ಬೆಂಗಳೂರು: ಸ್ಟಿಂಗ್ ಆಪರೇಷನ್, ಪೆನ್‌ಡ್ರೈವ್ ಪಿತಾಮಹ ಕುಮಾರಸ್ವಾಮಿ (HD Kumaraswamy) ಅಂತಾ ಸಚಿವ ಹೆಚ್. ಸಿ ಬಾಲಕೃಷ್ಣ (H C Balakrishna) ವ್ಯಂಗ್ಯವಾಡಿದ್ದಾರೆ.
ಹೈಕಮಾಂಡ್‌ಗೆ ಸ್ಟಿಂಗ್ ಆಪರೇಷನ್ (Sting Operation) ವೀಡಿಯೋ ಕೊಟ್ಟು ಡಿಕೆಶಿ (DK Shivakumar) ಸಿಎಂ ಆಗಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಅವರು ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಹುಷಾರಾಗಿರಿ, ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ. ಆದರೆ, ಕುಮಾರಸ್ವಾಮಿಗೆ ಹೆದರಿಕೊಳ್ಳಿ ಎಂದು ಸಿಎಂ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕುಮಾರಸ್ವಾಮಿ ಅವರು ಸುಮ್ಮನೆ ಏನೇನೋ ಮಾತನಾಡಬಾರದು. ಡಿಕೆ ಶಿವಕುಮಾರ್ ಸಿಎಂ ಆದಾಗಿನಿಂದಲೇ ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಅವರೇ ಸ್ಟಿಂಗ್ ಆಪರೇಷನ್ ಮಾಡಿಸುತ್ತಾರೆ. ಹೆಸರು ಹೇಳಬೇಕಾ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಹರ್ಮನ್-ಸ್ಮೃತಿ ಮಧ್ಯೆ ಮುಸುಕಿನ ಗುದ್ದಾಟ – ಡ್ರೆಸ್ಸಿಂಗ್ ರೂಮ್ ಒಡಕು ಬಹಿರಂಗ
ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮಾಡಿ ಹೇಗೆ ಸಿಎಂ ಸ್ಥಾನದಿಂದ ಇಳಿಸ್ತಾರೆ? ಯಾವ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ? ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ. ಸ್ಟಿಂಗ್ ಆಪರೇಷನ್ ಮಾಡಿಸಿ ಬ್ಯಾಕ್‌ಡೋರ್ ಎಂಟ್ರಿ ಪಡೆಯಲು ಕುಮಾರಸ್ವಾಮಿ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಸಚಿವ ಗಂಭೀರ ಆರೋಪ ಮಾಡಿದ್ದಾರೆ.ಇದನ್ನೂ ಓದಿ: ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕೆ ಕೊಹ್ಲಿಗೆ ಸಿಕ್ತಾ 5 ಕೋಟಿ?

