ನಾನಾ ಪಾಟೇಕರ್ (Usha Uthup) ಅವರನ್ನು ಅತ್ಯುತ್ತಮ ನಟ, ಸಜ್ಜನ, ಹಾಸ್ಯಪ್ರಜ್ಞೆ ಹಾಗೂ ಬಂಗಾರದಂತಹ ಹೃದಯವಂತ ವ್ಯಕ್ತಿ ಎಂದು ಗಾಯಕಿ ಉಷಾ ಉತ್ತುಪ್ (Nana Patekar) ಎಂದು ಸ್ಮರಿಸಿದ್ದಾರೆ.
ಹಿರಿಯ ನಟ ನಾನಾ ಪಾಟೇಕರ್ ಅವರು ಗುರುವಾರ ಬೆಳಗ್ಗೆ ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: 4 ದಿನದ ಹಿಂದೆ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಾಟೇಕರ್
‘ಸಲಾಮ್ ಬಾಂಬೆ!’ ಚಿತ್ರದ ಮೂಲಕ ಖ್ಯಾತಿ ಪಡೆದ ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಉಷಾ ಉತ್ತುಪ್, ಪಾಟೇಕರ್‌ರನ್ನು ಬೇರೆ ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾನಾ ಪಟೇಕರ್ ಅವರು ಜಗತ್ತು ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರು. ನೂರಕ್ಕೆ ನೂರರಷ್ಟು ಸಜ್ಜನ, ಶ್ರೇಷ್ಠ ನಟ, ಉತ್ತಮ ಹಾಸ್ಯಪ್ರಜ್ಞೆ ಹಾಗೂ ನಿಜಕ್ಕೂ ಬಂಗಾರದಂತಹ ಹೃದಯವಿದ್ದ ವ್ಯಕ್ತಿ ಅವರು ಎಂದು ನೆನೆದಿದ್ದಾರೆ. ಇದನ್ನೂ ಓದಿ: ಕನ್ನಡದ ‘ಯಕ್ಷ’ದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದ ನಾನಾ ಪಾಟೇಕರ್!
ಪಾಟೇಕರ್ ಅವರೊಂದಿಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಸಮಯವನ್ನು ಉಷಾ ಉತ್ತುಪ್ ನೆನಪಿಸಿಕೊಂಡರು. ಅವರು ನಮ್ಮನ್ನಗಲಿದ ನಂತರ ಉಂಟಾಗಿರುವ ಈ ಭರಿಸಲಾಗದ ಶೂನ್ಯತೆಯ ಬಗ್ಗೆ ನಾವೆಲ್ಲರೂ ನಿಜಕ್ಕೂ ಬಹಳ ದುಃಖಿತರಾಗಿದ್ದೇವೆ ಎಂದಿದ್ದಾರೆ.

