ಮುಂಬೈ: ಹಿರಿಯ ನಟ ಹಾಗೂ ನಿರ್ದೇಶಕ ನಾನಾ ಪಾಟೇಕರ್ (Nana Patekar) ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಲು ಮಹಾರಾಷ್ಟ್ರ (Maharashtra) ಸರ್ಕಾರ ನಿರ್ಧರಿಸಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೆಲಾರ್ (Ashish Shelar) ತಿಳಿಸಿದ್ದಾರೆ.
ಮರಾಠಿ ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗಕ್ಕೆ ನಾನಾ ಪಾಟೇಕರ್ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶೆಲಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಕಚೇರಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆ ಹಾಗೂ ಅಂತಿಮ ದರ್ಶನಕ್ಕೆ ಸಂಬಂಧಿಸಿದ ವಿವರಗಳನ್ನು ಸರ್ಕಾರ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಕೇಸ್‌ನಲ್ಲಿ ಸ್ಟಿಂಗ್ ಮಾಡಿಸಿದವರು ಯಾರು ಅನ್ನೋದು ಜನಕ್ಕೆ ಗೊತ್ತಿದೆ: ವಿಜಯೇಂದ್ರ ತಿರುಗೇಟು
ನಾನಾ ಪಾಟೇಕರ್ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೂಲಗಳ ಪ್ರಕಾರ, ನಾನಾ ಪಾಟೇಕರ್ ಅವರು ತಮ್ಮ ಅಳಿಯ ಪ್ರಸಾದ್ ಪಾಟೇಕರ್ ಅವರೊಂದಿಗೆ ಮನೆಯಲ್ಲಿದ್ದರು. ಕಳೆದ ರಾತ್ರಿಯಿಂದ ಅವರಿಗೆ ತಲೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಬಳಿಕ ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಣಿಪಾಲ್ ಆಸ್ಪತ್ರೆಯ ಮಾಹಿತಿಯ ಪ್ರಕಾರ, ಆಸ್ಪತ್ರೆಗೆ ಕರೆತಂದ ಬಳಿಕ ವೈದ್ಯರು ಸುಮಾರು 45 ನಿಮಿಷಗಳ ಕಾಲ ಅವರನ್ನು ಉಳಿಸಲು ಪ್ರಯತ್ನಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕೇವಲ ನಟರಾಗಿರದೇ ನಾಮ್ ಫೌಂಡೇಷನ್ ಮೂಲಕ ರೈತರು, ನೊಂದವರ ಸೇವೆ: ನಾನಾ ಪಾಟೇಕರ್ ನಿಧನಕ್ಕೆ ಬೊಮ್ಮಾಯಿ ಸಂತಾಪ
ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವ ಆಶಿಶ್ ಶೆಲಾರ್, ಮರಾಠಿ ಜನರ ಬದುಕಿನಲ್ಲಿ ಉಂಟಾಗಿರುವ ಈ ಶೂನ್ಯವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೈತರಿಂದ ಹಿಡಿದು ಸೈನಿಕರವರೆಗೆ ಎಲ್ಲರಿಗೂ ನಾನಾ ಅವರು ಗುರಾಣಿಯಂತಿದ್ದರು. ರೈತರ ಸಮಸ್ಯೆಗಳ ವಿಚಾರದಲ್ಲಿ ಸರ್ಕಾರವನ್ನೂ ಅವರು ಟೀಕಿಸುತ್ತಿದ್ದರು. ಅವರನ್ನು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಲು ಸಾಧ್ಯವಿರಲಿಲ್ಲ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಯಶಸ್ಸು ಸಾಧಿಸಿದ ಅವರು ಓಪನ್ ಬುಕ್‌ನಂತಿದ್ದ ಕಲಾವಿದ. ಇಂದು ಅವರು ನಮ್ಮನ್ನು ಅಗಲಿದ್ದಾರೆ ಎಂದು ಬೇಸರಿಸಿದರು. ಇದನ್ನೂ ಓದಿ: ಆನ್‌ಲೈನ್ ಗೇಮ್‌ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್ – ಮನನೊಂದು ನೇಣಿಗೆ ಶರಣಾದ ಬಾಲಕ

