ಚಂಡೀಗಢ: ಇಲ್ಲಿನ ಪಿಸಿಎ (PCA) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಕ್ರಿಕೆಟ್ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಸ್ಫೋಟಕ ಶತಕ ಬಾರಿಸುವ ಮೂಲಕ ಅಬ್ಬರಿಸಿ ಬೊಬ್ಬಿರಿದರು. ಅಷ್ಟೇ ಅಲ್ಲ, ಡೆತ್ ಓವರ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸುವ ಜೊತೆಗೆ ಹೊಸ ಮೈಲಿಗಲ್ಲನ್ನು ತಲುಪಿದ್ರು.
– 10000 International runs ✅
– 23rd International Hundred ✅THE DAY OF KL RAHUL – The best Number 5 of ODIs in this decade. pic.twitter.com/7ljHxcqIug
— Johns. (@CricCrazyJohns) October 3, 2026
ಹೌದು. ಇಂದು ವಿಂಡೀಸ್ (West Indies) ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್ ರಾಹುಲ್, ಭರ್ಜರಿ ಪ್ರದರ್ಶನ ನೀಡಿದ್ರು.
ಬ್ಯಾಟಿಂಗ್ ಲಯ ಕಂಡುಕೊಂಡ 34 ವರ್ಷದ ರಾಹುಲ್ ವಿಂಡೀಸ್‌ನ ಮ್ಯಾಥ್ಯೂ ಫೋರ್ಡೆ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಅಮೋಘ ಶತಕ ದಾಖಲಿಸಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೈಲಿಗಲ್ಲನ್ನೂ ತಲುಪುವ ಮೂಲಕ ಈ ಸಾಧನೆ ಮಾಡಿದ ಭಾರತೀಯ ಆಟಗಾರರ ಎಲೈಟ್ ಪಟ್ಟಿ ಸೇರಿಕೊಂಡರು.
FINISHER KL RAHUL IS DANGEROUS 😍🔥 pic.twitter.com/IANdzTfgGw
— Johns. (@CricCrazyJohns) October 3, 2026
10,000 ಅಂತಾರಾಷ್ಟ್ರೀಯ ರನ್ ಪೂರೈಸಿದ ಭಾರತೀಯ ಕ್ರಿಕೆಟರ್ಸ್
ಸಚಿನ್ ತೆಂಡೂಲ್ಕರ್ – 34,357
ವಿರಾಟ್ ಕೊಹ್ಲಿ – 28,527
ರಾಹುಲ್ ದ್ರಾವಿಡ್ – 24,064
ರೋಹಿತ್ ಶರ್ಮಾ – 20,652
ಸೌರವ್ ಗಂಗೂಲಿ – 18,433
ಎಂ.ಎಸ್ ಧೋನಿ – 17,092
ವೀರೇಂದ್ರ ಸೆಹ್ವಾಗ್ – 16,892
ಮೊಹಮ್ಮದ್ ಅಜರುದ್ದೀನ್ – 15,593
ಸುನಿಲ್ ಗವಾಸ್ಕರ್ – 13,214
ಯುವರಾಜ್ ಸಿಂಗ್ – 11,686
ವಿವಿಎಸ್ ಲಕ್ಷ್ಮಣ್ – 11,119
ಶಿಖರ್ ಧವನ್ – 10,867
ದಿಲೀಪ್ ವೆಂಗ್‌ಸರ್ಕರ್ – 10,376
ಗೌತಮ್ ಗಂಭೀರ್ – 10,324
ಕೆ.ಎಲ್ ರಾಹುಲ್ – 10,023

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ 4 ರನ್‌ಗಳಿಗೆ ಪ್ರಮುಖ (ಗಿಲ್, ಕೊಹ್ಲಿ) 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 10 ಓವರ್ ಕಳೆದರೂ 50 ರನ್ ಗಳಿಸದ ಭಾರತಕ್ಕೆ ಬೃಹತ್ ಮೊತ್ತ ಕಲೆಹಾಕುವುದು ಸವಾಲಿನ ಕೆಲಸವಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕದ ಅಂಚಿನಲ್ಲಿದ್ದಾಗ (92 ರನ್) ಔಟಾದರು. ಇತ್ತ ಅರ್ಧಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಕೂಡ ಪೆವಿಲಿಯನ್ ಸೇರಿಕೊಂಡರು.
ಆ ಬಳಿಕ ರನ್ ವೇಗ ಕಡಿತಗೊಂಡಿತ್ತು. ಆದ್ರೆ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ರಾಹುಲ್ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಕೊನೆಯವರೆಗೂ ಅಜೇಯರಾಗುಳಿದ ರಾಹುಲ್ 80 ಎಸೆತಗಳಲ್ಲಿ ಶತಕ ದಾಖಲಿಸಿದರು. ಒಟ್ಟು 87 ಎಸೆತಗಳನ್ನ ಎದುರಿಸಿ 129 ರನ್ (6 ಸಿಕ್ಸರ್, 10 ಬೌಂಡರಿ) ಚಚ್ಚಿದರು. ಇದು ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ದಾಖಲಿಸಿದ ವೈಯಕ್ತಿಕ ಗರಿಷ್ಠ ರನ್ ಆಗಿದೆ.

