72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಗುಜರಾತ್ನ ಏಕ್ತಾ ನಗರದಲ್ಲಿ ಜರುಗಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ವಿಭಾಗಗಳಲ್ಲಿ ಒಟ್ಟು 92 ಮಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕನ್ನಡ ಹಾಗೂ ತುಳು ಚಿತ್ರರಂಗದ ಪ್ರತಿಭೆಗಳಿಗೆ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಪಿಕ್ಚರ್ಸ್’ ಮತ್ತು ಖ್ಯಾತ ‘ಕೆಆರ್ಜಿ ಸ್ಟುಡಿಯೋಸ್’ ಜಂಟಿ ನಿರ್ಮಾಣದ ‘ಮಿಥ್ಯ’ ಸಿನಿಮಾ ಮೂರು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಿತು.
ಸುಮಂತ್ ಭಟ್ ಕಥೆ ಬರೆದು ನಿರ್ದೇಶಿಸಿರುವ ‘ಮಿಥ್ಯ’ ಚಿತ್ರದಲ್ಲಿನ ನಟನೆಗಾಗಿ ಬಾಲನಟ ಅತೀಶ್ ಎಸ್. ಶೆಟ್ಟಿಅತ್ಯುತ್ತಮ ಬಾಲ ಕಲಾವಿದ’ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ಕರಾವಳಿಯ ತುಳು ಚಿತ್ರರಂಗಕ್ಕೂ ಸಮಾರಂಭದಲ್ಲಿ ವಿಶೇಷ ಗೌರವ ಸಂದಿದ್ದು, ಶಿವಧ್ವಜ್ ಶೆಟ್ಟಿ ನಿರ್ದೇಶನದ ಹಾಗೂ ‘ಪಿಚ್ಚರ್ ಸ್ಟುಡಿಯೋ’ ನಿರ್ಮಾಣದ ‘ಇಂಬು’ ಚಿತ್ರತಂಡವು ‘ಅತ್ಯುತ್ತಮ ತುಳು ಸಿನಿಮಾ’ ವಿಭಾಗದ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿಸಿಕೊಂಡಿತು.
ಸಿನಿಮಾ ಬರವಣಿಗೆ ವಿಭಾಗದಲ್ಲಿ (ಅತ್ಯುತ್ತಮ ಪುಸ್ತಕ), ಲೇಖಕ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರ ರಚನೆಯ ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪುಸ್ತಕವನ್ನು ಮಿರರ್ ಬುಕ್ಸ್ ಪ್ರಕಾಶನ ಪ್ರಕಟಿಸಿದೆ.

