– SIR ಮಾದರಿಯಲ್ಲೇ ಗೃಹಲಕ್ಷ್ಮಿ ಮರುಪರಿಶೀಲನಾ ಅರ್ಜಿ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಅರ್ಜಿಯಲ್ಲಿ ಹೊಸ ನಿಯಮ ಸೇರ್ಪಡೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನಾ ಅರ್ಜಿ ಅಂತಿಮ ಪ್ರತಿ ಬಹಿರಂಗಗೊಂಡಿದ್ದು, ‘ಪಬ್ಲಿಕ್ ಟಿವಿ’ಗೆ ಲಭ್ಯ ಆಗಿದೆ. ಇದನ್ನೂ ಓದಿ: Fake Medicine Scam | ಎರಡು ಪ್ರಮುಖ ಆ್ಯಂಟಿ ಬಯೋಟಿಕ್ ಔಷಧಗಳನ್ನೇ ನಕಲಿ ಮಾಡಿದ ದಂಧೆಕೋರರು
ಚುನಾವಣೆ ಮಾದರಿ ನೀತಿ ಸಂಹಿತೆ ಮುಗಿದ ಬಳಿಕ ಸರ್ವೆ ಆರಂಭ ಆಗುವ ಸಾಧ್ಯತೆ ಇದೆ. ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಅರ್ಜಿಯಲ್ಲಿ ಹಲವು ಹೊಸ ಪ್ರಶ್ನೆಗಳ ಸೇರ್ಪಡೆ ಮಾಡಲಾಗಿದೆ. SIR ಮಾದರಿಯಲ್ಲೇ ಗೃಹಲಕ್ಷ್ಮಿ ಮರು ಪರಿಶೀಲನಾ ಅರ್ಜಿ ಇದ್ದು, ಆ್ಯಪ್ನಲ್ಲಿ ಸರ್ವೆ ಆದರೂ ಕೂಡ ಆಫ್ಲೈನ್ ಮರುಪರಿಶೀಲನಾ ಅರ್ಜಿ ಭರ್ತಿ ಮಾಡಲೇಬೇಕು. ಬ್ಯಾಂಕ್ ಖಾತೆ, ಆಧಾರ್ ಜೋಡಣೆ , ಪಡಿತರ ಚೀಟಿ ಸಂಖ್ಯೆ ಸಂಬಂಧ ಹಲವು ಪ್ರಶ್ನೆ ಸೇರ್ಪಡೆ ಮಾಡಲಾಗಿದೆ.
ದೇಶದ ಯಾವುದೇ ಬ್ಯಾಂಕ್ ಖಾತೆಯಾಗಲಿ ಆದರೆ ಕರ್ನಾಟಕದಲ್ಲಿ ಆ ಬ್ಯಾಂಕ್ ಬ್ರಾಂಚ್ ಇರಬೇಕು. ಫಲಾನುಭವಿಯು ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗಿನ ಶಾಖೆಯಲ್ಲಿ ಖಾತೆ ಹೊಂದಿರಬೇಕು. ಬ್ಯಾಂಕ್ನಲ್ಲಿ ಸಾಲ ಪಡೆಯದ ಖಾತೆಯ ಅಕೌಂಟ್ ನಂಬರ್ ಗೃಹಲಕ್ಷ್ಮಿ ಯೋಜನೆಗೆ ಕೊಡಬೇಕು. ಜಂಟಿ ಖಾತೆ ಕೊಡಬಾರದು. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಗುಡ್ನ್ಯೂಸ್; ಔಷಧಗಳ ದರ ಶೇ. 30ಕ್ಕೆ ಮಿತಿ
ಪಡಿತರ ಚೀಟಿ ಸಂಖ್ಯೆ ಕಡ್ಡಾಯ. ಮೊಬೈಲ್ಗೆ ಆಧಾರ್ ಸಂಖ್ಯೆ ಆಗದವರು, ಮೊಬೈಲ್ಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯ. ಇಂತಹ ಹಲವು ಅಂಶಗಳನ್ನು ಅರ್ಜಿ ಒಳಗೊಂಡಿದೆ. ಮುಖ್ಯಮಂತ್ರಿಗಳಿಂದ ಅಧಿಕೃತ ಸೂಚನೆ ಸಿಕ್ಕ ಬಳಿಕ ಗೃಹಲಕ್ಷ್ಮಿ ಮರುಪರಿಶೀಲನಾ ಅರ್ಜಿ ಸರ್ವೆ ಆರಂಭ ಆಗಲಿದೆ.

