– ಒಟ್ಟು 200 ತಾಲೂಕು ಬರ ಪೀಡಿತ ಅಂತ ಘೋಷಣೆ ಆಗಲಿದೆ – ಪರಂ ಮಾಹಿತಿ
– 150 ವರ್ಷಗಳ ಹಿಂದಿನ ಬರಗಾಲಕ್ಕೆ ಹೋಲಿಕೆ
ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ (Drought) ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಬರದ ಕುರಿತು ಚರ್ಚೆ ನಡೆಯುತ್ತಿದೆ. ಆದ್ರೆ ಚರ್ಚೆ ಆರಂಭಕ್ಕೂ ಮುನ್ನವೇ ಸದನದಲ್ಲಿ ಸಚಿವರ ಗೈರುಹಾಜರಿ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
ಬರದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಸಚಿವರು ಸದನದಲ್ಲಿ ಹಾಜರಿ ಇಲ್ಲದಿರುವುದನ್ನ ವಿಪಕ್ಷ ಸದಸ್ಯರು ಪ್ರಶ್ನಿಸಿದರು. ʻʻಬರದ ಬಗ್ಗೆ ಚರ್ಚೆಗೆ ಸಚಿವರ ಬರ ಇದೆ. ಮಂತ್ರಿಗಳಿಗೆ ಬರ ಬಂದಿದೆʼʼ ಎಂದು ಸಿಟಿ ರವಿ, ಭೋಜೇಗೌಡ ಹಾಗೂ ರವಿಕುಮಾರ್ ಸೇರಿದಂತೆ ವಿಪಕ್ಷ ಸದಸ್ಯರು ಸರ್ಕಾರವನ್ನ ಟೀಕಿಸಿದರು.
ಸದನದಲ್ಲಿ 15 ಸಚಿವರು ಇರಬೇಕಿತ್ತು. ಆದರೆ, ಕೇವಲ ಮೂವರು ಸಚಿವರು ಮಾತ್ರ ಹಾಜರಿದ್ದಾರೆ ಎಂದು ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ಗೈರಾಗಿರುವ ಸಚಿವರನ್ನ ಸದನಕ್ಕೆ ಕರೆಸುವುದಾಗಿ ತಿಳಿಸಿದರು.

ಬರದ ವಿಚಾರ ಮಾತ್ರ ಚರ್ಚೆಗೆ ಒತ್ತಾಯ
ಇದೇ ವೇಳೆ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಸೇರಿದಂತೆ ಕೆಲ ಸದಸ್ಯರು ತೃತೀಯ ಭಾಷೆ ಸೇರಿದಂತೆ ಇತರ ವಿಷಯಗಳ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಆದ್ರೆ, ಪ್ರಸ್ತುತ ಅಧಿವೇಶನವನ್ನ ಬರದ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದೆ. ಹೀಗಾಗಿ ಬೇರೆ ವಿಷಯಗಳ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಭಾಪತಿ ತಿಳಿಸಿದರು. ಬರದ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಸಂತೋಷ್ ಲಾಡ್ ಹಾಗೂ ಡಿಸಿಎಂ ಜಿ. ಪರಮೇಶ್ವರ್ ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ, ಬರದ ಪರಿಸ್ಥಿತಿ ಕುರಿತು ಚರ್ಚೆ
ಸದನವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಜಿ. ಪರಮೇಶ್ವರ್, ವಿಶೇಷ ಅಧಿವೇಶನ ಕರೆಯಲು ಎರಡು ಪ್ರಮುಖ ಕಾರಣಗಳಿವೆ ಎಂದು ತಿಳಿಸಿದರು. ʻಕಸ್ತೂರಿ ರಂಗನ್ ವರದಿಗೆ ರಾಜ್ಯದ ಅಭಿಪ್ರಾಯ ಸಲ್ಲಿಸಬೇಕಿದೆ. ಈ ವಿಚಾರದಲ್ಲಿ ಪಕ್ಷಾತೀತವಾಗಿ ಸದಸ್ಯರ ಅಭಿಪ್ರಾಯ ಪಡೆಯುವುದು ಮುಖ್ಯ. ಮತ್ತೊಂದೆಡೆ ಕರ್ನಾಟಕದಲ್ಲಿ ಭೀಕರ ಬರಗಾಲ ಎದುರಾಗಿದೆ. ಇಡೀ ರಾಜ್ಯ ಬರದಿಂದ ತತ್ತರಿಸಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡಬೇಕು. ಈ ವಿಚಾರವನ್ನು ಸದನದಲ್ಲಿ ಚರ್ಚಿಸಬೇಕಿದೆ. ಈ ಎರಡು ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳ ಚರ್ಚೆಗೆ ಅವಕಾಶ ನೀಡಬಾರದುʼ ಎಂದು ಒತ್ತಾಯಿಸಿದರು.
150 ವರ್ಷಗಳ ಹಿಂದಿನ ಬರಗಾಲಕ್ಕೆ ಹೋಲಿಕೆ
ಕರ್ನಾಟಕದಲ್ಲಿ ಈ ಬಾರಿ ಅತ್ಯಂತ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. 2023ರಲ್ಲಿ ಬರಗಾಲ ಬಂದಿತ್ತು. ಆಗ 124 ವರ್ಷಗಳ ಬಳಿಕ ಇಂತಹ ಬರ ಬಂದಿತ್ತು. ಆದರೆ ಈ ಬಾರಿ 150 ವರ್ಷಗಳ ಹಿಂದಿನ ಬರಗಾಲಕ್ಕೆ ಹೋಲಿಕೆ ಮಾಡಲಾಗುತ್ತಿದೆ. 1876 ರಲ್ಲಿ ಕಂಡುಬಂದಿದ್ದಂತಹ ಭೀಕರ ಬರಗಾಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಸೂಪರ್ ಎಲ್‌ನಿನೋ ಪರಿಣಾಮದಿಂದ ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿದೆ ಎಂದು ಪರಮೇಶ್ವರ್ ಸದನದಲ್ಲಿ ತಿಳಿಸಿದರು.

ಇನ್ನೂ ರಾಜ್ಯದಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 642 ಮಿ.ಮೀ. ಮಳೆಯಾಗಿದೆ. ಜೂನ್‌ನಿಂದ ಇದುವರೆಗೆ ಶೇ.36ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದ ಬಿತ್ತನೆಗೆ ತೀವ್ರ ಹಾನಿಯಾಗಿದ್ದು, ಇತಿಹಾಸದಲ್ಲೇ ಇಂತಹ ಪ್ರಮಾಣದ ಬೆಳೆ ನಾಶವಾಗಿರಲಿಲ್ಲ ಎಂದು ಡಿಸಿಎಂ ಮಾಹಿತಿ ನೀಡಿದರು.
200 ತಾಲೂಕುಗಳು ಬರಪೀಡಿತವಾಗುವ ಸಾಧ್ಯತೆ
ರಾಜ್ಯದಲ್ಲಿ ಹಂತ ಹಂತವಾಗಿ ಬರಪೀಡಿತ ತಾಲೂಕುಗಳನ್ನ ಘೋಷಣೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿತ್ತು. ಬಳಿಕ 23 ತಾಲೂಕುಗಳನ್ನ 2ನೇ ಹಂತದಲ್ಲಿ ಸೇರಿಸಲಾಯಿತು. ಇದೀಗ ಮತ್ತೆ 53 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಇದರೊಂದಿಗೆ ಒಟ್ಟು 177 ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಇನ್ನೂ ಸುಮಾರು 20 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದ್ದು, ಒಟ್ಟಾರೆ 200 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಬಹುದು ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ಗದಗ ತಾಲೂಕು ಪಟ್ಟಿಯಲ್ಲಿದೆಯೇ? ಸಿಟಿ ರವಿ ಪ್ರಶ್ನೆ
ಈ ವೇಳೆ 53 ತಾಲೂಕುಗಳ ಪಟ್ಟಿಯಲ್ಲಿ ಗದಗ ಜಿಲ್ಲೆ ಇದೆಯೇ ಎಂದು ಸಿಟಿ ರವಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಗದಗ ಕೂಡ ಪಟ್ಟಿಯಲ್ಲಿ ಇದೆ ಎಂದು ಸ್ಪಷ್ಟಪಡಿಸಿದರು. ಬರಪೀಡಿತ ತಾಲೂಕುಗಳ ಘೋಷಣೆ ವಿಚಾರದಲ್ಲೂ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಬರ ಎಂದು ಘೋಷಣೆ ಮಾಡದೇ ಹೋದರೆ ನಿಮ್ಮ ಶಾಸಕರು ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದಾರೆ. ರಾಜೀನಾಮೆ ನೀಡುವ ಬೆದರಿಕೆ ಹಾಕಿದಾಗ ಮಾತ್ರ ಬರ ಎಂದು ಘೋಷಣೆ ಮಾಡಬೇಕೇ? ಬರದ ವಿಚಾರದಲ್ಲೂ ರಾಜಕೀಯ ಮಾಡಬೇಕೇ? ಎಂದು ಸಿಟಿ ರವಿ ಪ್ರಶ್ನಿಸಿದರು.
ಈ ವೇಳೆ ಮಾಜಿ ಬಸವರಾಜ ಹೊರಟ್ಟಿ ಕೂಡ ಚರ್ಚೆಗೆ ಸೇರಿಕೊಂಡರು. ಹೆಚ್.ಕೆ ಪಾಟೀಲ್ ಅವರ ರಾಜೀನಾಮೆ ವಿಚಾರವನ್ನು ಉಲ್ಲೇಖಿಸಿ ಡಿಸಿಎಂ ಪರಮೇಶ್ವರ್ ಅವರ ಕಾಲೆಳೆದ ಹೊರಟ್ಟಿ, ಒಬ್ಬ ಶಾಸಕನನ್ನೂ ಕಳೆದುಕೊಳ್ಳಬೇಡಿ ಎಂದು ಟಾಂಗ್ ಕೊಟ್ಟರು.

