ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ಅಧಿಕೃತ ವೆಬ್ಸೈಟ್ ವಿಳಾಸವನ್ನು ಬದಲಾಯಿಸಿದ್ದು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ನೂತನ ವೆಬ್ಸೈಟ್ ಪೋರ್ಟಲ್ (Website Portal) ಅನ್ನು ಚಾಲ್ತಿಗೆ ತಂದಿದೆ.
ಆಡಳಿತಾತ್ಮಕ ಕಾರಣಗಳಿಂದಾಗಿ ಈ ಬದಲಾವಣೆಯನ್ನು ಮಾಡಲಾಗಿದ್ದು, ಈ ಹಿಂದೆ ಬಳಕೆಯಲ್ಲಿದ್ದ ವೆಬ್ಸೈಟ್ ವಿಳಾಸ kpsc.kar.nic.in ಅನ್ನು ಬದಲಾಯಿಸಿ, ಈಗ ಹೊಸದಾಗಿ https://kpsc.karnataka.gov.in ವೆಬ್ಸೈಟ್ ವಿಳಾಸವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. ಇದನ್ನೂ ಓದಿ: ಆಯುಧ ಪೂಜೆ | ಗಗನಕ್ಕೇರಿದ ಹೂವು, ಹಣ್ಣು ಬೆಲೆ – ಖರೀದಿಗೆ ಮುಗಿಬಿದ್ದ ಜನ
ಇನ್ಮುಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ, ಅಧಿಸೂಚನೆಗಳು ಹಾಗೂ ಅಭ್ಯರ್ಥಿಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಪಡೆಯಲು ನೂತನ ವೆಬ್ಸೈಟ್ https://kpsc.karnataka.gov.in ಅನ್ನು ಮಾತ್ರ ವೀಕ್ಷಿಸಬೇಕೆಂದು ಆಯೋಗದ ಕಾರ್ಯದರ್ಶಿಯವರಾದ ಜ್ಯೋತಿ ಕೆ. ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆ ಇಲ್ಲ – ಇನ್ನೂ 2 ದಿನ ರಾಂಕಾ, ದಾಸ್ಗೆ ತಿಹಾರ್ ಜೈಲೇ ಗತಿ
