ದಾವಣಗೆರೆ: ಪಶು ವೈದ್ಯಾಧಿಕಾರಿಗಳ (KPSC Scam) ನೇಮಕದಲ್ಲಿ ನಡೆದ ಅಕ್ರಮದ ಹಿನ್ನೆಲೆ ಮಾಜಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಇಂದು ನಿವಾಸದಲ್ಲಿ ಸಿಐಡಿ ತಂಡ ಶೋಧ ನಡೆಸಿದೆ.
ದಾವಣಗೆರೆ ನಗರದ ತರಳುಬಾಳು ಬಡಾವಣೆಯಲ್ಲಿರುವ ಶಾಂತಾ ಹೊಸಮನಿ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಮನೆಯಲ್ಲಿ ಯಾರು ವಾಸವಿಲ್ಲದ ಹಿನ್ನೆಲೆ ಮನೆಗೆ ಬೀಗ ಹಾಕಲಾಗಿತ್ತು.
ಐದು ವರ್ಷಗಳ ಹಿಂದೆ ದಾವಣಗೆರೆ ತಾಲೂಕಿನ ಹೊನ್ನೂರು ಹಾಗೂ ಹರಿಹರದ ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಂತಾ ಹೊಸಮನಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರಿಗೆ ವರ್ಗಾವಣೆಯಾದ ನಂತರ ದಾವಣಗೆರೆಯಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಿದ್ದರು. ಆದರೆ ಕಳೆದ ಎಂಟು ತಿಂಗಳಿನಿಂದ ಮನೆಯಲ್ಲಿ ಯಾರು ವಾಸವಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾನಗರ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ ಸಿಐಡಿ ತಂಡ ವಾಪಸ್ಸಾಗಿದೆ. ಇದನ್ನೂ ಓದಿ: ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ, ಬಡವರ ಪರವಾಗಿ ಕೆಲಸ ಮಾಡಮ್ಮ – ಹಾಸನ ಡಿಸಿ ಬೆಂಬಲಕ್ಕೆ ನಿಂತ ಡಿಕೆಶಿ

