ಬೆಂಗಳೂರು: ನ್ಯಾಷನಲ್ ಲಾ ಕಾಲೇಜ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ಆಯೋಜಿಸಿದ್ದ ಉಮರ್ ಖಾಲಿದ್ (Umar Khalid) ಸಾಕ್ಷ್ಯಚಿತ್ರ ಪ್ರದರ್ಶನವನ್ನು ಆಡಳಿತ ಮಂಡಳಿ ಸಂಪೂರ್ಣವಾಗಿ ರದ್ದು ಮಾಡಿದೆ.
ಸೆಪ್ಟೆಂಬರ್ 14 ರಂದು ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಆಗಿತ್ತು. ಇದಕ್ಕೆ ಎಬಿವಿಪಿ ಸಂಘಟನೆ ಪ್ರಬಲ ವಿರೋಧ ವ್ಯಕ್ತಪಡಿಸಿ ದೇಶದ್ರೋಹಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ ಆಗಬಾರದು ಅಂತ ಆಡಳಿತ ಮಂಡಳಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ವಂದೇ ಮಾತರಂ 2 ಪ್ಯಾರಾನಾದ್ರೂ ಹಾಡೋಕೆ ಬರುತ್ತಾ ಕೇಳಿ: ಹರಿಪ್ರಸಾದ್ ತಿರುಗೇಟು
ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಆಡಳಿತ ಮಂಡಳಿ ಪ್ರದರ್ಶನ ರದ್ದು ಮಾಡಲಾಗಿತ್ತು. ಬಳಿಕ ಸಂಪೂರ್ಣ ಸಾಕ್ಷ್ಯಚಿತ್ರ ಪ್ರದರ್ಶನದ ಕಾರ್ಯಕ್ರಮವೇ ರದ್ದು ಮಾಡಬೇಕು ಅಂತ ಎಬಿವಿಪಿ ಸಂಘಟನೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಪ್ರಹ್ಲಾದ್ ಜೋಷಿ, ಕಾನೂನು ಸಚಿವರಿಗೆ ಮನವಿ ಮಾಡಿತ್ತು. ಈಗ ಎಬಿವಿಪಿ ಹೋರಾಟಕ್ಕೆ ಜಯ ಸಿಕ್ಕಿದ್ದು, NLSIU ಆಡಳಿತ ಮಂಡಳಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದು ಮಾಡಿದೆ.

