ಮೈಸೂರು: ಐದಾರು ವರ್ಷಗಳಿಂದ ದಸರಾ (Mysuru dasara 2026) ಮಿಸ್ ಮಾಡಿಕೊಳ್ತಿದ್ದೆ, ಈ ಬಾರಿ ಯುವದಸರಾಗೆ ಆಹ್ವಾನ ಬಂದ ತಕ್ಷಣವೇ ಒಪ್ಪಿಕೊಂಡೆ ಎಂದು ನಟ ಹಾಗೂ ನೃತ್ಯ ಸಂಯೋಜಕ ಪ್ರಭುದೇವ ಹೇಳಿದ್ದಾರೆ.
ಮೈಸೂರಿನ ಯುವದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿರುವ ಪ್ರಭುದೇವ, ಪಬ್ಲಿಕ್ ಟಿವಿ ಜೊತೆ ತಮ್ಮ ಬಾಲ್ಯದ ನೆನಪುಗಳು ಹಾಗೂ ದಸರಾ ಸಂಭ್ರಮದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಮೈಸೂರು ದಸರಾ ಕುರಿತು ಮಾತನಾಡಿದ ಅವರು, ನಾನು ಇಲ್ಲಿಯವರೆಗೆ ಕಣ್ಣಾರೆ ದಸರಾ ನೋಡೇ ಇರಲಿಲ್ಲ. ಈ ಬಾರಿ ಯುವದಸರಾಗೆ ಆಹ್ವಾನ ಬಂದ ತಕ್ಷಣವೇ ಯಾವುದೇ ಯೋಚನೆ ಮಾಡದೆ ಒಪ್ಪಿಕೊಂಡೆ. ನನಗೆ ಬಹಳ ಸಂತೋಷವಾಗುತ್ತಿದೆ. ದಸರಾದಲ್ಲಿ ಇಷ್ಟು ಅದ್ಭುತವಾದ ಕಾರ್ಯಕ್ರಮಗಳು ಇರುತ್ತವೆ ಅಂತಾ ನನಗೆ ಇಲ್ಲಿ ಬಂದ ಮೇಲೆಯೇ ಗೊತ್ತಾಗಿದ್ದು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ಬಂದ ಹೆಸ್ಕಾಂ ಸಿಬ್ಬಂದಿ ಮೇಲೆ ಬೀದಿ ನಾಯಿ ದಾಳಿ
ನಮ್ಮ ತಾಯಿಯ ಊರು ‘ದೂರ,’ (ಮೈಸೂರು ಜಿಲ್ಲೆಯ ದೂರ ಗ್ರಾಮ) ಹಾಗೂ ತಂದೆಯ ಊರು ಮೂಗೂರು. ನಾನು ಚಿಕ್ಕ ವಯಸ್ಸಿನಲ್ಲಿ ಏಪ್ರಿಲ್ ತಿಂಗಳ ಬೇಸಿಗೆ ರಜೆಗೆ ಮಾತ್ರ ಇಲ್ಲಿಗೆ ಬರುತ್ತಿದ್ದೆ. ಆದರೆ, ದಸರಾ ಹಬ್ಬವು ಅಕ್ಟೋಬರ್ ತಿಂಗಳಲ್ಲಿ ಬರುವುದರಿಂದ, ಹಿಂದೆ ನನಗೆ ದಸರಾ ನೋಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ನಮ್ಮ ತಾಯಿ ಹಿಂದೆ ಕಣ್ಣಾರೆ ದಸರಾ ನೋಡಿ ಎಂಜಾಯ್ ಮಾಡಿದ್ದಾರೆ, ಈಗ ನಾನು ಯುವದಸರಾ ಉದ್ಘಾಟನೆ ಮಾಡುತ್ತಿರುವುದನ್ನು ಕೇಳಿ ನನ್ನ ಅಪ್ಪ-ಅಮ್ಮ ಇಬ್ಬರೂ ತುಂಬಾ ಖುಷಿಪಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ದಸರಾ ಸಂಭ್ರಮ – ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಅಗ್ನಿಪರೀಕ್ಷೆಯ ಲಕ್ಷ್ಮಿ, ಕುಮಾರಿ

