– ನನ್ನನ್ನು ಯಾಕೆ ಕೆಣಕ್ತೀರಿ ಎಂದ ಡಿಕೆಶಿ
ಶಿವಮೊಗ್ಗ: ರಾಜ್ಯದಲ್ಲಿ ವಂದೇ ಮಾತರಂ ಜಟಾಪಟಿ ತಾರಕಕ್ಕೇರುತ್ತಲೇ ಇದೆ. ಸಿಎಂ ಡಿಕೆ ಶಿವಕುಮಾರ್ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕರು, ರೈತರು, ತಜ್ಞರ ಜೊತೆ ನೇರ ಸಂವಾದ ಕಾರ್ಯಕ್ರಮದಲ್ಲಿ ಎರಡೇ ಚರಣ ಹಾಡಿದ್ದಕ್ಕೆ ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪಿಸಿದ್ದಾರೆ. ವೇದಿಕೆಯಲ್ಲೇ ಮೈಕ್ ಹಿಡಿದು ವಂದೇ ಮಾತರಂ ಪೂರ್ಣ ಹಾಡುವಂತೆ ಆಗ್ರಹಿಸಿದ್ದಾರೆ.
ಈ ವೇಳೆ, ವೇದಿಕೆ ಬಳಿ ಕೆಲಕಾಲ ಗೊಂದಲ ಸೃಷ್ಠಿಯಾಗಿತ್ತು. ವೇದಿಕೆ ಹತ್ತಿರ ಬಂದ ಕಾಂಗ್ರೆಸ್ ಮುಖಂಡರು `ಡಿ.ಕೆ ಡಿ.ಕೆ’ ಅಂತ ಘೋಷಣೆ ಕೂಗಿದ್ದಾರೆ. ಬಳಿಕ ಸಿಎಂ ಮಾತಾಡಿ, ಹಿಂದಿನಿಂದಲೂ ನಾವು ಎರಡೇ ಪ್ಯಾರ ಹಾಡಿಕೊಂಡು ಬಂದಿದ್ದೇವೆ. ಚನ್ನಬಸಪ್ಪ ಯಾಕೇ ನನ್ನ ಕೆಣಕ್ತಾ ಇದ್ದಾರೋ ಗೊತ್ತಾಗ್ತ ಇಲ್ಲ. ನೀವೇ ಉತ್ತರ ಕೊಟ್ಟಿದ್ದೀರಿ ಅಂತ ಕಾರ್ಯಕರ್ತರಿಗೆ ಹೇಳಿದ್ದಾರೆ.
ಇತ್ತ, ವಂದೇ ಮಾತರಂ ವಿಚಾರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸಚಿವ ಶಿವರಾಜ್ ತಂಗಡಗಿ ಮಧ್ಯೆ ವಾಕ್ಸಮರ ನಡೆದಿದೆ. ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಪೂರ್ತಿಯಾಗಿ ಒಂದೇ ಮಾತರಂ ಹಾಡಲು ಹೇಳಿದ್ದೇ ನಾನು. ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಅಂತ ಸಚಿವ ತಂಗಡಗಿಗೆ ಜನಾರ್ದನ ರೆಡ್ಡಿ ಮನವಿ ಮಾಡಿದ್ದಾರೆ.

