ಬಳ್ಳಾರಿ: ಗಣಪತಿ ಹಬ್ಬದ ಸಂದರ್ಭದಲ್ಲಿ ಪಪ್ಪಾಯಿ ಹಣ್ಣಿನಲ್ಲಿ ಗಣೇಶನ ರೂಪ ಕಂಡು ರೈತ ಕುಟುಂಬ ಅಚ್ಚರಿಗೊಂಡಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿ (Kudligi) ತಾಲೂಕಿನ ಕಾನಾಮಡಗು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ರೈತ ಬಸವರಾಜ್ ಎನ್ನುವವರ ತೋಟದಲ್ಲಿನ ಪಪ್ಪಾಯದಲ್ಲಿ ಗಣೇಶಾಕೃತಿ ಕಂಡುಬಂದಿದೆ. ಸಹೋದರನಿಗೆ ಹಣ್ಣು ನೀಡಲು ರೈತ ಬಸವರಾಜ್ ಪಪ್ಪಾಯ ಕಿತ್ತು ತಂದಿದ್ದ. ಈ ವೇಳೆ ತಂದಿದ್ದ ಪಪ್ಪಾಯದಲ್ಲಿ ಗಣೇಶಾಕೃತಿ ಕಂಡುಬಂದಿದ್ದು, ಕುಟುಂಬಸ್ಥರು ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮಳೆ ನೀರು – 7 ಕಿ.ಮೀ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಆನಂತರ ಪಪ್ಪಾಯಿಯನ್ನೇ ಗಣೇಶನ ರೂಪವೆಂದು ಭಾವಿಸಿದ ರೈತ ಕುಟುಂಬ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದೆ. ಹಲವು ವರ್ಷಗಳ ಬಳಿಕ ರೈತ ಬಸವರಾಜ್ ಪಾಲ್ತೂರ್ ಕುಟುಂಬದಲ್ಲಿ ಮತ್ತೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ.

