ಈಗಾಗಲೇ ಬಹುತಾರಾಗಣ ಹೊಂದಿರುವಂತಹ ರಾಮರಸ ಚಿತ್ರ ತಂಡದಲ್ಲಿ ನಟ ಶ್ರೀಮುರಳಿ (Shri Murali) ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಲೀಕಾದ ಫೋಟೋದಲ್ಲಿ ಶ್ರೀಮುರಳಿಯವರ ಡಬ್ಬಿಂಗ್ ಮಾಡುತ್ತಿದ್ದರು. ಹಾಗಾಗಿ ಫೋಟೋ ಕಂಡು ತಲೆಕೆಡಿಸಿಕೊಂಡ ಅವರ ಅಭಿಮಾನಿಗಳು ರಾಮರಸದಲ್ಲಿ ಶ್ರೀ ಮುರುಳಿ ಅವರ ಪಾತ್ರ ಏನು ಅಂತ ಚರ್ಚೆ ಮಾಡುತ್ತಿದ್ದಾರೆ. ಸದ್ಯದಲ್ಲೇ ಫೋಟೋ ಅಸಲಿಕತೆಯನ್ನು ಚಿತ್ರತಂಡ ಬಿಚ್ಚಿಡುವುದಾಗಿ ಹೇಳಿಕೊಂಡಿದೆ.
ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ದೈವಿಕ ಫ್ಯಾಂಟಸಿ ಚಿತ್ರ ರಾಮರಸ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಜೊತೆಗೆ ಬಿಡುಗಡೆಯ ದಿನಾಂಕ ಅಂತಿಮವಾಗಿದೆ. ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶನದ, ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಅವರ ಬಿಗ್ ಬಜೆಟ್ ನಿರ್ಮಾಣದ ಈ ಸಿನಿಮಾ, ಫ್ಯಾಂಟಸಿ, ಜಾನಪದ ಮತ್ತು ಪರಾಶಕ್ತಿಯ ದೈವಿಕ ರಹಸ್ಯಗಳ ಅದ್ಭುತ ಸಮ್ಮಿಲನವಾಗಿದೆ. ಇದನ್ನೂ ಓದಿ: ದಸರಾ ಸಂಭ್ರಮ – ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಅಗ್ನಿಪರೀಕ್ಷೆಯ ಲಕ್ಷ್ಮಿ, ಕುಮಾರಿ

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಾಲಿವುಡ್ ಸೆನ್ಸೇಷನ್ ಅದಾ ಶರ್ಮಾ ಮತ್ತು ಹೆಬಾ ಪಟೇಲ್ ಸೇರಿದಂತೆ ಬೃಹತ್ ತಾರಾಬಳಗ ಈ ಚಿತ್ರದಲ್ಲಿದೆ. ಪಾತ್ರದ ಅನಾವರಣದ ಬಗ್ಗೆ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ರಾಮರಸದ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರಿಗೆ ಹೊಸ ಲೋಕವನ್ನೇ ತೆರೆದಿಡುತ್ತದೆ, ಇದು ಕೇವಲ ಸಿನಿಮಾವಲ್ಲ, ಒಂದು ದೈವಿಕ ಅನುಭವ ಎಂದಿದ್ದಾರೆ.
ಪರಂಪರಾಗತ ಜಾನಪದ ಮತ್ತು ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಸ್ಫೂರ್ತಿ ಪಡೆದ, ದಶ ಮಹಾವಿದ್ಯೆಯರ ಹಿನ್ನೆಲೆಯುಳ್ಳ, ಪರಾಶಕ್ತಿಯ ದೈವಿಕ ಆಟವನ್ನು ಅನ್ವೇಷಿಸುವ ಬಿಗ್ಗೆಸ್ಟ್ ಫ್ಯಾಂಟಸಿ ಎಂಟರ್ಟೈನರ್ ಸಿನಿಮಾ ಇದಾಗಿದೆ. ರಾಮರಸ ಸಿನಿಮಾ ಡಿಸೆಂಬರ್ 11 ರಂದು ವಿಶ್ವದಾದ್ಯಂತ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಿಡುಗಡೆ ಆಗಲಿದೆ.
ಇದೊಂದು ಮಲ್ಟಿಸ್ಟಾರ್ ಸಿನಿಮಾವಾಗಿದ್ದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್, ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್, ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಪ್ಯಾನ್ ಇಂಡಿಯಾ ಸ್ಟಾರ್ ಅದಾ ಶರ್ಮಾ ಸೇರಿದಂತೆ ಅನುಭವಿ ತಾರಾ ಬಳಗವೇ ಸಿನಿಮಾದಲ್ಲಿದೆ.ಇದನ್ನೂ ಓದಿ: ಅನಾರೋಗ್ಯದ ಕಾರಣದಿಂದ ಬಿಗ್‌ಬಾಸ್ ಮನೆಯಿಂದ ಸಂಗೀತಾ ಭಟ್ ಔಟ್

