ಬೆಂಗಳೂರು: ಕ್ರೆಸೆಂಟ್ ರಸ್ತೆಯಲ್ಲಿ ಮರಕ್ಕೆ ಕ್ಯಾಂಟರ್ ಡಿಕ್ಕಿಯಾಗಿ (Accident) ಬುಡ ಸಮೇತ ಮರ ಧರೆಗುರುಳಿದೆ. ಕ್ರೆಸೆಂಟ್ ಹೋಟೆಲ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಪೆಟ್ಟಿ ಅಂಗಡಿ ಪಕ್ಕದಲ್ಲೇ ಮರ (Tree) ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದಂತಾಗಿದೆ. ಅಂಗಡಿ ಮೇಲೆ ಅಥವಾ ಪಾದಾಚಾರಿಗಳು, ಬೈಕ್ ಸವಾರರ ಮೇಲೆ ಮರ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಮರ ಉರುಳುತ್ತಿದ್ದಂತೆ ಕ್ಯಾಂಟರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ರೈಲಿನಲ್ಲಿ ʻನನ್ನ ಸುತ್ತಲೂ ಪುರುಷರೇ ಇದ್ದಾರೆʼ ಎಂದು ಕೊನೆಯ ಮೆಸೇಜ್ ಕಳಿಸಿದ್ದ ಅಸ್ಸಾಂ ಡ್ಯಾನ್ಸರ್ ಶವವಾಗಿ ಪತ್ತೆ
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ತೆರವಿಗೆ ಜಿಬಿಎ (GBA) ಸಿಬ್ಬಂದಿ ಬರಬೇಕಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೇಸ್ ಕೋರ್ಸ್ ರಸ್ತೆ ಬಂದ್ ಆಗಿರುವ ಹಿನ್ನೆಲೆ ಕ್ರೆಸೆಂಟ್ ರಸ್ತೆ ಮೂಲಕ ಕ್ಯಾಂಟರ್‌ನ್ನು ಚಾಲಕ ತಂದಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಾಸಕ ವಿನಯ್ ಕುಲಕರ್ಣಿಗೆ ಇಂದು ಬಿಗ್ ಡೇ; ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ

