ಬೆಂಗಳೂರು: ಗೃಹಜ್ಯೋತಿ (Gruhajyothi) ಫಲಾನುಭವಿಗಳ ಪರಿಶೀಲನೆಗೆ ಮತ್ತೆ ಒಂದು ತಿಂಗಳ ಗಡುವು ವಿಸ್ತರಣೆ ಮಾಡಲಾಗಿದ್ದು, ಅ.31ರವರೆಗೆ ಅವಕಾಶ ನೀಡಲಾಗಿದೆ.
ಜುಲೈ 1ರಿಂದ ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆಗೆ ಆರಂಭವಾಗಿತ್ತು. ಮೊದಲಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಮನೆ ಮಾಲೀಕರು ಮತ್ತು ಬಾಡಿಗೆದಾರರ ಹೆಚ್ಚುವರಿ ದಾಖಲೆ ಸಂಗ್ರಹ ಹಿನ್ನೆಲೆ ಗಡುವನ್ನು (Deadline) ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಕಾಲ ಸಮಯ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಮರುಪರಿಶೀಲನೆಗೆ ಒಟ್ಟು ನಾಲ್ಕು ತಿಂಗಳ ಕಾಲಾವಕಾಶ ನೀಡಿದಂತಾಗಿದೆ. ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆ – ಪ್ರತಿಭಟನಾಕಾರರ ವಿರುದ್ಧ 20 ಕೇಸ್ ದಾಖಲು
ಸದ್ಯ ಮನೆ ಮಾಲೀಕರು ಮತ್ತು ಬಾಡಿಗೆದಾರರ ಹೆಚ್ಚುವರಿ ದಾಖಲೆ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡುತ್ತಿದ್ದು,ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಫಲಾನುಭವಿಗಳ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ವಿವರ, ಅರ್ಜಿದಾರರ ಭಾವಚಿತ್ರ, ಪ್ರವರ್ಗ, ಆದಾಯ ತೆರಿಗೆ ಪಾವತಿ ಮತ್ತು ವೃತ್ತಿ ಮಾಹಿತಿ ಪರಿಶೀಲನೆ, ಮನೆಗೆ ಬೀಗ, ಮನೆ ಖಾಲಿ, ಮಾಹಿತಿ ಲಭ್ಯವಿಲ್ಲದ ಪ್ರಕರಣಗಳ ಮರುಪರಿಶೀಲನೆ ಮಾಡುತ್ತಿದ್ದಾರೆ.
ಮಾಹಿತಿ ನೀಡಲು ನಿರಾಕರಿಸಿದ ಪ್ರಕರಣಗಳ ಸ್ಥಳ ಪರಿಶೀಲನೆಗೂ ಸೂಚನೆ ನೀಡಲಾಗಿದ್ದು, ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಸ್ಥಾವರಗಳ ಪರಿಶೀಲನೆ ಮಾಡಲಾಗುತ್ತಿದೆ. ಇದನ್ನೂ ಓದಿ:ವಸಂತನಗರದ ಹೋಟೆಲ್ನಲ್ಲಿ ಸ್ಟಿಂಗ್ ಆಪರೇಷನ್ ವ್ಯಕ್ತಿಯನ್ನ ಸಿಎಂ ಭೇಟಿ ಮಾಡಿದ್ರು – ಡಿಕೆಶಿ ವಿರುದ್ಧ ಹೆಚ್ಡಿಕೆ ಬಾಂಬ್
ಜಕಾತಿ ಬದಲಾವಣೆ ಹಾಗೂ ಮೇಲ್ಛಾವಣಿ ಸೌರ ವಿದ್ಯುತ್ ಹೊಂದಿರುವ ಮನೆಗಳ ಮಾಹಿತಿಯೂ ಪರಿಶೀಲನೆಗೆ ಒಳಪಡಲಿದೆ. ಗೃಹಜ್ಯೋತಿ ಯೋಜನೆಯ ಪ್ರಯೋಜನ ಜೀವಂತ ಫಲಾನುಭವಿಗಳಿಗೆ ಮಾತ್ರ ತಲುಪಿಸುವುದು ಸರ್ಕಾರದ ಉದ್ದೇಶವಾಗಿದ್ದು, ಅಕ್ಟೋಬರ್ 31ರೊಳಗೆ ಪರಿಶೀಲನೆ ಮತ್ತು ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ.
ಇನ್ನೂ ಹಿಂದಿನ ಸರ್ಕಾರಿ ಆದೇಶಗಳ ಇತರ ಅಂಶಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿ, ಅಕ್ಟೋಬರ್ 31 ಡೆಡ್ಲೈನ್ ನೀಡಿದೆ.ಇದನ್ನೂ ಓದಿ: ಎಷ್ಟೇ ವಾರ್ನಿಂಗ್ ಕೊಟ್ಟರೂ ಬದಲಾಗದ ಮಂಜ – ಬಿಗ್ಬಾಸ್ ಮನೆಯಿಂದ ಹೊರಕ್ಕೆ, ಕಿಚ್ಚನ ಮುಂದೆ ಕಣ್ಣೀರು

