ಧಾರವಾಡ: ಕಬ್ಬು ಬೆಳೆಗಾರರ (Sugarcane Farmer) ಬೇಡಿಕೆಗಳ ಈಡೇರಿಕೆಗೆ ಹೋರಾಟಗಾರರು ನ.26ಕ್ಕೆ ಡೆಡ್ಲೈನ್ ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಪ್ರಹ್ಲಾದ್ ಜೋಶಿಯವರ (Pralhad Joshi) ಮನೆಗೆ ಮುತ್ತಿಗೆ ಹಾಕುವುದಾಗಿ ರೈತ ಮುಖಂಡ ಚೂನಪ್ಪ ಪೂಜೇರಿ ಎಚ್ಚರಿಕೆ ಕೊಟ್ಟಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರ ರೈತರು ಒಂದು ತಿಂಗಳ ಗಡುವು ನೀಡಿ ತಮ್ಮ ಹೋರಾಟ ವಾಪಸ್ ಪಡೆದಿದ್ದಾರೆ. ಅ.18 ರಂದು ತಡರಾತ್ರಿ ಹುಬ್ಬಳ್ಳಿ-ಧಾರವಾಡದ ಐಬಿಯಲ್ಲಿ ನಡೆದ ಸಭೆ ಬೆಳಗಿನ ಜಾವ ಅಂತ್ಯವಾಗಿದೆ. ಸಭೆಯಲ್ಲಿ ಎಂಎಸ್ಪಿ ಹೆಚ್ಚಳ, ವಾಣಿಜ್ಯ ಸಕ್ಕರೆ ಮಾರಾಟ ಮತ್ತು ಎಥೆನಾಲ್ ದರ 100 ನಿಗದಿಪಡಿಸುವ ಕುರಿತು ರೈತರು ಒತ್ತಾಯಿಸಿದರು. ಇದನ್ನೂ ಓದಿ: ಧಾರವಾಡಕ್ಕೆ ತಲುಪಿದ ಪಾದಯಾತ್ರೆ: ಸರ್ಕಾರದ ಮನವಿಗೂ ಜಗ್ಗದ ಕಬ್ಬು ಬೆಳೆಗಾರರು
ಇದಕ್ಕೆ ಪ್ರಹ್ಲಾದ್ ಜೋಶಿಯವರು, ಕೇಂದ್ರ ಸಮಿತಿ ವರದಿ ಪಡೆದು ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೇಳಿದ್ದಾರೆ. ಸಚಿವರ ಮನವಿಗೆ ಸ್ಪಂದಿಸಿ ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲು ರೈತರು ಒಪ್ಪಿದ್ದಾರೆ. ಆದರೆ ನವೆಂಬರ್ 26ರವರೆಗೆ ಡೆಡ್ಲೈನ್ ನೀಡಿದ್ದಾರೆ. ಇದನ್ನೂ ಓದಿ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ; ರೈತರ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ
ರೈತರ ಪ್ರಮುಖ ಬೇಡಿಕೆಗಳು ಏನು?
– ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿಪಡಿಸಬೇಕು.
– ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಿಸಬೇಕು.
– ರಾಜ್ಯದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಎಥೆನಾಲ್ ಅನ್ನು ಸರ್ಕಾರವೇ ಖರೀದಿಸಬೇಕು.
– ಡಾ. ಸ್ವಾಮಿನಾಥನ್ ಆಯೋಗದ ವರದಿ ಹಾಗೂ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಬೇಕು.
