ವಾಷಿಂಗ್ಟನ್: ಅಮೆರಿಕದ (America) ಗ್ವಾಟೆಮಾಲಾದ (Guatemala) ಲೇಕ್ ಅಟಿಟ್ಲಾನ್ ಸರೋವರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದ್ದು (Helicopter Crashes), ಅದರಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಉಳಿದ ಐವರನ್ನು ರಕ್ಷಿಸಲಾಗಿದೆ.
ಮಳೆಯ (Rain) ವಾತಾವರಣದ ನಡುವೆ ಹೆಲಿಕಾಪ್ಟರ್ ಸಂಚರಿಸುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಸರೋವರಕ್ಕೆ ಅಪ್ಪಳಿಸಿದೆ. ಇದರಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಐವರನ್ನು ರಕ್ಷಿಸಲಾಗಿದೆ. ಪೈಲಟ್ ಹಾಗೂ ಓರ್ವ ಪ್ರಯಾಣಿಕ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಫ್ಲೈದುಬೈ ಹೈಜಾಕ್ ಯತ್ನ – ಶೂಟ್ ಡೌನ್ ಮಾಡಲು ಸಜ್ಜಾಗಿದ್ದ ಇಸ್ರೇಲ್ ಫೈಟರ್ ಜೆಟ್‌ಗಳು!
ಹೆಲಿಕಾಪ್ಟರ್ ಪತನಗೊಳ್ಳುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾದವರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಹೆಲಿಕಾಪ್ಟರ್ ಸ್ಥಳೀಯ ಸಮಯ ಮಧ್ಯಾಹ್ನ 12:11ಕ್ಕೆ ಲಾ ಅರೋರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ಅಟಿಟ್ಲಾನ್ ಸರೋವರದ ಉತ್ತರ ಭಾಗದಲ್ಲಿರುವ ಹೋಟೆಲ್‌ನತ್ತ ಪ್ರಯಾಣ ಬೆಳೆಸಿತ್ತು. ಇದು 30 ನಿಮಿಷಗಳ ಪ್ರಯಾಣವಾಗಿತ್ತು ಎಂದು ಗ್ವಾಟೆಮಾಲಾ ನಾಗರಿಕ ವಾಯುಯಾನ ನಿರ್ದೇಶನಾಲಯ (DGAC) ತಿಳಿಸಿದೆ. ಇದನ್ನೂ ಓದಿ: 4 ಗಂಟೆ 51 ನಿಮಿಷ ಆಗಸದಲ್ಲೇ ಗಿರಕಿ – 30 ಟನ್ ಇಂಧನ ಖಾಲಿ ಮಾಡಿ ಬ್ರಿಟಿಷ್ ಏರ್‌ವೇಸ್ ವಿಮಾನ ಸೇಫ್ ಲ್ಯಾಂಡಿಂಗ್!

