ಗುವಾಹಟಿ: ಸಿಕ್ಸರ್, ಬೌಂಡರಿಗಳ ಸುರಿಮಳೆಯ ಆಟದಲ್ಲಿ ಭಾರತ (Team India) ವೆಸ್ಟ್ ಇಂಡೀಸ್(West Indies ) ವಿರುದ್ಧ 406 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಐತಿಹಾಸಿಕ ಮತ್ತು ದಾಖಲೆಯ ಜಯ ಸಾಧಿಸಿದೆ. ಈ ಜಯದೊಂದಿಗೆ 3 ಏಕದಿನ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಗುವಾಹಟಿಯ ಬರಸಪಾರ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ (ODI) ಪಂದ್ಯದಲ್ಲಿ, ಭಾರತ ತಂಡವು ಕೇವಲ 43.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 406 ರನ್ಗಳನ್ನು ಗಳಿಸುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡ ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಂತ ದೊಡ್ಡ ಮೊತ್ತವಾಗಿದೆ.
ಭಾರತದ ನಾಯಕ ಶುಭ್ಮನ್ ಗಿಲ್(Shubman Gill) ಅಜೇಯ 223 ರನ್(133 ಎಸೆತ, 26 ಬೌಂಡರಿ, 8 ಸಿಕ್ಸ್) ಸಿಡಿಸಿ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಎರಡನೇ ದ್ವಿಶತಕ ಬಾರಿಸಿ ತಂಡವನ್ನು ದಾಖಲೆಯ ಗೆಲುವಿನ ದಡ ಸೇರಿಸಿದರು.
ಬ್ಯಾಟಿಂಗ್ಗೆ ಹೇಳಿ ಮಾಡಿಸಿದ ಪಿಚ್ನಲ್ಲಿ ಇನ್ನಿಂಗ್ಸ್ ಆರಂಭಸಿದ ರೋಹಿತ್ ಶರ್ಮಾ(Rohit Sharma) ಮತ್ತು ಶುಭಮನ್ ಗಿಲ್ ಮೊದಲ ವಿಕೆಟಿಗೆ 161 ಎಸೆತಗಳಲ್ಲಿ 255 ರನ್ ಹೊಡೆಯುವ ಮೂಲಕ ಭದ್ರವಾದ ಅಡಿಪಾಯ ಹಾಕಿದರು. ರೋಹಿತ್ ಶರ್ಮಾ 101 ರನ್(75 ಎಸೆತ, 10 ಬೌಂಡರಿ, 6 ಸಿಕ್ಸ್ ಸಿಡಿಸಿ ಎಲ್ಬಿಗೆ ಔಟಾದರು. ಇದನ್ನೂ ಓದಿ: ಸ್ಫೋಟಕ ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಶುಭಮನ್ ಗಿಲ್
🎥 Simply brilliant shotmaking 🤝
2️⃣0️⃣0️⃣ partnership and counting for Captain Shubman Gill and Rohit Sharma 💥
Updates ▶️ https://t.co/6XCYRtZLAi#TeamIndia | #INDvWI | @mflone_ | @ShubmanGill | @ImRo45 pic.twitter.com/DItdSpWsaT
— BCCI (@BCCI) September 30, 2026
ಎರಡನೇಯವರಾಗಿ ಕ್ರೀಸ್ಗೆ ಆಗಮಿಸಿದ ಕೊಹ್ಲಿ ಬಿರುಸಿನ ಆಟಕ್ಕೆ ಇಳಿದರು. 19 ಎಸೆತಗಳಲ್ಲಿ 26 ರನ್(3 ಬೌಂಡರಿ, 1 ಸಿಕ್ಸ್) ಸಿಡಿಸಿದಾಗ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಗಾಯಕ್ವಾಡ್ ಅಜೇಯ 31 ರನ್ ಹೊಡೆದರು.
ಟಾಸ್ ಸೋತು ಬ್ಯಾಟ್ ಮಾಡಿದ ಇಂಡೀಸ್ ನಾಯಕ ಶಾಯ್ ಹೋಪ್ 104 ರನ್(94 ಎಸೆತ, 8 ಬೌಂಡರಿ, 3 ಸಿಕ್ಸ್), ಜಾನ್ ಕ್ಯಾಂಪ್ಬೆಲ್ 101 ರನ್(68 ಎಸೆತ, 9 ಬೌಂಡರಿ, 5 ಸಿಕ್ಸ್), ಮತ್ತು ಅಮೀರ್ ಜ್ಯಾಂಗೂ 114 ರನ್(77 ಎಸೆತ, 13 ಬೌಂಡರಿ, 3 ಸಿಕ್ಸ್) ಸಿಡಿಸಿದ ಪರಿಣಾಮ ತಂಡದ ಮೊತ್ತ 400 ರನ್ಗಳ ಗಡಿ ದಾಟಿತ್ತು.
𝗠𝗔𝗝𝗘𝗦𝗧𝗜𝗖. 𝗠𝗔𝗥𝗩𝗘𝗟𝗢𝗨𝗦. 𝗠𝗔𝗚𝗡𝗜𝗙𝗜𝗖𝗘𝗡𝗧 🫡
Shubman Gill becomes just the 2️⃣nd Indian to score multiple ODI double hundreds 👏👏
Updates ▶️ https://t.co/6XCYRtZLAi#TeamIndia | #INDvWI | @mflone_ | @ShubmanGill pic.twitter.com/e6MCoUfNbV
— BCCI (@BCCI) September 30, 2026
2013ರ ದಾಖಲೆ ಬ್ರೇಕ್
ಈ ಹಿಂದೆ 2013 ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 362 ರನ್ ಹೊಡೆದಿತ್ತು. ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 359 ರನ್ ಹೊಡೆದಿದ್ದರೆ ಭಾರತ ರೋಹಿತ್ ಶರ್ಮಾ ಅಜೇಯ 145 ರನ್ ಮತ್ತು ವಿರಾಟ್ ಕೊಹ್ಲಿ ಅವರ ಅಜೇಯ 100 ರನ್ಗಳ ಸಹಾಯದಿಂದ 43.3 ಓವರ್ಗಳಲ್ಲಿ 362 ರನ್ ಹೊಡೆದು 9 ವಿಕೆಟ್ಗಳ ಜಯ ಸಾಧಿಸಿತ್ತು. ಈ ಚೇಸಿಂಗ್ ದಾಖಲೆ ಯನ್ನು ಇಂದು ಭಾರತ ಬ್ರೇಕ್ ಮಾಡಿದೆ.


