ಬಿಗ್ಬಾಸ್ ಕನ್ನಡ (Bigg Boss Kannada) ಸೀಸನ್ 13ರ ಎರಡನೇ ವಾರದಲ್ಲೇ ಸ್ಪರ್ಧಿಗಳ ನಡುವೆ ಟಾಕ್ವಾರ್ ಜೋರಾಗಿದ್ದು, ವೈಷ್ಣವಿ ಕೌಂಡಿನ್ಯ ಅವರನ್ನ ‘ಶೋ ಪೀಸ್’ ಎಂದ ಕರೆದ ವಿಚಾರ ಇದೀಗ ಮನೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮನೆಯೊಳಗೆ ದಿನ ಕಳೆದಂತೆ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯ, ಟಾಕ್ ವಾರ್ ಹಾಗೂ ಆರೋಪ-ಪ್ರತ್ಯಾರೋಪಗಳು ಜೋರಾಗುತ್ತಿವೆ. ಇದೇ ವೇಳೆ ವೈಷ್ಣವಿ (Vaishnavi Koundinya) ಅವರ ಆಟದ ಬಗ್ಗೆ ಗಗನ್, ಧನುಷ್ ಹಾಗೂ ಕಿರಣ್ ಮಾಡಿರುವ ಟೀಕೆಗಳು ಗಮನ ಸೆಳೆದಿವೆ. ಭಾನುವಾರ ಕಿಚ್ಚನ ಪಂಚಾಯ್ತಿಯಲ್ಲಿ ಸೀಸನ್ 13ರ ಮೊದಲ ಎಸ್ ಆರ್ ನೋ ರೌಂಡ್ ನಡೆಯಿತು. ಈ ವೇಳೆ, ʻವೈಷ್ಣವಿ ಅವರು ಬಿಗ್ಬಾಸ್ ಮನೆಯಲ್ಲಿ ಜಸ್ಟ್ ಒಂದು ಶೋ ಪೀಸ್ ಅಷ್ಟೇʼ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಕೆಲವರು ‘ಎಸ್’ ಎಂದರೆ, ಇನ್ನು ಕೆಲವರು ‘ನೋ’ ಎಂದು ಉತ್ತರಿಸಿದರು.

ವೈಷ್ಣವಿ ಬಗ್ಗೆ ಗಗನ್ ಹೇಳಿದ್ದೇನು?
ಮೊದಲಿಗೆ ನಿರೂಪಕರಾದ ಕಿಚ್ಚ ಸುದೀಪ್ ಗಗನ್ ಅವರನ್ನ ಯಾಕೆ ʻಎಸ್ʼ ಎಂದು ಪ್ರಶ್ನೆ ಮಾಡಿದಾಗ ಗಗನ್, ವೈಷ್ಣವಿ ಅವರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರದ್ದೇ ಸ್ಟ್ಯಾಂಡ್ ಇಲ್ಲ. ಯಾವುದಾದರೂ ಇಶ್ಯೂ ಆದಾಗ ಆ ಪಾಯಿಂಟ್ನ್ನೇ ತೆಗೆದುಕೊಂಡು ಹೇಳುತ್ತಾರೆ. ಬಿಟ್ಟರೆ ಅವರದ್ದೇ ವೈಯಕ್ತಿಕ ಸ್ಟ್ಯಾಂಡ್ ಇಲ್ಲ ಎಂದು ಅಂತ ಹೇಳಿದ್ರು.

ಇದಾದ ಬಳಿಕ ಧನುಷ್ ಕೂಡ ವೈಷ್ಣವಿ ಅವರ ಆಟದ ಬಗ್ಗೆ ಟೀಕೆ ಮಾಡಿದ್ರು. ʻಅವರದ್ದೇ ಗುಂಗಲ್ಲಿ ಇರ್ತಾರೆ. ಹೀಗೆ ಕಾಣಿಸಿಕೊಳ್ಳಬೇಕು ಅಂತಾರೆ. ಟಾಸ್ಕ್ ಅಂತ ಬಂದಾಗ ಅರ್ಧಂಬರ್ಧ ಇನ್ವಾಲ್ವ್ ಆಗ್ತಾರೆ. 100 ಪರ್ಸೆಂಟ್ ನಾನ್ ನೋಡಿಲ್ಲ. ಏನೋ ಮಾತಾಡಬೇಕು ಅಂತ ಸೆಂಟ್ರಲ್ಲಿ ಬಂದು ಮಾತಾಡ್ತಿರ್ತಾರೆ. ಪ್ರಾಪರ್ ಸ್ಟ್ಯಾಂಡ್ ತೆಗೆದುಕೊಂಡು ನನಗಿದು ಬೇಕು, ಇದನ್ನ ಮಾಡ್ತೀನಿ, ಈ ಗೇಮ್ ಆಡಬೇಕು ಅಂತ ಹೇಳಿರೋದು ನಾನು ನೋಡಿಲ್ಲ. ಶೋ ಗೋಸ್ಕರ ಮಾತಾಡ್ತಾರೆ ಅನ್ಸುತ್ತೆ ಅಂತ ಹೇಳಿದ್ರು.
ಕಿರಣ್ ಕೂಡ ವೈಷ್ಣವಿ ವಿರುದ್ಧ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ʻನಾಲ್ಕು ಮಂದಿ ನೋಡಲಿ ಅಂತ ಮಾತಾಡ್ತಾರೆ. ಎಲ್ಲದರಲ್ಲೂ ಮೂಗು ತೂರಿಸ್ತಾರೆ. ಆಟ ಅನ್ನೋದೇನಿಲ್ಲʼ ಅಂತ ಹೇಳಿದ್ರು.

ವೈಷ್ಣವಿ ಖಡಕ್ ಕೌಂಟರ್
ಮನೆಯ ಸ್ಪರ್ಧಿಗಳು ಮಾಡಿರುವ ಆರೋಪಗಳಿಗೆ ವೈಷ್ಣವಿ ಕೂಡ ಕಿಚ್ಚನ ಪಂಚಾಯ್ತಿಯಲ್ಲಿ ತಿರುಗೇಟು ನೀಡಿದರು. ʻಇವರೆಲ್ಲ ಹೇಳಿದ ಹಾಗೆ ನಾನಿಲ್ಲ. ಆಟ ಆಡಬೇಕು ಅಂದಾಗ ನಾನು ನಿಂತಿದ್ದೀನಿ. ಸ್ವಿಮ್ಮಿಂಗ್ ಪೂಲ್ ವಿಷಯ ಬಂದಾಗಲೂ ಹಾಸಿಯಾ ವಿರುದ್ಧ ನಿಂತಿದ್ದೀನಿ. ಈ ಆಟದಲ್ಲಿ ಡಿಫೆಂಡರ್, ಪ್ರೊಟೆಕ್ಟರ್ ಆಗಿ ಆಡಬೇಕು. ನನಗೂ ಶಕ್ತಿ ಇದೆ, ಆಡ್ತೀನಿ ಅಂತ ಹೇಳಿದ್ದೀನಿ. ಈಗ ಇಷ್ಟ ಆಗ್ಲಿಲ್ಲ, ನನಗೂ ಚಾನ್ಸ್ ಕೊಡಿ, ಪ್ರೂವ್ ಮಾಡ್ತೀನಿ ಅಂತ ಹೇಳಿದ್ದೀನಿ. ನನ್ನನ್ನ ಶೋ ಪೀಸ್ ಅನ್ನೋಕೆ ಆ ಮನೆಯವರಿಗೆ ನನ್ನ ಬಗ್ಗೆ ಗೊತ್ತೇ ಇಲ್ಲ ಎಂದು ವೈಷ್ಣವಿ ಖಡಕ್ ಆಗಿಯೇ ಪ್ರತಿಕ್ರಿಯಿಸಿದರು.
ಇದಾ ಬಳಿಕ ವೈಷ್ಣವಿ ನಾಮಿನೇಟ್ ಆಗಿ ಬಿಗ್ ಬಾಸ್ ಮನೆ ಸೇರಿಕೊಂಡರು.

