ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ (Karnataka Governor) ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆಯಲ್ಲಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ.
ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯೆ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡಿನ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ಹೊಸ ಫಾರ್ಮ್ 6ಕ್ಕೆ ನಾವು ಅನುಮೋದನೆ ಕೊಟ್ಟಿಲ್ಲ: ಅ.27ಕ್ಕೆ ಅರ್ಜಿಗಳ ಪರಿಶೀಲನೆಯೆಂದ ಸುಪ್ರೀಂ
ಇದೇ ವೇಳೆ, ಒಡಿಶಾದ ನೂತನ ರಾಜ್ಯಪಾಲರಾಗಿ ಬ್ರಜ್ ಮೋಹನ್ ರಾಮ್, ಉತ್ತರಾಖಂಡದ ರಾಜ್ಯಪಾಲರಾಗಿ ಡಾ. ಧಾಲ್ ಸಿಂಗ್ ಬಿಸೆನ್ ಹಾಗೂ ಸಿಕ್ಕಿಂನ ರಾಜ್ಯಪಾಲರಾಗಿ ದುಷ್ಯಂತ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿಗಳು ಸಂಬಂಧಪಟ್ಟ ರಾಜ್ಯಗಳಲ್ಲಿ ನೂತನ ರಾಜ್ಯಪಾಲರು ಅಧಿಕಾರ ವಹಿಸಿಕೊಳ್ಳುವ ದಿನದಿಂದ ಜಾರಿಗೆ ಬರಲಿವೆ. ಇದನ್ನೂ ಓದಿ: ಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 18 ಲಕ್ಷ ಮೌಲ್ಯದ 29 ದ್ವಿಚಕ್ರ ವಾಹನ ವಶಕ್ಕೆ

