ನಗೋಯ: ಜಪಾನ್ನ ನಗೋಯದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನ (Asian Games) ಮಹಿಳಾ ಹಾಕಿ ಫೈನಲ್ನಲ್ಲಿ(Hockey Final) ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ರೋಚಕ ಹಾಗೂ ಕಾದಾಟದ ಫೈನಲ್ ಹಣಾಹಣಿಯಲ್ಲಿ ಬಲಿಷ್ಠ ಚೀನಾ(China) ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಈ ಮಹತ್ವದ ಗೆಲುವಿನೊಂದಿಗೆ ಭಾರತ ಮಹಿಳಾ ಹಾಕಿ (Indian Hockey Team) ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ.
ಭಾರತ ಮಹಿಳಾ ಹಾಕಿ ತಂಡ ಈ ಹಿಂದೆ 1982ರ ನವದೆಹಲಿ ಏಷ್ಯನ್ ಗೇಮ್ಸ್ನಲ್ಲಿ ಕೊನೆಯದಾಗಿ ಚಿನ್ನದ ಪದಕ ಗೆದ್ದಿತ್ತು. ಆ ಬಳಿಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪ್ರಶಸ್ತಿಗಾಗಿ ಕಾಯುತ್ತಿದ್ದ ಭಾರತೀಯ ಮಹಿಳೆಯರು, ಇದೀಗ ಬರೋಬ್ಬರಿ 44 ವರ್ಷಗಳ ಸುದೀರ್ಘ ಕಾಯುವಿಕೆಗೆ ಪೂರ್ಣವಿರಾಮ ಇಟ್ಟು ಹೊಸ ಇತಿಹಾಸ ಬರೆದಿದ್ದಾರೆ.
Indian Women Hockey Team won #GoldMedal in #AsianGames2026 after 44 years. India beat China 1-0, ending the wait since 1982 and earned entry to the #LosAngelesOlympics2028@TheHockeyIndia pic.twitter.com/hIDa35ev4U
— Neel Kamal (@NeelkamalPb) October 2, 2026
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತಕ್ಕೆ ಮೊದಲ ಕ್ವಾರ್ಟರ್ನಲ್ಲೇ ಯಶಸ್ಸು ದೊರೆಯಿತು. 10ನೇ ನಿಮಿಷದಲ್ಲಿ ಸ್ಟ್ರೈಕರ್ ಲಾಲ್ರೆಮ್ಸಿಯಾಮಿ ಬಾರಿಸಿದ ಅದ್ಭುತ ‘ರಿವರ್ಸ್ ಹಿಟ್ ಗೋಲ್’ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟಿದೆ. ಇದನ್ನೂ ಓದಿ: ಆರಂಭದಲ್ಲಿ ಹಿನ್ನಡೆ, ಕೊನೆಗೆ ಸತತ 8 ಅಂಕ – ಕುಸ್ತಿಯಲ್ಲಿ ಸುಜೀತ್ ಕಲ್ಕಲ್ಗೆ ಚಿನ್ನ
Because big moments call for BIG saves from BIG players. 🤩
Watch the 20th Asian Games Aichi-Nagoya 2026, LIVE on Sony Sports Network TV channels & Sony LIV.#SonySportsNetwork #SonyLIV #AsianGames #AichiNagoya2026 #BaarBaarBharatHarBaarBharat pic.twitter.com/IAD1HKP4fO
— Sony Sports Network (@SonySportsNetwk) October 2, 2026
ʻಗೋಡೆʼಯಂತೆ ನಿಂತ ಸವಿತಾ ಪುನಿಯಾ
ಹಿನ್ನಡೆ ಅನುಭವಿಸಿದ ಚೀನಾ ಸಮಬಲ ಸಾಧಿಸಲು ತೀವ್ರ ಒತ್ತಡ ಹೇರಿತು. ಪಂದ್ಯದ ನಿರ್ಣಾಯಕ ಹಂತದಲ್ಲಿ ಚೀನಾ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್ ಲಭಿಸಿತಾದರೂ, ಭಾರತದ ಅನುಭವಿ ಗೋಲ್ಕೀಪರ್ ಸವಿತಾ ಪುನಿಯಾ ಅವರು ಅದ್ಭುತವಾಗಿ ಡೈವ್ ಮಾಡಿ ಚೆಂಡನ್ನು ತಡೆದು ಭಾರತದ ಗೆಲುವನ್ನು ಖಚಿತಪಡಿಸಿದರು. ಚೀನಾದ ಆಕ್ರಮಣವನ್ನು ನಿಷ್ಕ್ರಿಯಗೊಳಿಸಿದ ಭಾರತದ ರಕ್ಷಣಾ ಪಡೆ, ಚಿನ್ನದ ಪದಕವನ್ನು ಭಾರತದ ಮಡಿಲಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಕಂಚಿನ ಪದಕ ಜಯಿಸಿತ್ತು. ಚೀನಾ 2002, 2026, 2010, 2022 ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದುಕೊಂಡಿತ್ತು. ಈ ಬಾರಿಯೂ ಚಿನ್ನ ಗೆದ್ದು ಸತತವಾಗಿ ತನ್ನ ಪ್ರಾಬಲ್ಯ ಕಾಯ್ದುಕೊಳ್ಳುವ ಕನಸು ಹೊಂದಿತ್ತು. ಆದರೆ ಭಾರತದ ಭರ್ಜರಿ ರಕ್ಷಣಾತ್ಮಕ ಆಟದ ಮುಂದೆ ಚೀನಾ ಬೆಳ್ಳಿಗೆ ತೃಪ್ತಿಪಟ್ಟಿದೆ.

