ಪಣಜಿ: ಇಂದು ನಿಧನರಾದ ಬಹುಭಾಷಾ ನಟ ನಾನಾ ಪಾಟೇಕರ್(Nana Patekar) 4 ದಿನದ ಹಿಂದೆ ಗೋವಾದಲ್ಲಿ(Goa) ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಾನಾ ಪಾಟೇಕರ್ ಅವರು ಅಕ್ಟೋಬರ್ 4ರಂದು ಗೋವಾದ ಡೋನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ವಿಶ್ವನಾಥ್ ‘ನಾನಾ ಪಾಟೇಕರ್’ ಆಗಿದ್ದು ಹೇಗೆ? – ಹೆಸರಿನ ಹಿಂದಿದೆ ಬಾಲ್ಯದ ಅಪರೂಪದ ಕಥೆ
VIDEO | Goa: Actor Nana Patekar attended and addressed the Samraat Club International installation ceremony in Dona Paula.
(Full video available on PTI Videos – https://t.co/d8jp61yd2p) https://t.co/jl8xn9vXOk
— Press Trust of India (@PTI_News) October 4, 2026
‘ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್’ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಆ ಕಾರ್ಯಕ್ರಮದಲ್ಲಿ ಅವರು ಬಿಳಿ ಕುರ್ತಾ ಹಾಗೂ ಬಿಳಿ ಶಾಲು (ಗಮ್ಚಾ) ಧರಿಸಿ ವೇದಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಇದನ್ನೂ ಓದಿ: ಕನ್ನಡದ ‘ಯಕ್ಷ’ದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದ ನಾನಾ ಪಾಟೇಕರ್!

