– ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಾಥ್
ದಾವಣಗೆರೆ: ಇಲ್ಲಿನ (Davanagere) ವಿನೋಭಾ ನಗರದ ಗಣೇಶ ವಿಸರ್ಜನೆ ವೇಳೆ ಪೆಂಡಾಲ್‌ನಿಂದ ಮಸೀದಿಯವರೆಗೆ ಟ್ರ್ಯಾಕ್ಟರ್‌ನ್ನು ಡಿಸಿ ಗಂಗಾಧರಸ್ವಾಮಿಯವರು ಚಲಾಯಿಸಿದ್ದಾರೆ. ಈ ವೇಳೆ ಟ್ರ್ಯಾಕ್ಟರ್‌ನಲ್ಲಿ ಕುಳಿತು ಸಂಸದೆ ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಅವರು ಸಾಥ್ ನೀಡಿದ್ದಾರೆ.
ಪ್ರತಿ ಬಾರಿ ಶ್ರೀ ವೀರ ವರಸಿದ್ದಿ ವಿನಾಯಕ ಸೇವಾ ಸಮಿತಿಯ ಗಣೇಶ ಮೂರ್ತಿಯನ್ನು ಹೊತ್ತ ಟ್ಯ್ರಾಕ್ಟರ್‌ನ್ನು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಚಲಾಯಿಸುತ್ತಿದ್ದರು. ಈ ಬಾರಿ ಜಿಲ್ಲಾಧಿಕಾರಿಗಳು ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಆದರೂ ಒಂದು ಕಡೆ ಪೊಲೀಸರು ಹಾಗೂ ಯುವಕರ ನಡುವೆ ಸಣ್ಣ ವಾಗ್ವಾದ ಸಹ ನಡೆಯಿತು. ಇದನ್ನೂ ಓದಿ: ಡೇಟಾ ಬೇಡದವರಿಗೆ ಬಂಪರ್ ಆಫರ್: ಕಡಿಮೆ ದರದಲ್ಲಿ ಸಿಗಲಿವೆ ವಾಯ್ಸ್ ಪ್ಯಾಕ್‌ಗಳು
ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್‌ಪಿ ಶೇಖರ್ ಹೆಚ್‌ಟಿ ನೇತೃತ್ವದಲ್ಲಿ ಜುಮ್ಮಾ ಮಸೀದಿ ಬಳಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ವಿನೋಭಾ ನಗರ ಮಸೀದಿ ಬಳಿ ಸೇರಿದಂತೆ ಹಲವು ಕಡೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಸೀದಿಯ ಮುಂದೆ ಮೆರವಣಿಗೆ ಬರುತ್ತಿದ್ದಂತೆ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಹಿಂದೂ ಮುಖಂಡರನ್ನು ತಳ್ಳಿ ಮುಂದೆ ಕಳುಹಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಮಸೀದಿಯ ಮುಂಭಾಗ ಕೆಲ ಕಾಲ ಪೊಲೀಸರು ಡಿಜೆ ಆಫ್ ಮಾಡಿಸಿದ್ದರು. ಈ ವೇಳೆ, ಯುವಕರು ಜೋರಾಗಿ ಕೂಗಾಡಿದ್ದು, ಮತ್ತೆ ಡಿಜೆ ಆನ್ ಮಾಡಲಾಯಿತು. ಇದನ್ನೂ ಓದಿ: ಸರ್ಕಾರದ ವಿರುದ್ಧ ಬಿಜೆಪಿಯಿಂದ ‘ನಮ್ಮ ಮನೆ, ನಮ್ಮ ಹಕ್ಕು’ ಜನಾಗ್ರಹ ಆಂದೋಲನ

