ಪೊಲೀಸರಿಗೆ ಹಾಗೂ RAF ಸಿಬ್ಬಂದಿಗೆ ಕ್ಯಾಮೆರಾ ಕಡ್ಡಾಯಗೊಳಿಸುವಂತೆ ನೇರ ಆದೇಶ ನೀಡಲು ನಿರಾಕರಿಸಿರುವ ನ್ಯಾಯಾಲಯ, ಈ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸರ್ಕಾರದ ಮುಂದಿರುವ ಪ್ರಾತಿನಿಧ್ಯವೆಂದು ಪರಿಗಣಿಸಿ, ಆರು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ:ಸ್ಟಿಂಗ್ ಆಪರೇಷನ್, ಪೆನ್‌ಡ್ರೈವ್ ಪಿತಾಮಹ ಕುಮಾರಸ್ವಾಮಿ: ಬಾಲಕೃಷ್ಣ
ಪ್ರತಿಭಟನೆ, ಗುಂಪು ನಿಯಂತ್ರಣ ಅಥವಾ ಗುಂಪು ಚದುರಿಸುವ ಕಾರ್ಯಾಚರಣೆಯಲ್ಲಿ ನಿಯೋಜನೆಗೊಂಡ ಪ್ರತಿಯೊಬ್ಬ ದೆಹಲಿ ಪೊಲೀಸ್ ಹಾಗೂ RAF ಸಿಬ್ಬಂದಿಗೂ ಬಾಡಿ ಕ್ಯಾಮೆರಾ ಕಡ್ಡಾಯಗೊಳಿಸುವಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸಬೇಕು ಎಂದು ಪಿಐಎಲ್ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಈ ಬೇಡಿಕೆಯ ಹಿನ್ನೆಲೆ ನ್ಯಾಯಾಲಯವು ಸರ್ಕಾರಕ್ಕೆ ವಿಷಯವನ್ನು ಪರಿಶೀಲಿಸುವಂತೆ ಸೂಚಿಸಿದೆ. ಆರು ತಿಂಗಳೊಳಗೆ ಬಾಡಿ-ವೋರ್ನ್ ಕ್ಯಾಮೆರಾಗಳ ಕಾರ್ಯಾಚರಣೆ, ಬಳಕೆ, ದಾಖಲೆಗಳ ಸಂಗ್ರಹಣೆ ಮತ್ತು ನಿರ್ವಹಣೆ ಸೇರಿದಂತೆ SOP ರೂಪಿಸುವ ಕುರಿತು ನಿರ್ಧಾರ ಕೈಗೊಂಡು ತಿಳಿಸಬೇಕು ಎಂದು ಸೂಚಿಸಲಾಗಿದೆ. ಸರ್ಕಾರದ ನಿರ್ಧಾರದಿಂದ ಅರ್ಜಿದಾರರು ಅಸಮಾಧಾನಗೊಂಡರೆ ಅಥವಾ ಕ್ರಮ ಕೈಗೊಳ್ಳದಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗಲು ಅವಕಾಶ ನೀಡಲಾಗಿದೆ.ಇದನ್ನೂ ಓದಿ: ಸಿಎಂ ಆಗಲು ಡಿಕೆಶಿಯಿಂದಲೇ ಸ್ಟಿಂಗ್ ಆಪರೇಷನ್: ಹೆಚ್‌ಡಿಕೆ ಬಾಂಬ್
ಅರ್ಜಿದಾರರ ಪ್ರಕಾರ, ಅಧಿಕೃತವಾಗಿ ದೃಢೀಕರಿಸಲಾದ ಪೊಲೀಸ್ ವಿಡಿಯೋ ದಾಖಲೆಗಳ ವ್ಯವಸ್ಥೆ ಇದ್ದರೆ ಇಂತಹ ಸಂದರ್ಭಗಳಲ್ಲಿ ನಡೆದ ಘಟನೆಗಳ ಬಗ್ಗೆ ನಿಖರ ದಾಖಲೆ ಲಭ್ಯವಾಗಲಿದೆ. ಇದರಿಂದ ಪೊಲೀಸ್ ಸಿಬ್ಬಂದಿಯ ಕ್ರಮಗಳ ಬಗ್ಗೆ ಮಾತ್ರವಲ್ಲದೆ, ಪ್ರತಿಭಟನಾಕಾರರ ವಿರುದ್ಧದ ಆರೋಪಗಳಿಗೂ ದೃಶ್ಯ ಸಾಕ್ಷ್ಯ ದೊರೆಯಲಿದೆ ಎಂಬ ವಾದವನ್ನು ಅರ್ಜಿಯಲ್ಲಿ ಮಾಡಲಾಗಿದೆ. ಹೀಗಾಗಿ, ಬಾಡಿ ಕ್ಯಾಮೆರಾಗಳ ಕಡ್ಡಾಯ ಬಳಕೆ ಕುರಿತು ಅಂತಿಮ ನಿರ್ಧಾರವನ್ನು ನ್ಯಾಯಾಲಯವೇ ತೆಗೆದುಕೊಳ್ಳದೆ ಸರ್ಕಾರದ ಪರಿಶೀಲನೆಗೆ ದೆಹಲಿ ಹೈಕೋರ್ಟ್ ಅವಕಾಶ ನೀಡಿದೆ.

ಪಿಐಎಲ್ ಅರ್ಜಿಯಲ್ಲಿ ಏನಿದೆ?
ಕರ್ತವ್ಯಕ್ಕೆ ನಿಯೋಜನೆಯಾದ ಕ್ಷಣದಿಂದ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವವರೆಗೂ ಕ್ಯಾಮೆರಾಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ರೂಪಿಸಬೇಕು ಎಂಬ ಬೇಡಿಕೆಯೂ ಇತ್ತು. ಬಾಡಿ ಕ್ಯಾಮೆರಾ ಬಳಕೆಯಿಂದ ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಸಂವಹನ ಹಾಗೂ ಕಾರ್ಯಾಚರಣೆಗಳ ದೃಶ್ಯ ದಾಖಲೆ ಲಭ್ಯವಾಗಲಿದ್ದು, ಪೊಲೀಸ್ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದರು. ಕ್ಯಾಮೆರಾದಲ್ಲಿ ದಾಖಲಾಗುವ ದೃಶ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವುದು, ಅದರ ಸಮಗ್ರತೆಯನ್ನು ಕಾಪಾಡುವುದು, ಎಷ್ಟು ಅವಧಿಗೆ ಸಂಗ್ರಹಿಸಬೇಕು ಎಂಬುದನ್ನು ನಿಗದಿಪಡಿಸುವುದು ಮತ್ತು ಅಗತ್ಯವಿದ್ದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸುವ ವ್ಯವಸ್ಥೆ ರೂಪಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು.ಇದನ್ನೂ ಓದಿ: ಶಿಕಾರಿಪುರ | ಹರಿಗೆ ಗ್ರಾಮದಲ್ಲಿ ಬೀಗರೂಟ ಬ್ಯಾನ್ – ಊಟ ಹಾಕಿಸಿದ್ರೆ 1 ಲಕ್ಷ, ಊಟ ಮಾಡಿದ್ರೆ 50 ಸಾವಿರ ದಂಡ
2026ರ ಜುಲೈನಲ್ಲಿ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆ ಬಾಡಿ ಕ್ಯಾಮೆರಾ ಬಳಕೆಯ ಕುರಿತು ಈ ಬೇಡಿಕೆ ಮುನ್ನೆಲೆಗೆ ಬಂದಿತ್ತು. ಆ ಸಂದರ್ಭ ಪೊಲೀಸ್ ಮತ್ತು ಖಂಈ ಸಿಬ್ಬಂದಿ ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ಜೊತೆಗೆ, ಪ್ರತಿಭಟನಾಕಾರರಿಂದ ಕಲ್ಲುತೂರಾಟ, ಧ್ವಂಸ ಹಾಗೂ ಪೊಲೀಸರ ಮೇಲೆ ದಾಳಿ ನಡೆದ ಆರೋಪಗಳೂ ಕೇಳಿಬಂದಿದ್ದವು. ಈ ಘಟನೆಗಳಿಗೆ ಸಂಬಂಧಿಸಿದ ಹಲವು ದೃಶ್ಯಗಳು ಸಾರ್ವಜನಿಕರ ಮೊಬೈಲ್‌ಗಳಿಂದ ದಾಖಲಾಗಿದ್ದವು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.ಇದನ್ನೂ ಓದಿ: ಹರ್ಮನ್-ಸ್ಮೃತಿ ಮಧ್ಯೆ ಮುಸುಕಿನ ಗುದ್ದಾಟ – ಡ್ರೆಸ್ಸಿಂಗ್ ರೂಮ್ ಒಡಕು ಬಹಿರಂಗ

