ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ(Rain) ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ 8:30 ರಿಂದ 11:30 ರವರೆಗಿನ ಕೇವಲ 3 ಗಂಟೆಗಳ ಅವಧಿಯಲ್ಲಿ ನಗರದಲ್ಲಿ ಬರೊಬ್ಬರಿ 52.8 ಮಿ.ಮೀ ಮಳೆ ಸುರಿದಿದೆ.
ಗುಡುಗು-ಮಿಂಚು ಸಹಿತ ಸುರಿದ ಬಿರುಸಿನ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ನಗರದ ಆಟೋಮ್ಯಾಟಿಕ್ ವೆದರ್ ಸ್ಟೇಷನ್ (AWS) ಕೇಂದ್ರದಲ್ಲಿ ಅತ್ಯಧಿಕ 53 ಮಿ.ಮೀ ಮಳೆ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಎಚ್ಚರಿಕೆ
ಎಲ್ಲೆಲ್ಲಿ ಎಷ್ಟು ಮಳೆ?
AWS: 53.0 ಮಿ.ಮೀ
ಬೆಂಗಳೂರು ನಗರ: 52.8 ಮಿ.ಮೀ
ಚಂದೂರಾಯನಹಳ್ಳಿ: 20.0 ಮಿ.ಮೀ
ಚಿಂತಾಮಣಿ: 7.5 ಮಿ.ಮೀ
ಜಿಕೆವಿಕೆ ಬೆಂಗಳೂರು: 6.0 ಮಿ.ಮೀ
ಹೆಚ್ಎಎಲ್ ಏರ್ಪೋರ್ಟ್: 2.2 ಮಿ.ಮೀ
ದೇವನಹಳ್ಳಿ ವಿಮಾನ ನಿಲ್ದಾಣ: 1.2 ಮಿ.ಮೀ
ಇಂದೂ ಸಹ ಮಳೆ ಎಚ್ಚರಿಕೆ
ಬೆಂಗಳೂರು ನಗರ (Bengaluru) ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಮೋಡ ಕವಿದ ವಾತಾವರಣದೊಂದಿಗೆ ಮಳೆ ಮುಂದುವರಿಯಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

