ಚಾಮರಾಜನಗರ: ಹನೂರು ಜನರ ಹಲವು ವರ್ಷಗಳ ಕನಸು ನನಸಾಗಿದೆ. ರಾಮನಗುಡ್ಡ ಜಲಾಶಯ (Ramanagudda Reservoir) ತುಂಬಿ ಹರಿದಿದೆ.
40 ವರ್ಷಗಳಿಂದಲೂ ರಾಮನಗುಡ್ಡ ಡ್ಯಾಂ ಭರ್ತಿಯಾಗಿರಲಿಲ್ಲ. ಈಗ ಜಲಾಶಯ ತುಂಬಿ ಕೋಡಿ ಬಿದ್ದಿದೆ. ಕಾವೇರಿ ನದಿಯಿಂದ ಬೂದುಬಾಳು ಮೂಲಕ ಕೆರೆಗೆ ನೀರು ಹರಿಸುವ ಕೆಲಸ ಮಾಡಲಾಗಿದೆ. ಶಾಸಕ ಮಂಜುನಾಥ್ ಸೇರಿ ಅಕ್ಕಪಕ್ಕದ ಗ್ರಾಮಸ್ಥರಿಂದ ಬಾಗಿನ ಅರ್ಪಣೆ ಮಾಡಲಾಗಿದೆ.
30 ಕ್ಕೂ ಹೆಚ್ಚು ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ನೀರಿಲ್ಲದೇ ಕುಡಿಯುವ ನೀರಿಗೂ ಜನರು ಪರಿತಪಿಸುತ್ತಿದ್ದರು. ಸ್ಥಳೀಯ ಶಾಸಕರು ಎರಡೂವರೆ ಕೋಟಿ ವೆಚ್ಚದಲ್ಲಿ ಕಾವೇರಿ ನದಿಗೆ ಪೈಪ್ ಅಳವಡಿಸಿ ನೀರು ಪಂಪ್ ಮಾಡಿಸಿದದ್ದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾಳಜಿಯಿಂದ ರಾಮನಗುಡ್ಡ ಜಲಾಶಯ ಭರ್ತಿಯಾಗಿದೆ. ಈ ಕೆರೆಯಿಂದಲೇ ಟ್ಯಾಂಕರ್ ಮೂಲಕ ನೀರು ಒದಗಿಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ.
ರಾಮಾಪುರ, ಅಜ್ಜೀಪುರ, ಶಾಗ್ಯ ಸೇರಿದಂತೆ ಹಲವು ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು.

