ಮುಂಬೈ: ಬೃಹನ್‌ಮುಂಬೈ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸಾರ್ವಜನಿಕ ಬೀದಿಗಳು ಮತ್ತು ರಸ್ತೆಗಳಲ್ಲಿ ಪಟಾಕಿ (Fire Crcakers), ಸಿಡಿಮದ್ದು ಮತ್ತು ರಾಕೆಟ್‌ಗಳನ್ನು ಸಿಡಿಸುವುದನ್ನು ಹಾಗೂ ಲೇಸರ್ ಲೈಟ್ (Laser Light) ಮತ್ತು ತೀವ್ರ ಪ್ರಖರತೆಯುಳ್ಳ ಬೆಳಕಿನ ಕಿರಣಗಳ ಬಳಕೆಯನ್ನು ಮುಂಬೈ ಪೊಲೀಸರು (Mumbai Police) ನಿಷೇಧಿಸಿದ್ದಾರೆ.
ಅಕ್ಟೋಬರ್ 6ರಿಂದ ಈ ಆದೇಶ ಜಾರಿಗೆ ಬಂದಿದ್ದು, ಡಿಸೆಂಬರ್ 4ರ ಮಧ್ಯರಾತ್ರಿಯವರೆಗೆ ನಿರ್ಬಂಧ ಮುಂದುವರಿಯಲಿದೆ. ಈ ಅವಧಿಗೂ ಮುನ್ನ ಆದೇಶವನ್ನು ಹಿಂಪಡೆಯದಿದ್ದರೆ ನಿಗದಿತ ಸಮಯದವರೆಗೆ ನಿಯಮಗಳು ಜಾರಿಯಲ್ಲಿರಲಿವೆ. ಇದನ್ನೂ ಓದಿ: 2 ಸಾವಿರ ರೂ. ಕಳ್ಳತನಕ್ಕೆ ಎರಡು ಲಕ್ಷದ ಕಾರಿನಲ್ಲಿ ಬಂದ ಅಂತರ ಜಿಲ್ಲಾ ಕಳ್ಳರು ಲಾಕ್!
ನವರಾತ್ರಿ ಮತ್ತು ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಮುಂಬೈನಲ್ಲಿ ಪಟಾಕಿ ಹಾಗೂ ಹೆಚ್ಚಿನ ತೀವ್ರತೆಯ ಬೆಳಕುಗಳ ಬಳಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಟಾಕಿಗಳಿಂದ ಉಂಟಾಗುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸುವುದು ನಿರ್ಬಂಧದ ಪ್ರಮುಖ ಉದ್ದೇಶವಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ಪ್ರದೋಷ್ ಮಾಫಿಸಾಕ್ಷಿಯಾಗಲು ವಿಜಯಲಕ್ಷ್ಮೀ ಪರ ವಕೀಲರ ಆಕ್ಷೇಪ
ಬಾಂಬೆ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಕ್ರಮ:
ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ರಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹಲವು ನಿರ್ದೇಶನಗಳನ್ನು ನೀಡಿತ್ತು. ಸಾರ್ವಜನಿಕ ರಸ್ತೆಗಳು ಮತ್ತು ಬೀದಿಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಇದನ್ನೂ ಓದಿ: ಪೊಲೀಸ್, RAF ಸಿಬ್ಬಂದಿಗೆ ಬಾಡಿ ಕ್ಯಾಮೆರಾ – 6 ತಿಂಗಳಲ್ಲಿ ಕ್ರಮಕೈಗೊಳ್ಳಲು ಕೇಂದ್ರಕ್ಕೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್
ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಇದರ ಜೊತೆಗೆ ಲೇಸರ್ ಲೈಟ್‌ಗಳು, ತೀವ್ರ ಪ್ರಖರತೆಯುಳ್ಳ ಬೆಳಕಿನ ಕಿರಣಗಳು ಮತ್ತು ಬೀಮ್‌ಗಳ ಬಳಕೆಯನ್ನು ನಿಷೇಧಿಸುವಂತೆಯೂ ಸೂಚಿಸಲಾಗಿತ್ತು. ಇದನ್ನೂ ಓದಿ: ಸ್ಟಿಂಗ್ ಆಪರೇಷನ್, ಪೆನ್‌ಡ್ರೈವ್ ಪಿತಾಮಹ ಕುಮಾರಸ್ವಾಮಿ: ಬಾಲಕೃಷ್ಣ
ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿಗೆ ಬ್ರೇಕ್:
ಹೈಕೋರ್ಟ್ ನಿರ್ದೇಶನದ ಅನುಸಾರ ಮುಂಬೈ ಪೊಲೀಸರು ಬೃಹನ್‌ಮುಂಬೈ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳು, ಬೀದಿಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ, ಸಿಡಿಮದ್ದು, ರಾಕೆಟ್ ಮತ್ತು ಇದೇ ರೀತಿಯ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಇದನ್ನೂ ಓದಿ: ಸಿಎಂ ಆಗಲು ಡಿಕೆಶಿಯಿಂದಲೇ ಸ್ಟಿಂಗ್ ಆಪರೇಷನ್: ಹೆಚ್‌ಡಿಕೆ ಬಾಂಬ್
ಇನ್ನು ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ತೀವ್ರತೆಯ ಬೆಳಕು ಅಥವಾ ಲೇಸರ್ ಬೀಮ್‌ಗಳನ್ನು ಬಳಸುವುದಕ್ಕೂ ನಿರ್ಬಂಧವಿದೆ. ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಶಿಕಾರಿಪುರ | ಹರಿಗೆ ಗ್ರಾಮದಲ್ಲಿ ಬೀಗರೂಟ ಬ್ಯಾನ್ – ಊಟ ಹಾಕಿಸಿದ್ರೆ 1 ಲಕ್ಷ, ಊಟ ಮಾಡಿದ್ರೆ 50 ಸಾವಿರ ದಂಡ
ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ:
ಮುಂಬೈ ಪೊಲೀಸರ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ರಾಹು ಕಾಲ ಬಂದಿದೆ, ಪ್ರತಿಭಟನೆಗೆ ಅರ್ಥವಿಲ್ಲ: ಅಶೋಕ್ ಕಿಡಿ
ಶಬ್ದ ಮಾಲಿನ್ಯ ನಿಯಮಗಳು, 2000, ಪರಿಸರ (ಸಂರಕ್ಷಣೆ) ಕಾಯ್ದೆ, 1986, ಭಾರತೀಯ ನ್ಯಾಯ ಸಂಹಿತೆ, 2023, ಸ್ಫೋಟಕ ಕಾಯ್ದೆ, 1884 ಸೇರಿದಂತೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಇದನ್ನೂ ಓದಿ: SIR ವಿವಾದ| ವಿಜಯ್‌ಗೆ ಹೆದರುತ್ತಿದ್ದೀರಾ?- ರಾಹುಲ್ ಮೌನ, ದ್ವಂದ್ವ ನೀತಿಗೆ ಡಿಎಂಕೆ ಆಕ್ರೋಶ

