ಹಾಸನ: ಗ್ರಾಮ ಪಂಚಾಯ್ತಿ ಚುನಾವಣೆಗೆ ಮೀಸಲಾತಿ ವಿಚಾರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಜಿಲ್ಲಾಧಿಕಾರಿ (Latha Kumari) ವಿರುದ್ಧ ಹರಿಹಾಯ್ದಿದ್ದರು. ಇಂದು ಸಕಲೇಶಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತು ನೇರ ಸಂವಾದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹಾಸನ ಜಿಲ್ಲಾಧಿಕಾರಿ ಬೆಂಬಲಕ್ಕೆ ನಿಂತರು.
ಹಾಸನ ಡಿಸಿಗೆ ಕಿರುಕುಳ ಇದೆ. ಯಾರಿಂದ ಕಿರಕುಳ ಇದೆ ಅನ್ನೋದು ನಿಮಗೆ ಗೊತ್ತಿದೆ. ನಾನು ಅವರಿಗೆ ಫೋನ್ ಮಾಡಿ ಹೇಳಿದ್ದೇನೆ. ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಬಡವರ ಪರವಾಗಿ ಕೆಲಸ ಮಾಡಮ್ಮ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು
ಕೆಲವರು ಟೀಕೆ ಮಾಡುತ್ತಾರೆ, ಮಾಡಲಿ ಸಂತೋಷ. ನಾನು ಕ್ಯಾಬಿನೆಟ್ ಮೀಟಿಂಗ್ ಮಾಡಿದ್ರು ಟೀಕೆ ಮಾಡ್ತಾರೆ, ನಡೆದರು ಟೀಕೆ ಮಾಡ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಬಿಜೆಪಿ ಸ್ನೇಹಿತರು ಅವರ ಸಾಧನೆಗಳನ್ನು ಹೇಳಲಿ, ಬೇಡ ಎನ್ನಲ್ಲ, ಆದರೆ ಮಾಡದೆ ಹೋದಾಗ, ದೇವರು ವರನು ಕೊಡಲ್ಲ, ಶಾಪನೂ ಕೊಡಲ್ಲ ಅವಕಾಶ ಕೊಡ್ತಾನೆ. ನನಗೆ ಒಂದು ಅವಕಾಶ ಕೊಟ್ಟಿದ್ದಾನೆ ಎಂದರು. ಇದನ್ನೂ ಓದಿ: ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ವಂಚನೆ – ಮೂವರು ಆರೋಪಿಗಳು ಅರೆಸ್ಟ್

