ಲಕ್ನೋ: ಉತ್ತರ ಪ್ರದೇಶದ (Uttara Pradesh) ಸಹರಾನ್ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನ (Punjab National Bank) ಕರೆನ್ಸಿ ಚೆಸ್ಟ್ಗೆ ಸುಮಾರು 17 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಜಮೆಯಾಗಿದ್ದ ಪ್ರಕರಣದ ತನಿಖೆಯಲ್ಲಿ ಪಾಕಿಸ್ತಾನ (Pakistan) ನಂಟು ಪತ್ತೆಯಾಗಿರುವುದಾಗಿ ತನಿಖಾ ಸಂಸ್ಥೆಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿದ್ದು, ಅವುಗಳ ಪರಿಶೀಲನೆ ಮುಂದುವರಿದಿದೆ.
ಈ ಪ್ರಕರಣದಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಐವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿ ಜೈಲಿಗೆ ಕಳುಹಿಸಿದೆ. ಬಂಧಿತರ ಪೈಕಿ ಮುಕೇಶ್, ರಾಜೇಂದ್ರ ಹಾಗೂ ನೀಟು ಎಂಬ ಮೂವರನ್ನು ಗುರುವಾರದಿಂದ ಒಂದು ವಾರದ ಕಸ್ಟಡಿ ರಿಮಾಂಡ್ಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಮೋದಿ
ಪತ್ತೆಯಾದ ನಕಲಿ ನೋಟುಗಳ ಗುಣಮಟ್ಟ ಸಾಮಾನ್ಯ ನಕಲಿ ಕರೆನ್ಸಿಗಿಂತ ಉತ್ತಮವಾಗಿದ್ದು, ಅವುಗಳಲ್ಲಿ ಸೆಕ್ಯುರಿಟಿ ಥ್ರೆಡ್ ಕೂಡ ಇರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಇಂತಹ ನಕಲಿ ನೋಟುಗಳನ್ನು (Fake Note) ಈ ಹಿಂದೆ ನೇಪಾಳ (Nepal) ಗಡಿ ಮೂಲಕ ಭಾರತಕ್ಕೆ ತರಲಾಗಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಆ ಪ್ರಕರಣದಲ್ಲಿ ಕಾಸ್ಗಂಜ್ ಜಿಲ್ಲೆಯ ಇಬ್ಬರು ಯುವಕರನ್ನು ATS ಬಂಧಿಸಿತ್ತು.
ವರದಿಗಳ ಪ್ರಕಾರ, ಸಹರಾನ್ಪುರ ಪ್ರಕರಣದ ನಂಟು ಕೂಡ ಪಾಕಿಸ್ತಾನದತ್ತ ಸಾಗಿರುವುದಾಗಿ ತನಿಖಾ ಸಂಸ್ಥೆಗಳಿಗೆ ಸಾಕ್ಷ್ಯಗಳು ದೊರೆತಿವೆ ಎಂದು ತಿಳಿದುಬಂದಿದೆ. ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಉದ್ದೇಶದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಸಾಧ್ಯತೆ ಇದೆ.ಇದನ್ನೂ ಓದಿ: ಚುನಾವಣಾ ಆಯೋಗದ ಪರ ಸಮರ್ಥನೆ – ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಮುಕೇಶ್ ಕುಮಾರ್ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜೊತೆಗೆ ಆತನ ಇಬ್ಬರು ಸಹಚರರನ್ನೂ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಮುಕೇಶ್ ಮತ್ತೆ ನಕಲಿ ನೋಟುಗಳ ದಂಧೆಯಲ್ಲಿ ತೊಡಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವ್ರೇ ನಮ್ಮ ಕ್ಯಾಪ್ಟನ್: ಸತೀಶ್ ಜಾರಕಿಹೊಳಿ

