– ಕನ್ನಾಳೆ ಪತ್ನಿಗೆ ಹೆಣ್ಣುಮಗು ಜನಿಸಿದೆ, ನಾಮಕರಣಕ್ಕೆ ಜಾಮೀನು ಬೇಕಿದೆ ಅಂತ ಮನವಿ ಮಾಡಿದ್ದ ವಕೀಲರು
ಬೆಂಗಳೂರು: ಕೆಪಿಎಸ್ಸಿ (KPSC Scam) ಅಕ್ರಮದ ಕಿಂಗ್ಪಿನ್ ಬಸವರಾಜ್ ಕನ್ನಾಳೆಗೆ (Basavaraj Kannale) ಐದು ದಿನಗಳ ವರೆಗೆ ಜಾಮೀನು ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿದರು. ಕನ್ನಾಳೆ ಪರ ಹಿರೊಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಇದನ್ನೂ ಓದಿ: KPSC: ನ್ಯಾಯಯುತವಾಗಿ ಪರೀಕ್ಷೆ ಬರೆದ 24 ಅಭ್ಯರ್ಥಿಗಳ ಲಿಸ್ಟ್ ಕೋರ್ಟ್ಗೆ ನೀಡಿದ ಇ.ಡಿ
ಕನ್ನಾಳೆ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 12 ದಿನದ ಮಗುವಿಗೆ ನಾಮಕರಣದ ಅಗತ್ಯವಿದೆ. ಮಾನವೀಯತೆ ಮೇಲೆ ಒಂದು ವಾರದ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಿದರು.
5 ದಿನಗಳ ಕಾಲ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ. ಅ.15ರಿಂದ 20ರ ವರೆಗೆ ಜಾಮೀನು ನೀಡಲಾಗಿದೆ. ಪೊಲೀಸರು ಜೊತೆಯಲ್ಲಿಯೇ ಹೋಗಬೇಕು. ಮೊಬೈಲ್ ಬಳಸಬಾರದು. ಐದು ದಿನದ ಒಳಗಾಗಿ ನಾಮಕರಣ ಮುಗಿಸಬೇಕು. ಒಬ್ಬರೇ ಹೋಗಲು ಅನುಮತಿಸಬಾರದು ಅಂತಾ ಷರತ್ತು ವಿಧಿಸಿದೆ. ಇದನ್ನೂ ಓದಿ: ಎಸ್ಐಆರ್ ಮಾತ್ರವಲ್ಲ, ಇವಿಎಂ ಕೂಡ ಹ್ಯಾಕ್ ಆಗ್ತಿದೆ: ಮಾಜಿ ಸಚಿವ ಟಿಬಿ ಜಯಚಂದ್ರ
ಪೊಲೀಸರು ಕನ್ನಾಳೆ ಮನೆ ಮತ್ತು ಆಸ್ಪತ್ರೆಗೆ ಹೋಗಿವಂತಿಲ್ಲ. ಪೊಲೀಸರು ಇಲ್ಲದಿರುವಾಗ ಮೊಬೈಲ್ ಬಳಸಬಾರದು. ಬೀದರ್ಗೆ ಪೊಲೀಸರು ಕರೆದೊಯ್ಯಬೇಕು. ಬೇರೆ ಯಾರನ್ನೂ ಭೇಟಿಯಾಗಬಾರದೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

