– ಮುಂದಿನ ವಿಚಾರಣೆಗೆ 3 ದಿನಗಳ ಮುನ್ನ ಅಫಿಡವಿಟ್‌ಗೆ ಸುಪ್ರೀಂ ಸೂಚನೆ
ನವದೆಹಲಿ: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅ.27ಕ್ಕೆ ಮುಂದೂಡಲಾಗಿದೆ.
ಶಾಸಕ ವಿನಯ್ ಕುಲಕರ್ಣಿ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಸಿಬಿಐ ಪರ ಎಎಸ್‌ಜಿ, SV ರಾಜು ವಾದ ಮಂಡಿಸಿದರು. ಈ ಹಿಂದೆಯೂ ಜಾಮೀನು ರದ್ದು ಮಾಡಲಾಗಿತ್ತು. ಜಾಮೀನ ಮೇಲೆ ಇದ್ದಾಗ ಸಾಕ್ಷ್ಯ ನಾಶ ಮಾಡಿದ್ರು. ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಿದ ಆರೋಪದ ಮೇಲೆ ಜಾಮೀನು ರದ್ದು ಮಾಡಿತ್ತು. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿತ್ತು. ಆ ಪ್ರಕರಣಕ್ಕೆ ಕೂಡ 4 ವರ್ಷ ಜೈಲು ಶಿಕ್ಷೆ ಇದೆ. ಒಂದು ಕೇಸ್‌ನಲ್ಲಿ ಶಿಕ್ಷೆಯಾಗಿದೆ. ಸಾಕ್ಷ್ಯ ನಾಶದ ಪ್ರಕರಣದ ಟ್ರಯಲ್ ಬಡೆಯುತ್ತಾ ಇದೆ. ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಿದ ಪ್ರಕರಣ ಬಾಕಿ ಇದೆ ಎಂದು ವಾದಿಸಿದರು. ಇದನ್ನೂ ಓದಿ: ಶಾಸಕ ವಿನಯ್ ಕುಲಕರ್ಣಿಗೆ ಇಂದು ಬಿಗ್ ಡೇ; ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ
ಎರಡನೇ ಕೇಸ್‌ನಲ್ಲಿ ಜಾಮೀನು ಸಿಕ್ಕಿದ್ಯಾ ಎಂದು ಕೋರ್ಟ್ ಕೇಳಿತು. ಜಾಮೀನು ಸಿಕ್ಕಿದೆ ಎಂದು ಸರ್ಕಾರಿ ವಕೀಲರು ಹೇಳಿದರು.
ಕೇವಲ ಶಿಕ್ಷೆಯಾಗಿರುವ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿ. ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿ. ಒಂದೆರಡು ವಾರ ಬಿಟ್ಟು ಒಟ್ಟಾಗಿ ವಿಚಾರಣೆ ನಡೆಸಿ ಎಂದು ವಿನಯ್ ಪರ ಸಿಂಘ್ವಿ ವಾದಿಸಿದರು.
ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಲು ನಿರ್ಧರಿಸಲಾಯಿತು. ಅಕ್ಟೋಬರ್ 27 ಕ್ಕೆ ಮುಂದೂಡಲಾಗಿದೆ. ಮುಂದಿನ ವಿಚಾರಣೆಗೆ ಮೂರು ದಿನಗಳ ಮುನ್ನ ಅಫಿಡವಿಟ್ ಸಲ್ಲಿಕೆಗೆ ಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ದೂರದ ಸಂಬಂಧಿ ಅಂತ ಸಹಾಯ ಮಾಡಿದ್ದೇನೆ ಅಷ್ಟೇ: ಇಡಿ ಮುಂದೆ ಶಿವಶಂಕರಪ್ಪ ತಪ್ಪೊಪ್ಪಿಗೆ
ಇನ್ಸ್ಪೆಕ್ಟರ್ ಚನ್ನಕೇಶವಗೆ ಏಳು ವರ್ಷ ಶಿಕ್ಷೆಯಾಗಿದೆ. ಇತರೆ ಕೆಲವು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳನ್ನು ಸುಪ್ರೀ ಕೋರ್ಟ್ ಒಟ್ಟಾಗಿ ವಿಚಾರಣೆ ನಡೆಸಲಿದೆ.

