕನಾಗಿ (ದೇವಿಯ ಸೇವಕ) ಕಾರ್ಯನಿರ್ವಹಿಸಿದನು. ದಸರಾವನ್ನು ಕೇವಲ ಅರಮನೆಯ ಹಬ್ಬವನ್ನಾಗಿ ಮಾಡದೆ, ಇಡೀ ಬಸ್ತಾರ್‌ನ ಪ್ರತಿಯೊಂದು ಬುಡಕಟ್ಟು ಸಮುದಾಯಕ್ಕೂ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಿದನು. ಇದರಿಂದಾಗಿ ಬುಡಕಟ್ಟು ಜನರಲ್ಲಿ ರಾಜನ ಆಡಳಿತದ ಬಗ್ಗೆ ಆತ್ಮೀಯತೆ ಬೆಳೆಯಿತು.

ಮುರಿಯಾ ದರ್ಬಾರ್
ದಸರಾ ಸಂಭ್ರಮಕ್ಕಾಗಿ ರಾಜ್ಯದ ನಾನಾ ಮೂಲೆಗಳಿಂದ ಕಾಡು-ಮೇಡು ದಾಟಿ ಬರುವ ಬುಡಕಟ್ಟು ಮುಖ್ಯಸ್ಥರು ಉತ್ಸವ ಮುಗಿಯುವ ಮುನ್ನ ರಾಜನೊಂದಿಗೆ ನೇರವಾಗಿ ಮುಖಾಮುಖಿ ಕುಳಿತು ಮಾತನಾಡಲು ಒಂದು ದಿನ ನಿಗದಿಯಾಯಿತು. ಇದನ್ನೇ ಮುರಿಯಾ ದರ್ಬಾರ್ ಎನ್ನಲಾಯಿತು. ಇಲ್ಲಿ ಬುಡಕಟ್ಟು ಜನರು ಕಾಡಿನ ಸಂಪನ್ಮೂಲ, ಕೃಷಿ, ನೀರು, ಕಂದಾಯ ಮತ್ತು ಸ್ಥಳೀಯ ವಿವಾದಗಳ ಬಗ್ಗೆ ರಾಜನೊಂದಿಗೆ ಚರ್ಚಿಸುತ್ತಿದ್ದರು. ರಾಜನು ಸ್ಥಳದಲ್ಲೇ ತೀರ್ಮಾನಗಳನ್ನು ನೀಡುತ್ತಿದ್ದನು.

bastar dasara 7

1947ರಲ್ಲಿ ಭಾರತ ಸ್ವತಂತ್ರಗೊಂಡು ಸಂಸ್ಥಾನಗಳು ವಿಲೀನಗೊಂಡ ಮೇಲೂ ಈ ಪರಂಪರೆ ನಿಲ್ಲಲಿಲ್ಲ. ಇಂದಿಗೂ ಮುರಿಯಾ ದರ್ಬಾರ್ ನಡೆಯಲಿದ್ದು, ರಾಜನ ಜಾಗದಲ್ಲಿ ರಾಜ್ಯದ ಮುಖ್ಯಮಂತ್ರಿ ಅಥವಾ ಸಚಿವರು, ಜಿಲ್ಲಾಧಿಕಾರಿಗಳು ಕುಳಿತು ಆದಿವಾಸಿಗಳ ಸಮಸ್ಯೆಗಳನ್ನು ಆಲಿಸುತ್ತಾರೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಬಸ್ತಾರ್ ದಸರಾ ಆಚರಣೆಗೆ ಯಾವುದೇ ಧಕ್ಕೆ ಬರಲಿಲ್ಲ. ಇತಿಹಾಸದುದ್ದಕ್ಕೂ ಬಸ್ತಾರ್ ದಸರಾ ಎಂದರೆ ಒಂದು ಸಾಮ್ರಾಜ್ಯದ ವಿಜಯವಲ್ಲ, ಬದಲಿಗೆ ಪ್ರಕೃತಿ, ಮಾತೃದೇವತೆ ಮತ್ತು ಜನಸಾಮಾನ್ಯರ ಸಾಂಸ್ಕೃತಿಕ ಸಾರ್ವಭೌಮತ್ವದ ಪ್ರತೀಕವಾಗಿ ನಿರಂತರವಾಗಿ ನಡೆದುಕೊಂಡು ಬಂದಿದೆ.

bastar dasara 2

ಶ್ರಾವಣ ಮಾಸದ ಅಮಾವಾಸ್ಯೆಯಂದು (ಹರೇಲಿ ಹಬ್ಬದ ವೇಳೆ) ಆರಂಭವಾಗುವ ಈ ಉತ್ಸವ, ಆಶ್ವಯುಜ ಮಾಸದ ಶುಕ್ಲ ಪಕ್ಷದವರೆಗೂ ಮುಂದುವರಿಯುತ್ತದೆ. ದೇಶದ ಬಹುತೇಕ ಕಡೆ ರಾವಣನ ಪ್ರತಿಕೃತಿ ದಹನ ಮಾಡುವುದು ದಸರಾದ ಮುಖ್ಯ ಆಕರ್ಷಣೆ. ಆದರೆ ಬಸ್ತಾರ್‌ನಲ್ಲಿ ರಾವಣ ದಹನವಾಗಲೀ ಅಥವಾ ರಾಮನ ಪೂಜೆಯಾಗಲೀ ಇರುವುದಿಲ್ಲ. ಕಾಡಿನಿಂದ ಮರಗಳನ್ನು ತಂದು ಸ್ಥಳೀಯ ಕುಶಲಕರ್ಮಿಗಳು ಬೃಹತ್ ರಥವನ್ನು ನಿರ್ಮಿಸುತ್ತಾರೆ. ಈ ರಥದ ನಿರ್ಮಾಣದಲ್ಲಿ ಒಂದೇ ಒಂದು ಕಬ್ಬಿಣದ ಮೊಳೆಯನ್ನೂ ಬಳಸದೆ ಕೇವಲ ಸಾಂಪ್ರದಾಯಿಕ ಮರದ ಕೀಲುಗಳು ಮತ್ತು ಹಗ್ಗಗಳನ್ನು ಬಳಸುವುದು ಇದರ ವಾಸ್ತುಶಿಲ್ಪದ ಹೆಗ್ಗಳಿಕೆ.

ಬಸ್ತಾರ್‌ನ ಮಾರಿಯಾ, ಮುರಿಯಾ, ಧುರ್ವಾ, ಭಾತ್ರಾ ಮುಂತಾದ ಹಲವು ಬುಡಕಟ್ಟು ಜನಾಂಗಗಳು ಒಟ್ಟಾಗಿ ಈ ಹಬ್ಬವನ್ನು ನಡೆಸುತ್ತವೆ. ರಥಕ್ಕೆ ಮರ ತರುವುದು, ಹಗ್ಗ ಹೊಸೆಯುವುದು, ರಥ ಎಳೆಯುವುದು ಹಾಗೂ ಭದ್ರತೆ ಒದಗಿಸುವುದು ಹೀಗೆ ಪ್ರತಿಯೊಂದು ಕೆಲಸವೂ ನಿರ್ದಿಷ್ಟ ಬುಡಕಟ್ಟು ಸಮುದಾಯಕ್ಕೆ ಹಂಚಿಕೆಯಾಗಿರುತ್ತದೆ. ಉತ್ಸವದ ಕೊನೆಯ ಹಂತದಲ್ಲಿ ರಾಜ ಮತ್ತು ಎಲ್ಲಾ ಬುಡಕಟ್ಟು ಮುಖಂಡರು ಮುಖಾಮುಖಿ ಕುಳಿತು ತಮ್ಮ ಸಮಸ್ಯೆಗಳನ್ನು ಚರ್ಚಿಸುವ ‘ಮುರಿಯಾ ದರ್ಬಾರ್’ ನಡೆಯುತ್ತದೆ. ಇದು ಹಿಂದಿನ ಕಾಲದ ಪ್ರಜಾಸತ್ತಾತ್ಮಕ ಪದ್ಧತಿಗೆ ಸಾಕ್ಷಿ.

bastar dasara 1

ರಥ ನಿರ್ಮಾಣಕ್ಕೆ ಅಗತ್ಯವಾದ ಮೊದಲ ಮರದ ದಿಮ್ಮಿಯನ್ನು ಕಾಡಿನಿಂದ ತಂದು ಪೂಜಿಸುವುದರೊಂದಿಗೆ 75 ದಿನಗಳ ಆಚರಣೆ ಅಧಿಕೃತವಾಗಿ ಆರಂಭವಾಗುತ್ತದೆ. ಆಚರಣೆಯು ಸುಸೂತ್ರವಾಗಿ ಸಾಗಲು ಕಾಚನ್ ದೇವತೆಯ ಅನುಮತಿ ಪಡೆಯುವ ಅಪರೂಪದ ಆಚರಣೆ. ಇದರಲ್ಲಿ ಮುಳ್ಳಿನ ಹಾಸಿಗೆಯ ಮೇಲೆ ಕುಳಿತು ದೇವಿಯ ಆದೇಶ ಪಡೆಯಲಾಗುತ್ತದೆ. ಅಲಂಕೃತ ಬೃಹತ್ ರಥದಲ್ಲಿ ದಂತೇಶ್ವರಿ ದೇವಿಯ ಛತ್ರವನ್ನು ಇರಿಸಿ, ಸಾವಿರಾರು ಭಕ್ತರು ಸಾಂಪ್ರದಾಯಿಕ ವಾದ್ಯಗಳೊಂದಿಗೆ ರಥವನ್ನು ಎಳೆಯುತ್ತಾರೆ. ಉತ್ಸವದ ಅಂತಿಮ ದಿನಗಳಲ್ಲಿ ನಡೆಯುವ ವಿಧಿಗಳು. ಇದರಲ್ಲಿ ಸಾಂಕೇತಿಕವಾಗಿ ರಥವನ್ನು ಅಪಹರಿಸಿ ಕಾಡಿನಲ್ಲಿ ಬಚ್ಚಿಡುವುದು ಮತ್ತು ನಂತರ ರಾಜನು ಜನರನ್ನು ಸಮಾಧಾನಪಡಿಸಿ ರಥವನ್ನು ಮರಳಿ ತರುವ ರೋಚಕ ಸಂಪ್ರದಾಯ ಸೇರಿದೆ.

ರಥವು ಸುರಕ್ಷಿತವಾಗಿ ಅರಮನೆ ಹಾಗೂ ದಂತೇಶ್ವರಿ ದೇವಾಲಯದ ಎದುರು ಮರಳಿದ ನಂತರ, ಉತ್ಸವಕ್ಕೆ ಆರಂಭದಲ್ಲಿ ಅನುಮತಿ ನೀಡಿದ್ದ ‘ಕಾಚನ್ ದೇವಿ’ಗೆ ವಿಶೇಷ ಧನ್ಯವಾದ ಅರ್ಪಿಸುವ ಪೂಜೆ ನಡೆಯುತ್ತದೆ. ಯಾವುದೇ ಅಡೆತಡೆಗಳಿಲ್ಲದೆ ಉತ್ಸವ ಪೂರ್ಣಗೊಂಡಿದ್ದಕ್ಕೆ ದೇವಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

bastar dasara

ಉತ್ಸವದಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ಬಂದಿದ್ದ ಎಲ್ಲಾ ದೇವಿ-ದೇವತೆಗಳ ‘ಪರಿವಾರ’ಕ್ಕೆ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ಸಮುದಾಯದ ಎಲ್ಲಾ ಜನರು ಒಟ್ಟಾಗಿ ಕುಳಿತು ಪ್ರಸಾದ ರೂಪದ ಊಟವನ್ನು ಸ್ವೀಕರಿಸುತ್ತಾರೆ. ದಸರೆಗಾಗಿ ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ತಮ್ಮ ಗ್ರಾಮ ದೇವತೆಗಳ ಪವಿತ್ರ ಲಾಂಛನಗಳು ಮತ್ತು ಡೋಲು-ವಾದ್ಯಗಳ ಸಮೇತ ಆಗಮಿಸಿದ್ದ ಎಲ್ಲಾ ಆದಿವಾಸಿ ಪೂಜಾರಿಗಳು ಹಾಗೂ ಮುಖಂಡರಿಗೆ ವಿದಾಯ ಕೋರಲಾಗುತ್ತದೆ.

ರಾಜಪರಿವಾರ ಮತ್ತು ಜಿಲ್ಲಾಡಳಿತವು ಪ್ರತಿಯೊಬ್ಬ ಪೂಜಾರಿಗೂ ಸಾಂಪ್ರದಾಯಿಕ ಧೋತಿ, ಶಾಲು, ತೆಂಗಿನಕಾಯಿ ಹಾಗೂ ಕಾಣಿಕೆ ನೀಡಿ ಗೌರವಿಸುತ್ತದೆ. ದೇವತೆಗಳ ಲಾಂಛನಗಳನ್ನು ಹೊತ್ತ ಜನರು ತಮ್ಮ ಊರುಗಳತ್ತ ಮುಖ ಮಾಡುವುದರೊಂದಿಗೆ ಬಸ್ತಾರ್‌ನ 75 ದಿನಗಳ ಸುದೀರ್ಘ ಉತ್ಸವಕ್ಕೆ ಅಧಿಕೃತವಾಗಿ ತೆರೆಬೀಳುತ್ತದೆ.

bastar dasara 3

Share This Article
Facebook Whatsapp Whatsapp Telegram Copy Link
Cinema News
darshan zaid khan
ಧನ್ವೀರ್‌ಗೆ ವಾರ್ನಿಂಗ್ ಕೊಡೋಕೆ ದರ್ಶನ್ ಅಣ್ಣ ಹೇಳಿದ್ರು: ಝೈದ್ ಖಾನ್
Rajath Kishan
ಧನ್ವೀರ್ 11 ಕೋಟಿ ಹಣ ತಗೊಂಡಿದ್ರೂ ಇಲ್ಲ ಅಂತಾನೆ, ಮಾಡಿರೋ ಆರೋಪಗಳೆಲ್ಲವೂ ಸುಳ್ಳು: ರಜತ್
Bigg bosss 13
ದೊಡ್ಮನೆಯಲ್ಲಿ `ಶೆಟ್ಟಿ ಡಾನ್’ ಸ್ವಯಂವರ – ವಧು ಸೌಂದರ್ಯಗೆ ವರನಾಗಲು ಹುಡುಗರ ಕಸರತ್ತು
Kavya Maran Anirudh
ಅನಿರುದ್ಧ್‌-ಕಾವ್ಯಾ ಆರತಕ್ಷತೆ ಆಹ್ವಾನ ಪತ್ರಿಕೆ ವೈರಲ್‌; ಮೋದಿ, ವಿಜಯ್‌ಗೆ ರಾಯಲ್‌ ಇನ್ವಿಟೇಷನ್

You Might Also Like

Pralhad Joshi 1

ವೋಟ್ ಚೋರಿ ಆರೋಪಕ್ಕೆ ಉತ್ತರ, 2028ರ ಚುನಾವಣೆಗೆ ಇದು ದಿಕ್ಸೂಚಿ: ಜೋಶಿ

2 hours ago
Baloch Prince

ಪಾಕಿಸ್ತಾನದಲ್ಲಿ ಬಲೂಚ್ ರಾಜಕುಮಾರ & ಮೂವರು ಅಂಗರಕ್ಷಕರು ಕಿಡ್ನ್ಯಾಪ್‌

2 hours ago
KM Suresh BJP

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸುರೇಶ್‌ಗೆ ಭರ್ಜರಿ ಗೆಲುವು – ನಾಲ್ಕೂ ಕ್ಷೇತ್ರ ಗೆದ್ದ ಎನ್‌ಡಿಎ

1 minute ago
Pradeep Eshwar MC Sudhakar

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಮುಗಿಯದ ಭಿನ್ನಮತ – ಎಐಸಿಸಿ ವೀಕ್ಷಕರ ಎದುರೇ ಸಿಡಿದೆದ್ದ ಸುಧಾಕರ್ ಬೆಂಬಲಿಗರು

2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact